
ಬೆಂಗಳೂru(ಫೆ.16): ಟೂಲ್‌ಕಿಟ್ ಪ್ರಕರಣ ಸಂಬಂಧ ವಿದ್ಯಾರ್ಥಿನಿ ಹಾಗೂ ಪರಿಸರ ಹೋರಾಟಗಾರ್ತಿ ದಿಶಾ ರವಿಯನ್ನು ದೆಹಲಿ ಪೊಲಿಸರ ವಿಶೇಷ ತಂಡ ಬಂಧಿಸಿದೆ. ಇದರ ಬೆನ್ನಲ್ಲೇ ದಿಶಾ ಬಂಧನಕ್ಕೆ ಖಂಡನೆ ವ್ಯಕ್ತವಾಗಿತ್ತು. ಸದ್ಯ ಕೆಪಿಸಿಸ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಇವರ ಬಂಧನಕ್ಕೆ ಆಕ್ರೋಶ ವ್ಯಕ್ತಪಡಿಸಿ, ಖಂಡಿಸಿದ್ದಾರೆ.
"
ಗ್ರೇಟಾ ಥನ್ಬರ್ಗ್ toolkit ಪ್ರಕರಣ; ನಿಖಿತಾ ವಿರುದ್ಧ ಜಾಮೀನು ರಹಿತ ವಾರೆಂಟ್!
ಈ ಸಂಬಂಧ ಟ್ವೀಟ್ ಮಾಡಿರುವ ಡಿ. ಕೆ. ಶಿವಕುಮಾರ್ ಇದು ಭಾರತದ ಯುವಕರ ನೈತಿಕ ಬಲವನ್ನು ದುರ್ಬಲಗೊಳಿಸುವ ಸೂಚನೆಯೇ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ದಿಶಾ ರವಿ ವಿರುದ್ಧ ಪೊಲೀಸ್ ಕ್ರಮ ಸರಿಯಲ್ಲ, 'ಟೂಲ್‌ಕಿಟ್' ಪಿತೂರಿಯನ್ನು ಬಳಸುವುದು ಕಾನೂನು ನಿಯಮಗಳನ್ನು ಉಲ್ಲಂಘಿಸುತ್ತದೆ. ಯುವತಿಯನ್ನು ಬಂಧಿಸುವ ಮೊದಲ ನ್ಯಾಯಾಲಯವನ್ನು ಏಕೆ ಸಂಪರ್ಕಿಸಬಾರದಿತ್ತು ? ದಿಶಾ ರವಿ ಅವರ ಪರ ಕಾಂಗ್ರೆಸ್ ನಿಲ್ಲಲಿದೆ ಎಂದಿದ್ದಾರೆ.
ದಿಶಾ ರವಿ ಬಂಧನ : ಬಸವರಾಜು ವಿ.ಶಿವಗಂಗಾ ವಿರೋಧ
ರೈತರ ಹೋರಾಟವನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ದೇಶದ ಮಾನ ಹರಾಜು ಹಾಕಿದ್ದಾರೆಂಬ ಗೂಗಲ್ ಕಿಟ್ ರೂವಾರಿ ಬೆಂಗಳೂರಿನ ದಿಶಾ ರವಿ ಅವರನ್ನು ದೆಹಲಿ ಪೊಲೀಸರು ಬಂಧಿಸಿರುವುದು ಸರಿಯಲ್ಲ ಎಂದು ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜು ವಿ.ಶಿವಗಂಗಾ ವಿರೋಧಿಸಿದರು.
ಗ್ರೆಟಾ ಥನ್ಬರ್ಗ್ ಟೂಲ್ ಕಿಟ್ ವಿವಾದ: ಬೆಂಗಳೂರಿನ ವಿದ್ಯಾರ್ಥಿನಿ ದಿಶಾ ರವಿ ಅರೆಸ್ಟ್!
ದಿಶಾ ರವಿ ಅವರನ್ನು ರಹಸ್ಯ ಕಾರ್ಯಾಚರಣೆ ಮೂಲಕ ಬಂಧಿಸಿರುವುದು ಸರಿಯಲ್ಲ. ಕೃಷಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಹೋರಾಟ ನಡೆಯುತ್ತಿದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಈ ಬಗ್ಗೆ ವರದಿಯಾಗಿದೆ. ಇದೀಗ ಥಂಬರ್ಗ್ ಹಂಚಿಕೊಂಡಿದ್ದ ಗೂಗಲ್ ಕಿಟ್ ಅನ್ನು ವೈರಲ್ ಆಗಲು ದಿಶಾ ರವಿ ಕಾರಣಕರ್ತರು ಎನ್ನಲಾಗಿರುವುದು ಸರಿಯಲ್ಲ. ಕೃಷಿ ಕಾಯ್ದೆ ವಿಚಾರವಾಗಿ ಈಗಾಗಲೇ ಭಾರತದ ಮಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗಿದೆ.
ಈಗಾಗಲೇ ವಿದೇಶದ ಸಾಮಾಜಿಕ ಹೋರಾಟಗಾರರು ಮೋದಿ ಸರ್ಕಾರದ ವಿರುದ್ಧ ಕೆಂಗಣ್ಣು ಬೀರಿದ್ದಾರೆ. ಈಗ ಮತ್ತೆ ದಿಶಾ ರವಿ ಬಂಧಿಸಿರುವುದು ಎಷ್ಟುಸರಿ ಎಂದು ಪ್ರಶ್ನಿಸಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಒಬ್ಬ ಮಹಿಳೆಗೆ ಮಾಡುತ್ತಿರುವ ಅವಮಾನವಾಗಿದ್ದು, ಬಂಧನ ಮಾಡಿರುವುದು ದೇಶದ ಮಹಿಳೆಯರಿಗೆ ಮಾಡುತ್ತಿರುವ ಅವಮಾನವಿದು ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ