
ಕೋಲಾರ ಜು.31): ಟೊಮೆಟೋ ದರ ಭಾರೀ ಏರಿಕೆ ಕಾಣುತ್ತಿದ್ದಂತೆ ಜಮೀನಿನಲ್ಲಿದ್ದ ಬೆಳೆ ಕಳ್ಳತನದ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿರುವ ನಡುವೆಯೇ ಇದೀಗ ಕೋಲಾರದ ಎಪಿಎಂಸಿಯಿಂದ ಸುಮಾರು .21 ಲಕ್ಷ ಮೌಲ್ಯದ ಟೊಮೆಟೋ ಹೊತ್ತು ರಾಜಸ್ಥಾನ ಕಡೆ ಹೊರಟಿದ್ದ ಲಾರಿಯೇ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಟೊಮೆಟೋ ಕಳೆದ ಎರಡು ತಿಂಗಳಿಂದ ತನ್ನ ದರ ಏರಿಸಿಕೊಳ್ಳುತ್ತಲೇ ಸಾಗಿದ್ದು, ಈ ಕಾರಣದಿಂದ ಕಳ್ಳತನ ನಡೆದಿರಬಹುದು ಎಂದು ಹೇಳಲಾಗಿದೆ. ಕೋಲಾರ ಎಪಿಎಂಸಿ ಮಾರುಕಟ್ಟೆಯ ಎ.ಜಿ.ಟ್ರೇಡರ್ಸ್‌ನ ಸಕ್ಲೇನ್ ಹಾಗೂ ಎಸ್.ವಿ.ಟಿ. ಟ್ರೇಡರ್ಸ್‌ನ ಮುನಿರೆಡ್ಡಿ ಎಂಬುವರು ಸುಮಾರು .21 ಲಕ್ಷ ಮೌಲ್ಯದ ಸುಮಾರು 750 ಕ್ರೇಟ್ (11 ಟನ್) ಟೊಮೆಟೋವನ್ನು ಜು.27ರಂದು ರಾಜಸ್ಥಾನದ ಜೈಪುರಕ್ಕೆ ಮೆಹತ್ ಟ್ರಾನ್ಸ್‌ಪೋರ್ಚ್‌ಗೆ ಸೇರಿದ ಲಾರಿಯ ಮೂಲಕ ಕಳುಹಿಸಿಕೊಟ್ಟಿದ್ದರು.
Bengaluru crime: ವಾಹನ ಸಮೇತ ಟೊಮೆಟೋ ದೋಚಿದ್ದ ದಂಪತಿ ಸೆರೆ
ಅಂದುಕೊಂಡಂತೆ ಶನಿವಾರ ರಾತ್ರಿ ಜೈಪುರಕ್ಕೆ ಲಾರಿ ತಲುಪಬೇಕಿತ್ತು. ಆದರೆ ಮಧ್ಯಾಹ್ನದವರೆಗೆ ಸಂಪರ್ಕದಲ್ಲಿದ್ದ ಲಾರಿ ಚಾಲಕ ಅನ್ವರ್ ಆ ಬಳಿಕ ನಾಪತ್ತೆಯಾಗಿದ್ದಾನೆ. ಮೆಹತ್ ಟ್ರಾನ್ಸ್‌ಪೋರ್ಚ್ ಮಾಲೀಕ ಸಾಧಿಕ್ ಅವರಿಗೂ ಏನಾಗಿದೆ ಎಂದು ಗೊತ್ತಾಗಿಲ್ಲ. ಈ ಸಂಬಂಧ ಇದೀಗ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಲಾರ ಎಪಿಎಂಸಿ ಮಾರುಕಟ್ಟೆಏಷ್ಯಾದಲ್ಲೇ 2ನೇ ಅತಿದೊಡ್ಡ ಮಾರುಕಟ್ಟೆಎಂಬ ಹೆಗ್ಗಳಿಕೆ ಹೊಂದಿದೆ. ಇಲ್ಲಿಂದ ದೇಶದ ಹಲವು ರಾಜ್ಯಗಳಿಗೆ ಟೊಮೆಟೋ ರವಾನೆಯಾಗುತ್ತದೆ. ಅದರಲ್ಲೂ ಈಗಂತೂ ಟೊಮೆಟೋಗೆ ಚಿನ್ನದ ಬೆಲೆ ಇದೆ. ಅದಕ್ಕಾಗಿಯೇ ಕೋಲಾರದ ಎಪಿಎಂಸಿ ಮಾರುಕಟ್ಟೆಗೂ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆæ. ಮಂಡಿ ಮಾಲೀಕರು ಖಾಸಗಿ ಭದ್ರತೆ ಜೊತೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ.
ಲಾರಿ ಅಪಘಾತವಾಗಿದ್ದರೆ ಅಥವಾ ಬೇರೆ ಏನಾದರೂ ಸಮಸ್ಯೆ ಆಗಿದ್ದರೆ ನಮಗೆ ಮಾಹಿತಿ ಬರುತ್ತಿತ್ತು. ಆದರೆ ಇಲ್ಲಿ ಲಾರಿ ಚಾಲಕ ಟೊಮೆಟೋ ಕಳ್ಳತನ ಮಾಡಿರುವ ಅನುಮಾನವಿದೆ ಅನ್ನೋದು ವ್ಯಾಪಾರಸ್ಥರ ಮಾತು.
ಟೊಮೆಟೋ ಬಾತ್! ಬೆಲೆ ಏರಿಕೆಯಿಂದ ಉಗಿಸಿಕೊಳ್ಳುತ್ತಿರುವ ಕೆಂಪು ಸುಂದರಿ ಮನದ ಮಾತು
ಎಸ್ಕಾರ್ಟ್ ಕೊಟ್ಟರೂ ಅಚ್ಚರಿ ಇಲ್ಲ: ಶ್ರೀನಾಥ್
ಟೊಮೆಟೋಗೆ ಒಳ್ಳೆಯದ ದರ ಸಿಗುತ್ತಿದೆ. ಹೀಗಾಗಿ ಅದನ್ನು ಮಾರಾಟ ಮಾಡೋದು ಕಷ್ಟದ ಕೆಲಸವಲ್ಲ. ಕೋಲಾರದಿಂದ ರಾಜಸ್ಥಾನಕ್ಕೆ ತಲುಪಬೇಕಿದ್ದ ಟೊಮೆಟೋ ಕೂಡಾ ಕಳ್ಳತನವಾಗಿರುವ ಸಾಧ್ಯತೆ ಇದೆ. ಇನ್ನು ಟೊಮೆಟೋ ದರ ಇದೇ ರೀತಿ ಇದ್ದರೆ ಎಸ್ಕಾರ್ಚ್ ಕೊಟ್ಟು ಟೊಮೆಟೋ ಸಾಗಣೆ ಮಾಡಬೇಕಾದ ಸ್ಥಿತಿ ಬಂದರೂ ಅಚ್ಚರಿ ಇಲ್ಲ.
- ಸಿಎಂಆರ್ ಶ್ರೀನಾಥ್, ಸಿಎಂಆರ್ ಮಂಡಿ ಮಾಲೀಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ