ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಪ್ರಸಿದ್ಧ 6 ಲೇಖಕರು ಈ ಬಾರಿ ಮಾಸ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹಿರಿಯ ಲೇಖಕರಾದ ಡಾ.ಸಂಧ್ಯಾ ಎಸ್.ಪೈ , ಎಸ್.ಆರ್.ವಿಜಯ್‌ಶಂಕರ್ , ಪ್ರೊ.ಪುರುಷೋತ್ತಮ ಬಿಳಿಮಲೆ , ಸುಬ್ರಾಯ ಚೊಕ್ಕಾಡಿ , ಕೇಶವರೆಡ್ಡಿ ಹಂದ್ರಾಳ , ಸ.ರಘುನಾಥ ಅವರು ಆಯ್ಕೆಯಾಗಿದ್ದಾರೆ.
ಬೆಂಗಳೂರು (ಫೆ.16): ಸಾಹಿತ್ಯ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ವ್ಯಕ್ತಿಗಳಿಗೆ ‘ಮಾಸ್ತಿ ವೆಂಕಟೇಶ ಅಯ್ಯಂಗಾರ್ ಟ್ರಸ್ಟ್ ಕೊಡಮಾಡುವ 2020ನೇ ಸಾಲಿನ ‘ಮಾಸ್ತಿ ಪ್ರಶಸ್ತಿ’ ಪುರಸ್ಕೃತರ ಪಟ್ಟಿ ಬಿಡುಗಡೆಯಾಗಿದೆ.
ಹಿರಿಯ ಲೇಖಕರಾದ ಡಾ.ಸಂಧ್ಯಾ ಎಸ್.ಪೈ (ಶಿಶು ಸಾಹಿತ್ಯ), ಎಸ್.ಆರ್.ವಿಜಯ್‌ಶಂಕರ್ (ವಿಮರ್ಶೆ), ಪ್ರೊ.ಪುರುಷೋತ್ತಮ ಬಿಳಿಮಲೆ (ಸಂಶೋಧನೆ), ಸುಬ್ರಾಯ ಚೊಕ್ಕಾಡಿ (ಕಾವ್ಯ), ಕೇಶವರೆಡ್ಡಿ ಹಂದ್ರಾಳ (ಕಥೆ), ಸ.ರಘುನಾಥ (ಸೃಜನಶೀಲ) ಅವರು 2020ನೇ ಸಾಲಿನ ಮಾಸ್ತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
86ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ದೊಡ್ಡರಂಗೇಗೌಡ್ರು ಆಯ್ಕೆ..! ..
ಪ್ರಶಸ್ತಿ ಪುರಸ್ಕೃತರಿಗೆ ಮಾರ್ಚ್ 27ರಂದು ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ಮಾಸ್ತಿ ಪ್ರಶಸ್ತಿ ಮತ್ತು ಫ ಲಕ, ತಲಾ25 ಸಾವಿರ ರು.ಗಳ ನಗದು ನೀಡಿ ಸತ್ಕರಿಸಲಾಗು ವುದು ಎಂದು ಟ್ರಸ್‌ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನ ಮುಂದಕ್ಕೆ..ಹೊಸ ದಿನಾಂಕ ಯಾವಾಗ? ..
ಪ್ರಶಸ್ತಿ ಪುರಸ್ಕೃತರ ಆಯ್ಕೆ ಸಮಿತಿಯಲ್ಲಿ ಅಧ್ಯಕ್ಷರಾಗಿ ಮಾವಿನಕೆರೆ ರಂಗನಾಥನ್, ಸದಸ್ಯರಾಗಿ ಪ್ರೊ.ಎಂ.ಎಚ್.ಕೃಷ್ಣಯ್ಯ, ಜಿ.ಎನ್.ರಂಗನಾಥ್ ರಾವ್, ಬಿ.ಆರ್.ಲಕ್ಷ್ಮಣರಾವ್ ಕಾರ್ಯದರ್ಶಿ ಡಿ.ಎಂ.ರವಿಕುಮಾರ್ ಮತ್ತಿರರು ಇದ್ದರು.