ಕೊಪ್ಪಳದ ಪ್ರೌಢಶಾಲಾ ಮಕ್ಕಳಿಗೆ ಕನ್ನಡವನ್ನೂ ಓದಲು ಬರೆಯಲು ಬರೊಲ್ಲ; ಇಂಗ್ಲೀಷ್, ಗಣಿತ ಲೆಕ್ಕಕ್ಕಿಲ್ಲ!

Published : Dec 17, 2024, 04:34 PM ISTUpdated : Dec 17, 2024, 04:35 PM IST
ಕೊಪ್ಪಳದ ಪ್ರೌಢಶಾಲಾ ಮಕ್ಕಳಿಗೆ ಕನ್ನಡವನ್ನೂ ಓದಲು ಬರೆಯಲು ಬರೊಲ್ಲ; ಇಂಗ್ಲೀಷ್, ಗಣಿತ ಲೆಕ್ಕಕ್ಕಿಲ್ಲ!

ಸಾರಾಂಶ

ಕೊಪ್ಪಳ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಓದಲು ಮತ್ತು ಬರೆಯಲು ಬಾರದಿರುವುದು ಶಿಕ್ಷಣ ಇಲಾಖೆಯ ಸಮೀಕ್ಷೆಯಿಂದ ಬಹಿರಂಗವಾಗಿದೆ. 9ನೇ ತರಗತಿಯ ಸುಮಾರು 18,220 ವಿದ್ಯಾರ್ಥಿಗಳ ಪೈಕಿ 5,287 ವಿದ್ಯಾರ್ಥಿಗಳಿಗೆ ಓದಲು ಮತ್ತು 7,641 ವಿದ್ಯಾರ್ಥಿಗಳಿಗೆ ಬರೆಯಲು ಬರುವುದಿಲ್ಲ. ಪ್ರಾಥಮಿಕ ಶಾಲಾ ಶಿಕ್ಷಕರು ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿ ತೊಡಗಿರುವುದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಕೊಪ್ಪಳ (ಡಿ.17): ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡಿಗರದ್ದೇ ಭಾಷೇ ಅಂತಿಮ ಎಂಬ ಮಾತು ಕನ್ನಡ ಭಾಷೆ ಬಿಟ್ಟರೆ ಬೇರಾವ ಭಾಷೆಯೂ ಬಾರದ ಕೊಪ್ಪಳದ ಹೈಸ್ಕೂಲ್ ಮಕ್ಕಳಲ್ಲಿ ಕಾಣೆಯಾಗಿದೆ. ಪ್ರೌಢಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಇಂಗ್ಲೀಷ್ ಹಾಗೂ ಗಣಿತವಿರಲಿ, ಮಾತೃ ಭಾಷೆ ಕನ್ನಡವೇ ಓದಲು, ಬರೆಯಲು ಬರುವುದಿಲ್ಲ.

ಮಧ್ಯ ಕರ್ನಾಟಕದಲ್ಲಿರುವ ಹೈದರಾಬಾದ್ ಕರ್ಬಾಟಕದ ಕೊಪ್ಪಳ ಜಿಲ್ಲೆಯಲ್ಲಿ ಕನ್ನಡ ಭಾಷಿಕರೇ ಹೆಚ್ಚಾಗಿದ್ದಾರೆ. ಶೇ.80ಕ್ಕೂ ಹೆಚ್ಚು ಜನರು ಕನ್ನಡವನ್ನೇ ಮಾತೃಭಾಷೆಯಾಗಿ ಹೊಂದಿದ್ದಾರೆ. ಇನ್ನು ಮಕ್ಕಳಿಗೆ ಮಾತೃ ಭಾಷೆಯಲ್ಲಿಯೇ ಶಿಕ್ಷಣ ನೀಡುತ್ತಿದ್ದರೂ, 9 ವರ್ಷಗಳ ಶಾಲಾ ಶಿಕ್ಷಣದ ಬಳಿಕವೂ ಮಕ್ಕಳಿಗೆ ಮಾತೃಭಾಷೆಯಾದ ಕನ್ನಡವನ್ನೂ ಓದಲು, ಬರೆಯಲು ಬರುತ್ತಿಲ್ಲ. ಇಂತಹ ಮಕ್ಕಳು ಎಸ್‌ಎಸ್‌ಎಲ್‌ಸಿಗೆ ಬಂದು ಬೋರ್ಡ್ ಪರೀಕ್ಷೆಯನ್ನು ಪಾಸ್ ಮಾಡುವುದಾದರೂ ಹೇಗೆ ಎಂದು ಪ್ರೌಢಶಾಲಾ ಶಿಕ್ಷಕರು ಚಿಂತನೆಯಲ್ಲಿ ಮುಳುಗಿದ್ದಾರೆ.

ಹೌದು, ಕೊಪ್ಪಳದಲ್ಲಿ ಮೆಟ್ರಿಕ್ ಓದುವ ಮಕ್ಕಳಿಗೆ ಕನ್ನಡ ಓದಲು ಬರೆಯಲು ಬರೋದಿಲ್ಲ. ಅದರಲ್ಲಿಯೂ ಗಣಿತವಂತೂ ಕಬ್ಬಿಣ ಕಡಲೆ. ಕೊಪ್ಪಳ ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಅಕ್ಷರ ಜ್ಞಾನ ಸಿಗುತ್ತಿಲ್ಲ. ಶಿಕ್ಷಣ ಇಲಾಖೆಯ ಸಮಿಕ್ಷೆಯಲ್ಲಿ ಈ ಆತಂಕದ ಮಾಹಿತಿ ಬಹಿರಂಗವಾಗಿದೆ. ಇಲ್ಲಿ 9ನೇ ತರಗತಿಯಲ್ಲಿ ಒಟ್ಟು 18,220 ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ 5,287 ಮಕ್ಕಳಿಗೆ ಓದಲು, 7,641 ಬರೆಯಲು ಬರುವುದಿಲ್ಲ. ಇನ್ನು ದ್ವಿತೀಷ ಭಾಷೆ ಇಂಗ್ಲಿಷ್ ಅನ್ನು 7,489 ಓದಲು, 5,869 ಬರೆಯಲು ಕೂಡ ಬರೋದಿಲ್ಲ. ಇವರಿಗೆ ಗಣಿತ ಲೆಕ್ಕಾಚಾರವಂತೂ ದೂರದ ಮಾತು.

ಇದನ್ನೂ ಓದಿ: 

ಸರಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ಪ್ರಾಥಮಿಕ ಶಾಲೆಗಳಲ್ಲಿ ಸರಿಯಾದ ಶಿಕ್ಷಣ ಸಿಗುತ್ತಿಲ್ಲ ಎಂಬ ಗಣನೀಯ ಆರೋಪ ಕೇಳಿಬಂದಿತ್ತು. ಹೀಗಾಗಿ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಿಸಲ್ಟ್  ಉತ್ತಮವಾಗಿ ನೀಡಲು ಆಗುತ್ತಿಲ್ಲ. ಪ್ರಾಥಮಿಕ ಶಾಲಾ ಹಂತದಲ್ಲಿ ಉತ್ತಮ ಶಿಕ್ಷಣ ನೀಡಬೇಕು ಎಂದು ಆಗ್ರಹ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಮೀಕ್ಷೆಯೊಂದನ್ನು ಮಾಡಲಾಗಿದ್ದು, ಪ್ರಾಥಮಿಕ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.

ಇನ್ನು ಪ್ರಾಥಮಿಕ ಶಿಕ್ಷಕರು ಹೇಳುವುದೇನೆಂದರೆ ನಾವು ಪ್ರಾಥಮಿಕ ಶಿಕ್ಷಕರಾಗಿ ಶಾಲಾ ಶಿಕ್ಷಣಕ್ಕಿಂತ ಬಸಿಯೂಟ ಸೇರಿ ವಿವಿಧ ಸರ್ಕಾರಿ ಯೋಜನೆಗಳನ್ನು ಅನುಷ್ಠಾನ ಮಾಡುವುದರಲ್ಲಿಯೇ ನಮ್ಮ ಸೇವಾ ಅವಧಿ ಮುಕ್ತಾಯ ಆಗುತ್ತದೆ. ಇನ್ನು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯವೆಂದು ತಿರುಗೇಟು ನೀಡಿದ್ದಾರೆ. ನಾವು ಪ್ರಾಥಮಿಕ ಶಾಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕೆಂದರೆ ಸರ್ಕಾರದ ಎಲ್ಲ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಅನುಷ್ಠಾಕ್ಕೆ ಪ್ರಾಥಮಿಕ ಶಾಲಾ ಶಿಕ್ಷಕರನ್ನು ನಿಯೋಜನೆ ಮಾಡುವುದರಿಂದ ಮುಕ್ತಿ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಕ್ಸ್ ಡಬ್ಬಿ ನುಂಗಿ ಮಗು ಸಾವು; 18 ವರ್ಷ ವ್ರತದ ಬಳಿಕ ಹುಟ್ಟಿದ ಕಂದಮ್ಮ 2 ವರ್ಷವೂ ಬದುಕಲಿಲ್ಲ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!