
ಕೊಪ್ಪಳ, (ಮೇ.27): 'ಶಿವರಾಜ್ ತಂಗಡಗಿ ಮೂರು ಬಿಟ್ಟೋನು, ಸರಿಯಾಗಿ ಕನ್ನಡ ಓದಲು ಬರೆಯಲು ಬರಲಾರದ ಮಂತ್ರಿ ಮಂತ್ರಿ ಶೋಕಿ ಮಾಡ್ತಾನೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಮಾಜಿ ಶಾಸಕ ಬಸವರಾಜ್ ದಡೇಸಗೂರು ತೀವ್ರ ವಾಗ್ದಾಳಿ ನಡೆಸಿದರು.
ಗನ್ ಮ್ಯಾನ್ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಮಾಜಿ ಶಾಸಕ ದಡೇಸಗೂರು,ಶೋಕಿಗೆ ಗನ್ ಮ್ಯಾನ್ ಕೇಳ್ತಾನೆ, ಆತನಿಗೆ ಮಾನ ಮರ್ಯಾದೆ ಇದೆಯಾ, ನನಗೆ ಜ್ಞಾನ ಇದೆಯಾ ಅಂತಾ ಕೇಳ್ತಾನೆ. ತಿಳ್ಕೊ, ನಾನು ಸೋತಿರಬಹುದು ಮತ್ತೆ ಗೆಲ್ಲುವೆ. ಮಾನ-ಮಾರ್ಯಾದೆ ಇದ್ರೆ ಆ ಮನುಷ್ಯ ಮಾತಾಡಬಾರದು ಎಂದು ಕಿಡಿಕಾರಿದರು.
ಗುಪ್ತಚರ ಇಲಾಖೆಯಿಂದ ಮಾಹಿತಿ ಬಂದಿದ್ದರೂ ಅಧಿಕಾರಿಗಳು ಗನ್‌ಮ್ಯಾನ್ ನೀಡಿಲ್ಲ ಎಂದು ದೂರಿದರು. ನನಗೆ ಕಾನೂನು ಚೌಕಟ್ಟಿನಲ್ಲಿ ಗನ್ ಮ್ಯಾನ್ ಕೊಡಲಿ.ಗುಪ್ತ ಚರ ಇಲಾಖೆ ಅಧಿಕಾರಿಗಳು ಗನ್ ಮ್ಯಾನ್ ನೀಡಲು ಮಾಹಿತಿ ಕೊಟ್ಟಿದ್ದಾರೆ. ಗನ್‌ಮ್ಯಾನ್ ಕೊಡದಿದ್ದರೆ ಕೋರ್ಟ್‌ಗೆ ಹೋಗುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಕೊಪ್ಪಳದ ರಾಜಕೀಯ ವಲಯದಲ್ಲಿ ಈ ವಾಗ್ವಾದ ತೀವ್ರ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಬೆಳವಣಿಗೆಗಳು ಏನಾಗಲಿವೆ ಎಂಬುದು ಕುತೂಹಲ ಕೆರಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ