
ಚಿಕ್ಕಬಳ್ಳಾಪುರ (ಫೆ. 19): ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಒಕ್ಕೂಟದ (Kochimul) ವಿಭಜನೆ (Spilt) ವಿಚಾರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ (Health Minister Dr.K.Sudhakar)ಹಾಗೂ ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ (Ramesh Kumar) ನಡುವೆ ವಾಕ್ಸಮರ ಮುಂದುವರಿದಿದೆ. ಶನಿವಾರ ಚಿಕ್ಕಬಳ್ಳಾಪುರದಲ್ಲಿ (Chikkaballapur) ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಧಾಕರ್, ರಮೇಶ್ ಕುಮಾರ್ ಒಬ್ಬ ಗುಳ್ಳೆನರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಚಿಕ್ಕಬಳ್ಳಾಪುರದ ತಾಲೂಕಿನ ಹೊಸಗುಡ್ಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಧಾಕರ್ ಕೋಚಿಮುಲ್ ವಿಭಜನೆ ವಿರುದ್ಧ ಹೈಕೋರ್ಟ್ ನಿಂದ ಸ್ಟೇ ಆರ್ಡರ್ ತಂದಿರುವ ವಿಚಾರದ ಬಗ್ಗೆ ಮಾತನಾಡಿದರು. "ರಮೇಶ್ ಕುಮಾರ್ ಗುಳ್ಳೆ ನರಿ ಇದ್ದ ಹಾಗೆ. ಜಗತ್ತಿಗೆ ತಾವೇ ದೊಡ್ಡ ಮಹಾಬ್ರಹಸ್ಮತಿ ಅಂತಾ ಅಂದುಕೊಂಡಿದ್ದಾರೆ. ಕೋಚಿಮುಲ್ ವಿಭಜನೆಯ ಕುರಿತಾಗಿ ಹೈಕೋರ್ಟ್ ನಿಂದ ಸ್ಟೇ ತಂದಿದ್ದಾರೆ' ಎಂದು ಹೇಳಿದರು.
ಕೇವಲ ಎರಡು ದಿನದ ಹಿಂದೆಯಷ್ಟೇ ಮಾಲೂರು ಶಾಸಕ ನಂಜೇಗೌಡ ಮಾತನಾಡುತ್ತಾ, ಕೋಚಿಮುಲ್ ವಿಭಜನೆ ಮಾಡಿಕೊಳ್ಳಿ ಎಂದು ಹೇಳಿದ್ದರು. ಈಗ ಏಕಾಏಕಿ ಹೋಗಿ ಸ್ಟೇ ತೆಗೆದುಕೊಂಡು ಬಂದಿದ್ದಾರೆ. ಇವರನ್ನು ನಯವಂಚಕರು ಎನ್ನಬೇಕೋ, ಗುಳ್ಳೇನರಿಗಳು ಎನ್ನಬೇಕೋ ಅನ್ನುವುದೇ ಅರ್ಥವಾಗುತ್ತಿಲ್ಲ ಎಂದಿ ವಾಗ್ದಾಳಿ ನಡೆಸಿದರು. ನಾನು ಜನಪ್ರತಿನಿಧಿಯಾಗಿ ಇರೋವರೆಗೂ ನಮ್ಮ ಜಿಲ್ಲೆಯ ರೈತರಿಗೆ ಅನ್ಯಾಯವಾಗಲು ಬಿಡೋದಿಲ್ಲ. ರಮೇಶ್ ಕುಮಾರ್ ಹಿಂದೆಯಿಂದ ಬಂದು ಚೂರಿ ಹಾಕಿದ್ದಾರೆ. ಆದರೆ, ನಾನು ಮಾತ್ರ ಅವರನ್ನು ನೇರಾನೇರವಾಗಿ ಎದುರಿಸುತ್ತೇನೆ. ನಿಮ್ಮ ಕೈಯಲ್ಲಿ ಶಕ್ತಿ ಇದ್ದರೇ ಎದುರಿ ನೋಡೋಣ. ಕೋಚಿಮುಲ್ ವಿಭಜನೆ ಮಾಡಿಯೇ ಮಾಡುತ್ತೇನೆ. ಶಕ್ತಿಯಿದ್ದರೇ ನಿಲ್ಲಿಸಿ ಎಂದು ಹೇಳುವ ಮೂಲಕ ರಮೇಶ್ ಕುಮಾರ್ ಅವರಿಗೆ ಬಹಿರಂಗವಾಗಿಯೇ ಸವಾಲು ಹಾಕಿದ್ದಾರೆ.
Chikkaballapur : ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಒಪ್ಪಿಗೆ, ಬಿಜೆಪಿ ಮುಖಂಡರಿಂದ ಸಂಭ್ರಮಾಚರಣೆ
ಈ ಹಿಂದೆಯೂ ಹಲವು ಸಂದರ್ಭಗಳಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್ ವಿಭಜನೆ ವಿಚಾರ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ಪ್ರತಿಷ್ಠೆಯ ವಿಚಾರವಾಗಿ ಪರಿವರ್ತನೆಯಾಗಿದೆ. ಸಾಕಷ್ಟು ಹೋರಾಟದ ಬಳಿಕ ಕಳೆದ ವರ್ಷದ ನವೆಂಬರ್ ನಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವನ್ನು (Kochimul) ಬೇರ್ಪಡಿಸಿ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಒಕ್ಕೂಟ ದೊರಕಿಸಿಕೊಡುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದ ಸುಧಾಕರ್ ಯಶಸ್ವಿಯಾಗಿದ್ದರು. "ಕೋಚಿಮುಲ್ ವಿಭಜಿಸುವುದಂತೂ ಖಚಿತ. ಹಾಲು ಒಕ್ಕೂಟವನ್ನು ಬೇರ್ಪಡಿಸಲು ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರು ಪತ್ರ ಬರೆದಿದ್ದರು. ಆದರೆ ಈಗ ನಾನು ಜಿಲ್ಲಾ ಉಸ್ತುವಾರಿ ಸಚಿವನಾದ ನಂತರ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ನಮ್ಮ ಜಿಲ್ಲೆಯ ಪಾಲು ನಮಗೆ ಸಿಗಬೇಕು. ಪ್ರತಿ ಬಾರಿಯೂ ಕೋಲಾರದಲ್ಲಿರುವ ಡಿಸಿಸಿ ಬ್ಯಾಂಕ್, ಹಾಲು ಒಕ್ಕೂಟಕ್ಕೆ ಚಿಕ್ಕಬಳ್ಳಾಪುರದ ರೈತರು ಹೋಗಬೇಕೆಂದರೆ ಸಾಧ್ಯವಿಲ್ಲ’ ಎಂದು ಅವರು ದೂರಿದ್ದರು.
ಕೋಚಿಮುಲ್ ಪ್ರತ್ಯೇಕಕ್ಕೆ ಸಂಪುಟ ಒಪ್ಪಿಗೆ, ರಮೇಶ್ ಕುಮಾರ್ ವಿರುದ್ಧದ ಸಮರದಲ್ಲಿ ಸುಧಾಕರ್‌ಗೆ ಜಯ
ಈ ಬಳಿಕ ಸಾಕಷ್ಟು ಚರ್ಚೆ ನಡೆಸಿ ಸರ್ಕಾರ ಕೋಚಿಮುಲ್ ವಿಭಜನೆಗೆ ಒಪ್ಪಿಗೆ ನೀಡಿತ್ತು. ಆದರೆ, ಇದರ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದ ರಮೇಶ್ ಕುಮಾರ್ ಹಾಗೂ ಮಾಲೂರು ಶಾಸಕ ನಂಜೇಗೌಡ, ಸ್ಟೇ ತರಲು ಯಶಸ್ವಿಯಾಗಿದ್ದರು. 2008ರಲ್ಲಿ ಕೋಲಾರದಿಂದ ಚಿಕ್ಕಬಳ್ಳಾಪುರ ಪ್ರತ್ಯೇಕವಾದ ದಿನದಿಂದಲೂ ಕೋಚಿಮುಲ್ ಅನ್ನು ವಿಭಜನೆ ಮಾಡುವ ಬಗ್ಗೆ ಸಾಕಷ್ಟು ಹೋರಾಟ ನಡೆದಿತ್ತು. ಆದದರೆ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಒಕ್ಕೂಟದ ನಿರ್ದೇಶಕರುಗಳು ಅದಕ್ಕೆ ಅವಕಾಶ ನೀಡಿರಲಿಲ್ಲ. ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ಕೂಡ ಇದನ್ನು ವಿಭಜನೆ ಮಾಡುವ ಸಾಹಸಕ್ಕೆ ಕೈಹಾಕಿರಲಿಲ್ಲ. ಆದರೆ, ಸುಧಾಕರ್ ಸಚಿವರಾದ ಬಳಿಕ ಈ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಕೋಚಿಮುಲ್ ಅನ್ನು ವಿಭಜನೆ ಮಾಡಲು ಸರ್ಕಾರವನ್ನು ಒಪ್ಪಿಸಿದ್ದರು. ಅದರಂತೆ ಕಳೆದ ನವೆಂಬರ್ 8, 2021ರಂದು ಈ ಕುರಿತು ಕರ್ನಾಟಕ ಸಚಿವ ಸಂಪುಟವು ನಿರ್ಧಾರ ತೆಗೆದುಕೊಂಡಿತ್ತು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ಪ್ರತ್ಯೇಕಿಸುವ ನಿರ್ಣಯವನ್ನು ಕರ್ನಾಟಕ ರಾಜ್ಯ ಸಚಿವ ಸಂಪುಟವು ನಿರ್ಣಯ ತೆಗೆದುಕೊಂಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ