* ಕೇಂದ್ರ ಸರ್ಕಾರದ ವಿವಿಧ ಯೋಜನೆಯ ಫಲಾನುಭವಿಗಳೊಂದಿಗೆ ನೇರ ಸಂವಾದ
* ಸಚಿವ ಪ್ರಲ್ಹಾದ್ ಜೋಶಿ ಸಂವಾದ
* ಹುಬ್ಬಳ್ಳಿಯ ನಗರದ ಕುಸುಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್ ನಲ್ಲಿ ನಡೆದ ಕಾರ್ಯಕ್ರಮ
ಹುಬ್ಬಳ್ಳಿ; ಪ್ರಧಾನಮಂತ್ರಿ ಮೋದಿಯವರಿಂದ ಕೇಂದ್ರ ಸರಕಾರದ ಪುರಸ್ಕೃತ ಯೋಜನೆಗಳು ಕೇವಲ ಒಂದು ವರ್ಗಕ್ಕೆ ಸೀಮಿತವಾಗದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅಭಿಪ್ರಾಯಪಟ್ಟಿದ್ದಾರೆ.
ಹುಬ್ಬಳ್ಳಿ ನಗರದ ಕುಸುಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್ ನಲ್ಲಿ ಇಂದು (ಮಂಗಳವಾರ) ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಸರ್ಕಾರದ ವಿವಿಧ ಯೋಜನೆಯ ಫಲಾನುಭವಿಗಳೊಂದಿಗೆ ನೇರ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರ ಸರಕಾರದ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ನೇರ ಸಂಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜನ್ ಧನ್ ,ಬೇಟಿ ಬಚಾವೋ ,ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನಮಂತ್ರಿ ಆವಾಸ್ ಯೋಜನೆ. ಆಜಾದಿ ಕಿ ಅಮೃತ್ ಮಹೋತ್ಸವದಂಹ ಅನೇಕ ಕಾರ್ಯಕ್ರಮಳ ಮೂಲಕ ಬಡವರಿಗೆ ಅತ್ಯಂತ ಉಪಯುಕ್ತ ಯೋಜನೆ ಜಾರಿ ತರಲಾಗಿದೆ ಎಂದರು.
ಇಂದು ಸಿಎಂ, ಜನಪ್ರತಿನಿಧಿಗಳು, ಜನರ ಜತೆ ಮೋದಿ ಸಂವಾದ!
ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಗಳಲ್ಲಿ ಇದು ಸಹ ಇಂದು ಆಯುಷ್ಮಾನ ಯೋಜನೆ. ಇದರ ಮೂಲಕ ಮಕ್ಕಳಿಗೆ ಪ್ರತಿ ತಿಂಗಳು 4,000 ರೂಪಾಯಿಗಳನ್ನು ನೀಡಲಾಗುವುದು ಇದು ಅವರ ದೈನಂದಿನ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ. 23 ವರ್ಷ ತುಂಬಿದ ನಂತರ 10 ಲಕ್ಷ ರೂಪಾಯಿಗಳ ಜೊತೆಗೆ, ಮಕ್ಕಳಿಗೆ ಆಯುಷ್ಮಾನ್ ಕಾರ್ಡ್ ಮೂಲಕ ಆರೋಗ್ಯ ರಕ್ಷಣೆ ಮತ್ತು ಮಾನಸಿಕ ಮತ್ತು ಭಾವನಾತ್ಮಕ ಸಹಾಯಕ್ಕಾಗಿ 'ಸಂವಾದ್ ಸಹಾಯವಾಣಿ' ಮೂಲಕ ಭಾವನಾತ್ಮಕ ಸಲಹೆಯನ್ನು ನೀಡಲಾಗುತ್ತದೆ ಎಂದು ಹೇಳಿದರು.
ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ ಎಂದು ಮೋದಿ ಹೇಳಿದ್ದಾರೆ. ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ಭಾರತವು ತನ್ನ ವಿಜ್ಞಾನಿಗಳು, ವೈದ್ಯರು, ಯುವಕರನ್ನು ನಂಬಿತ್ತು. ಹಾಗಾಗಿ ಕೊರೊನಾ ಸಮಸ್ಯೆಯಾಗಲಿಲ್ಲ. ಅವರೆಲ್ಲಾ ಜಗತ್ತಿಗೆ ಪರಿಹಾರ ನೀಡುವವರಾಗಿದ್ದರು ಎಂದು ಹೊಗಳಿದ್ದಾರೆ ಇದು ಮೋದಿ ಅವರ ದೂರ ದೃಷ್ಟಿಯ ಆಲೋಚನೆ ಆಗಿತ್ತು ಎಂದು ತಿಳಿಸಿದರು.
ಪಿಎಂ ಕೇರ್ಸ್ ಮತ್ತು ಆರೋಗ್ಯ ಕಾರ್ಡ್‌ನ ಪಾಸ್‌ಬುಕ್ ಅನ್ನು ಹಸ್ತಾಂತರಿಸಿದರು. ಈ ಯೋಜನೆಯಡಿ ಯಾರಿಗಾದರೂ ವೃತ್ತಿಪರ ಕೋರ್ಸ್‌ಗಳಿಗೆ, ಉನ್ನತ ಶಿಕ್ಷಣಕ್ಕಾಗಿ ಶಿಕ್ಷಣ ಸಾಲದ ಅಗತ್ಯವಿದ್ದರೆ ಅದಕ್ಕೆ ಪಿಎಂ ಕೇರ್ ಸಹಾಯ ಮಾಡುತ್ತದೆ ಎಂದು ಹೇಳಿದರು.
ಸ್ವಚ್ಛ ಭಾರತ್ ಮಿಷನ್, ಜನ್ ಧನ್ ಯೋಜನಾ ಹಾಗೂ ಹರ್ ಘರ್ ಜಲ ಅಭಿಯಾನದಂತಹ ಕಲ್ಯಾಣ ನೀತಿಗಳನ್ನು ಉಲ್ಲೇಖಿಸಿದ ಜೋಶಿ ಅವರು ಸರ್ಕಾರವು 'ಸಬ್ಕಾ ಸಾಥ್ ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಮತ್ತು ಸಬ್ಕಾ ಪ್ರಯಾಸ್' ಎಂಬ ಮನೋಭಾವದೊಂದಿಗೆ ನಡೆಯುತ್ತಿದೆ. ಕಳೆದ ಎಂಟು ವರ್ಷಗಳನ್ನು ಬಡವರ ಕಲ್ಯಾಣ ಮತ್ತು ಸೇವೆಗೆ ಮೀಸಲಿಡಲಾಗಿದೆ ಎಂದು ಹೇಳಿದರು.
ಪ್ರಧಾನಿ ಮೋದಿಯವರಿಂದ ಕೇಂದ್ರ ಸರಕಾರದ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ನೇರ ಸಂವಾದ ಕಾರ್ಯಕ್ರಮದ ವೀಕ್ಷಣೆ ಕುರಿತು ಪ್ರತಿಯೊಬ್ಬರೂ ಇದರ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.
ಇದೇ ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನಿಯವರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 11ನೇ ಕಂತಿನ ಪ್ರೋತ್ಸಾಹ ಧನ 2000 ರೂ ಗಳನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಲಿದ್ದು ಇದರ ಪ್ರಯೋಜನರ ರೈತರು ಪಡೆಯಬೇಕು ಎಂದರು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ , ಸಚಿವರಾದ ಹಾಲಪ್ಪ ಆಚಾರ್, ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ ಮುಂತಾದವರು ಭಾಗವಹಿಸಿದ್ದರು