
ಕೋಲಾರ (ನ.5): ನಮ್ಮಲ್ಲಿ ಕನ್ನಡ ಬಾವುಟವನ್ನೇ ಹಾರಿಸದೆ ಕನ್ನಡ ರಾಜ್ಯೋತ್ಸವ ನಡೆಯಿತು. ಕನ್ನಡದ ಬಗ್ಗೆ ಎಷ್ಟು ನಿರ್ಲಕ್ಷ್ಯ ಎಂದು ಸಂಸದ ಮುನಿಸ್ವಾಮಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಂಸದರು, ಸುರ್ಜೇವಾಲ, ವೇಣುಗೋಪಾಲ ಇವರು ರಾಜ್ಯಕ್ಕೆ ಬರುವುದು ಹಫ್ತಾ ವಸೂಲಿ ಮಾಡೋಕೆ. ಯರ್ ಗೋಳ ಡ್ಯಾಂ ನಮ್ಮ ಸರ್ಕಾರದ ಅವಧಿಯಲ್ಲಿ ನಡೆದದ್ದು. ತಮ್ಮದೆಂದು ಹೇಳಿಕೊಳ್ಳುವ ಇವರು, ನಾಲಗೆ ಮೇಲೆ ನಂಬಿಕೆ ಇದ್ದರೆ ರೈತರ ಸಮಸ್ಯೆಗಳನ್ನು ಪರಿಹರಿಸಲಿ. ರೈತರು ಈ ಸರ್ಕಾರದ ವಿರುದ್ಧ ದಿನನಿತ್ಯ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ಬಂದ ಮೇಲೆ ರಾಜ್ಯಕ್ಕೆ ಬರ:
ಈ ಸರ್ಕಾರದ ಕಾಲ್ಗುಣ ಹೇಗಿದೆ ಅಂದ್ರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ರಾಜ್ಯಕ್ಕೆ ಬರ ಬಂತು. ಸುಳ್ಳು ಭರವಸೆ ಹೇಳಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ, ಅಧಿಕಾರ ಸಿಕ್ಕ ಬಳಿಕ ರೈತರನ್ನು ನಿರ್ಲಕ್ಷ್ಯ ಮಾಡಲಾಯಿತು. ರಾಜ್ಯಾದ್ಯಂತ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬರಗಾಲ ತೀವ್ರವಾಗಿದೆ ಈವರೆಗೆ ಯಾವ ರೈತರಿಗೂ ಪರಿಹಾರ ಇರಲಿ, ಕನಿಷ್ಟ ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಪಕ್ಷ ಮನೆಯೊಂದು ನಾಲ್ಕು ಬಾಗಿಲು ಆಗಿದೆ: ಸಂಸದ ಮುನಿಸ್ವಾಮಿ
ಅಧಿಕಾರಕ್ಕೆ ಬರ್ತಿದ್ದಂತೆ ಕಮಿಷನ್, ಲೂಟಿ ಹೊಡೆಯುವ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ ನೂರಾರು ಕೋಟಿ ಹಣ ಸರ್ಕಾರಿ ಮನೆಯಲ್ಲಿ ಸಿಕ್ಕಿದೆ. ಇದನ್ನ ನೋಡಿದ್ರೆ ಗೊತ್ತಾಗುತ್ತೆ ಇವರ ಸರ್ಕಾರ ಏನು ಮಾಡುತ್ತಿದೆ. ಹೊಸ ಸರ್ಕಾರ ಬಂದ ಮೇಲೆ ಜಿಲ್ಲೆಗೆ ಏನು ತಂದಿದ್ದಾರೆ ಹೇಳಲಿ? ಕೋಲಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರೈತರಿಗೂ ಮೋಸ, ಇತ್ತ ದಲಿತರಿಗೂ ಮೊಸ ಮಾಡುತ್ತಿರುವ ಸರ್ಕಾರ ಇದು. ಇಂಥ ಸರ್ಕಾರ ಹೆಚ್ಚು ದಿನ ಉಳಿಯೋದಿಲ್ಲ. ಉಳಿಯಲುಬಾರದು.
ರೈತರಿಗೋಸ್ಕರ ಜೈಲಿಗೆ ಹೋಗಲೂ ಸಿದ್ಧ: ಸಂಸದ ಮುನಿಸ್ವಾಮಿ
ಸಿಎಂ ಸ್ಥಾನಕ್ಕಾಗಿ ತಾವು ತಾವೇ ಬಡಿದುಕೊಳ್ತಿದ್ದಾರೆ. ರಾಜ್ಯದ ಸಮಸ್ಯೆಗಳನ್ನು ಮರೆತು ಬೆಳಗ್ಗೆ, ಸಂಜೆ, ಡಿನ್ನರ್ ಸಭೆಗಳ ಮುಖಾಂತರ ಸರ್ಕಾರ ಉಳಿಸಿಕೊಳ್ಳೋದ್ರಲ್ಲೇ ಬ್ಯುಸಿ ಆಗಿದ್ದಾರೆ ಎಂದು ಸರ್ಕಾರದ ವಿರುದ್ಧ ಸಂಸದ ಮುನಿಸ್ವಾಮಿ ವಾಗ್ದಾಳಿ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ