ಕಾಂಗ್ರೆಸ್ ನಲ್ಲಿ ಮಾತ್ರ ಗಾಂಧಿಯಂಥ ಆದರ್ಶ ವ್ಯಕ್ತಿಗಳು ಸಿಗುತ್ತಾರೆ : ಡಿಕೆಶಿ

Suvarna News   | Asianet News
Published : Oct 02, 2021, 01:54 PM ISTUpdated : Oct 02, 2021, 02:20 PM IST
ಕಾಂಗ್ರೆಸ್ ನಲ್ಲಿ ಮಾತ್ರ ಗಾಂಧಿಯಂಥ ಆದರ್ಶ ವ್ಯಕ್ತಿಗಳು ಸಿಗುತ್ತಾರೆ : ಡಿಕೆಶಿ

ಸಾರಾಂಶ

ಹುಟ್ಟು ಮತ್ತು ಸಾವಿನ‌‌ ನಡುವೆ ಇರುವ ಬದುಕಿಗೆ ಒಂದು ಅರ್ಥ ಸಿಗಬೇಕು ಮಹಾತ್ಮ ಗಾಂಧಿ ಅವರ ಜನ್ಮ ದಿನವಾಗಿದ್ದು, ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಆಗಿದ್ದು ನಮ್ಮ ಸೌಭಾಗ್ಯ

ಬೆಂಗಳೂರು (ಅ.02): ಹುಟ್ಟು ಮತ್ತು ಸಾವಿನ‌‌ ನಡುವೆ ಇರುವ ಬದುಕಿಗೆ ಒಂದು ಅರ್ಥ ಸಿಗಬೇಕು. ಇಂದು ಮಹಾತ್ಮ ಗಾಂಧಿ (Mahathma Gandhiji) ಅವರ ಜನ್ಮ ದಿನವಾಗಿದ್ದು, ಅವರು ಕಾಂಗ್ರೆಸ್ (Congress) ಪಕ್ಷದ ಅಧ್ಯಕ್ಷರು ಆಗಿದ್ದು ನಮ್ಮ ಸೌಭಾಗ್ಯ  ಎಂದು ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೇಳಿದರು. 

ಬೆಂಗಳೂರಿನಲ್ಲಿಂದು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಂದು ನಾವೆಲ್ಲರೂ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ(Lal bahadur Shastri)  ಅವರನ್ನು ನೆನೆಸಿಕೊಳ್ಳುತ್ತಿದ್ದೇವೆ.  ಗಾಂಧೀಜಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು.  ಬಿಜೆಪಿ (BJP) ಹಾಗೂ ಜೆಡಿಎಸ್ ಅವರಿಗೆ ಈ ಸೌಭಾಗ್ಯ ಸಿಗುತ್ತದೆಯೇ ಎಂದರು. 

ರಾಜಕಾರಣಿಗಳಿಗೆ ಸಾರ್ವಕಾಲಿಕ ಮಾದರಿ ಲಾಲ್‌ ಬಹದ್ದೂರ್‌ ಶಾಸ್ತ್ರಿ

ಬಿಜೆಪಿ ಹಾಗೂ ಜೆಡಿಎಸ್‌ನ (JDS) ಇವರೆಲ್ಲರೂ ನಾವು ಗಾಂಧೀಜಿ ಅವರ ಆದರ್ಶದಂತೆ ಬದುಕಲು ಸಾಧ್ಯವೇ, ಇತ್ತೀಚೆಗೆ ರಾಜೀವ್ ಗಾಂಧಿ ಹಾಗೂ ಇಂದಿರಾ ಗಾಂಧಿಯವರನ್ನು (Indira Gandhi) ಕಳೆದುಕೊಂಡೆವು. ಅವರ ಆದರ್ಶದಂತೆ ಇವೆರಲ್ಲರು ಬದುಕಲು ಆಗಲ್ಲ ಎಂದು ಪರೋಕ್ಷ ಟಾಂಗ್ ನೀಡಿದರು.

ಅಧಿಕಾರ ಇಂದು ಇರುತ್ತದೆ ನಾಳೆ ಹೋಗುತ್ತದೆ. ಆದರೆ ಕಾಂಗ್ರೆಸ್ ನಲ್ಲಿ ಇಂತಹ ಆದರ್ಶ ವ್ಯಕ್ತಿಗಳ ಆದರ್ಶ ಸಿಗುವ ಸೌಭಾಗ್ಯ ನಮಗೆ ಮಾತ್ರ ಇದೆ. ಸ್ವಾತಂತ್ರ್ಯ ಬಂದು ಈಗ 75 ವರ್ಷ ಆಗಿದೆ. ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ (Gram Swataj) ಯೋಜನೆಯ ಪರಿಕಲ್ಪನೆ ಇನ್ನಾದರೂ ಇದೆ ಎಂದರು.

ಸಿದ್ದರಾಮಯ್ಯ (Siddaramaiah) ಹಾಗೂ ನಾವು ಗ್ರಾಮ ಸ್ವರಾಜ್ಯದ ಬಗ್ಗೆ ಚರ್ಚೆ ಮಾಡಿದ್ದು, ಈ ತಿಂಗಳು ಪ್ರತಿ ಗ್ರಾಮ ಪಂಚಾಯತಿಯಲ್ಲಿ ಗಾಂಧೀಜಿ ಕಲ್ಪನೆ ತಿಳಿಸಬೇಕು. 6 ಸಾವಿರ ಪಂಚಾಯತಿ, 8 ಸಾವಿರ ವಾರ್ಡ್ ಗಳಲ್ಲಿ ಗಾಂಧೀಜಿ ಪರಿಕಲ್ಪನೆ ತಿಳಿಸುವುದು. ಸಭೆ ಮತ್ತು ಹೋರಾಟ ಮಾಡುವ ಕಾರ್ಯಕ್ರಮ ನಡೆಯಲಿದೆ. ಪ್ರತಿಯೊಬ್ಬ ಕಾರ್ಯಕರ್ತ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ‌ಗೌರವ‌ ಇಟ್ಟುಕೊಳ್ಳಬೇಕು ಎಂದು ಡಿಕೆ ಶಿವಕುಮಾರ್ ಹೇಳಿದರು.

ಗಾಂಧೀಜಿಯ ಸರಳ ಅರ್ಥಶಾಸ್ತ್ರ ಇಂದಿನ ಕಾಲಕ್ಕೂ ಏಕೆ ಮುಖ್ಯ?

ರೈತರ ಪ್ರತಿಭಟನೆ ವಿಚಾರ : ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ವಿಚಾರ ನಮಗೆ ಗೊತ್ತಿದೆ. ಹತ್ತು ತಿಂಗಳಿಂದಲೂ ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತರ ಹೋರಾಟ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಇದುವರೆಗೂ ಏನು ಆಗುತ್ತಿದೆ ಎಂದು ರೈತರನ್ನು ಮಾತನಾಡಿಸುವ ಯತ್ನ ಮಾಡಿಲ್ಲ. ರೈತರ ಮಾರ್ಗದರ್ಶನದಂತೆ ಹೋರಾಟಕ್ಕೆ ಸಜ್ಜಾಗಬೇಕಾಗಿದೆ ಎಂದರು. 

ಈ ದೇಶಗಳಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತಂದು ಜನರ ರಕ್ಷಣೆ ಮಾಡಬೇಕು. "ನಿನಗೆ ನೀನು‌‌ ಕಂಟ್ರೋಲ್ ಮಾಡುವಾಗ ತಲೆ‌ ಉಪಯೋಗಿಸಬೇಕು. ನೀನು ಬೇರೆಯವರನ್ನು ಕಂಟ್ರೋಲ್  ಮಾಡುವಾಗ ಹೃದಯ ಉಪಯೋಗಿಸಿ" ಎಂದು ಗಾಂಧೀಜಿ ಅಂದೇ ಹೇಳಿದ್ದರೆಂದರು.

ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ವಿಚಾರ : ಇಡೀ ದೇಶಕ್ಕೆ ದೊಡ್ಡ ಅಪಾಯ NEPನಲ್ಲಿ ಅಡಗಿದೆ. ಇಂಜಿನಿಯರ್ , ಡಾಕ್ಟರೇಟ್ ನೋಡಿ ಬೆಂಗಳೂರಿಗೆ (Bengaluru) ಬರುತ್ತಿದ್ದಾರೆ. ಈಗ ತರುತ್ತಿರುವ ಶಿಕ್ಷಣ ಪಾಲಿಸಿಯಲ್ಲಿ ಮತ್ತೇ ಪುರಾತನಕ್ಕೆ ಹೋಗಬೇಕು. ಮನಮೋಹನ್ ಸಿಂಗ್ (Manmohan Singh) ಸೇರಿದಂತೆ ಸಾಕಷ್ಟು ನಾಯಕರಿದ್ದಾಗ ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಉತ್ತಮವಾಗಿತ್ತು. ಮೋದಿ ಆಡಳಿತದಲ್ಲಿ ಆರ್ಥಿಕತೆ ಬಿದ್ದು ಹೋಗಿದೆ. ನಮ್ಮ ದೇಶದಕ್ಕೆ ಆರ್ಥಿಕ ತಜ್ಞರು ಬೇಕಾಗಿದ್ದಾರೆ. ಇದೆನೆಲ್ಲಾ ಬಿಟ್ಟು NEP ಶಿಕ್ಷಣ ತಂದು ಗುರುಕುಲಕ್ಕೆ ಹೋಗುತ್ತಿದ್ದಾರೆ ಎಂದರು ಅಸಮಾಧಾನ ಹೊರಹಾಕಿದರು.

ಗುಜರಾತ್ (Gujarath) ಹಾಗೂ ಮಧ್ಯಪ್ರದೇಶದಲ್ಲಿ ಹೊಸ ಶಿಕ್ಷಣ ನೀತಿ ತಂದಿಲ್ಲ. ನಮ್ಮಲ್ಲಿ ಅರ್ಥ ಆಗುತ್ತಾ ಎಂದು ಅಧಿಕಾರಿಗಳ ಬಳಿ ಕೇಳಿದ್ದೆ. ಅದಕ್ಕವರು ಹತಾಶೆ ಉತ್ತರ ನೀಡಿದ್ದರು. ನಮಗೂ ಏನು ಅರ್ಥ ಆಗುತ್ತಿಲ್ಲ ಎಂದಿದ್ದಾಗಿ  ಡಿ.ಕೆ.ಶಿವಕುಮಾರ್ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿಗೆ ಜೈಲೇ ಗತಿ, ಜಾಮೀನು ಅರ್ಜಿ ತಿರಸ್ಕೃತ