ಮಂಡ್ಯ (ಅ.02): ಆಡಳಿತವನ್ನು ಗ್ರಾಮೀಣ ಜನರ (Rural People) ಬಳಿಗೆ ಕೊಂಡೊಯ್ಯುವ ಸಲುವಾಗಿ ನಡೆಸುತ್ತಿದ್ದ ಜಿಲ್ಲಾಧಾಕಾರಿಗಳ ಗ್ರಾಮವಾಸ್ತವ್ಯವನ್ನು ಮತ್ತೆ ಪ್ರಾರಂಭಿಸುವಂತೆ ಕಂದಾಯ ಸಚಿವ ಆರ್.ಅಶೋಕ (R Ashok) ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದಲ್ಲಿ ಕಂದಾಯ ಇಲಾಖೆ ಪ್ರಗತಿ ಇಲಾಖೆ ಸಭೆಯಲ್ಲಿ ಮಾತನಾಡಿದ ಅವರು ಕೊರೋನಾ ಮೂರನೇ ಅಲೆ ಎದುರಾಗುವ ಸಾಧ್ಯತೆಗಳು ಕ್ಷೀಣಿಸಿರುವುದರಿಂದ ಜಿಲ್ಲಾಧಿಕಾರಿಗಳು ಮತ್ತೆ ಗ್ರಾಮ ವಾಸ್ತವ್ಯದೊಂದಿಗೆ ಕಂದಾಯ ಅದಾಲತ್ ಕಾರ್ಯಕ್ರಮಗಳಿಗೆ ಚಾಲನೆ ನೀಡಬೇಕು. ಗ್ರಾಮಗಳಲ್ಲಿರುವ ಸಮಸ್ಯೆಗಳಿಗೆ ಅಲ್ಲೇ ಪರಿಹಾರ ಸೂಚಿಸುವಂತೆ ಜಿಲ್ಲಾಧಿಕಾರಿ ಅಶ್ವತಿಗೆ ತಿಳಿಸಿದರು.
undefined
ಉತ್ತರ ಕರ್ನಾಟಕ ಜನರು ತೋರಿದ ಪ್ರೀತಿಗೆ ನಾನು ಋಣಿ: ಸಚಿವ ಅಶೋಕ್
ಈ ಮೂಲಕ ಕೊರೋನಾ (Covid 19) ಮೂರನೇ ಅಲೆಯಲ್ಲಿ ನಿಂತಿದ್ದ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮ ಮತ್ತೆ ಚುರುಕಾಗುವ ಸಾಧ್ಯತೆಗಳಿವೆ.
ಮತಾಂತರ ಮಾಡುವವರು ದೇಶದ್ರೋಹಿಗಳು: ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್, ಆಮಿಷವೊಡ್ಡಿ ಬಲವಂತವಾಗಿ ಮತಾಂತರ ಮಾಡುವವರು ಸಮಾಜಘಾತುಕರು, ದೇಶದ್ರೋಹಿಗಳು ಹಾಗೂ ಧರ್ಮದ್ರೋಹಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು. ಮತಾಂತರ ಒಂದು ಹೀನ ಕೆಲಸ. ಇದೊಂದು ಪಿಡುಗಾಗಿ ಕಾಡುತ್ತಿದೆ. 1 ಮತಾಂತರಕ್ಕೆ 50 ಸಾವಿರ ರು.ನಿಂದ 1 ಲಕ್ಷ ರು. ನೀಡಲಾಗುತ್ತಿದೆ. ವಿದೇಶದಿಂದ ಮತಾಂತರಕ್ಕೆ ಹಣ ಹರಿದು ಬರುತ್ತಿದೆ ಎಂದು ಆರೋಪಿಸಿದರು.
ಇದೇ ವೇಳೆ ಜಾತಿ ಗಣತಿ ವಿಚಾರವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಸರ್ಕಾರಕ್ಕೆ ವರದಿ ಬಿಡುಗಡೆ ಮಾಡುವ ಧೈರ್ಯವಿಲ್ಲ ಎನ್ನುತ್ತಿರುವವರು ಇವರ ಕಾಲದಲ್ಲೇ ಜಾತಿ ಗಣತಿ ವರದಿ ನಡೆದು ಅಂತಿಮಗೊಂಡಿದ್ದರೂ ಏಕೆ ಬಿಡುಗಡೆ ಮಾಡಲಿಲ್ಲ. ಆಗ ಇವರಿಗೆ ಧೈರ್ಯವಿರಲಿಲ್ಲವೇ ಎಂದು ಪ್ರಶ್ನಿಸಿದರು.
ಸಚಿವರ ಹಿಂದಿನ ವಾಸ್ತವ್ಯದಲ್ಲಿ ಸಮಸ್ತೆ ಇತ್ಯರ್ಥ
ಜಿಲ್ಲೆಗಳಲ್ಲಿ ‘ಜನರ ಮನೆ ಬಾಗಿಲಿಗೆ ಜಿಲ್ಲಾಡಳಿತ’ ಎಂಬ ಘೋಷ ವಾಕ್ಯದಡಿ ಆಯೋಜಿಸಿರುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಅಂಗವಾಗಿ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ವಾಸ್ತವ್ಯಕ್ಕಾಗಿ ಆಗಮಿಸಿದ ಕಂದಾಯ ಸಚಿವ ಆರ್. ಅಶೋಕ್ ಅವರನ್ನು ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದರು.
ಸ್ಥಳದಲ್ಲಿಯೇ ಹೈಸ್ಕೂಲ್ ಮಂಜೂರು, ಚರಂಡಿ ನಿರ್ಮಾಣಕ್ಕೆ ಹಣ ಮಂಜೂರು, ಅಂಬೇಡ್ಕರ್ ಕಾಲನಿಗೆ ಎರಡು ಎಕರೆ ಜಮೀನು ಮಂಜೂರು.... ಹೀಗೆ ಹತ್ತಾರು ಸಮಸ್ಯೆಗಳನ್ನು ಕಂದಾಯ ಸಚಿವ ಆರ್.ಆಶೋಕ್ ಅವರು ಸ್ಥಳದಲ್ಲಿಯೇ ಪರಿಹರಿಸಿದರು.