ರೈತರಿಂದ ಹೆಚ್ಚುವರಿ ಹಾಲು ಖರೀದಿ ನಿಲ್ಲಿಸಲು KMF ಚಿಂತನೆ..!

By Kannadaprabha News  |  First Published May 29, 2021, 10:37 AM IST

* ಲಾಕ್‌ಡೌನ್‌ನಿಂದ ನಂದಿನಿ ಹಾಲು ಮಾರಾಟ ಕುಸಿತ
* ನಿತ್ಯ ಹಾಲು ಮತ್ತು ಹಾಲಿನ ಇತರ ಉತ್ಪನ್ನಗಳ ಮಾರಾಟದಲ್ಲಿ 10ರಿಂದ 12 ಲಕ್ಷ ಲೀಟರ್‌ ಇಳಿಕೆ
* ಕಳೆದೊಂದು ವಾರದಿಂದ ಹಾಲಿನ ಸಂಗ್ರಹ ಏರಿಕೆ
 


ಬೆಂಗಳೂರು(ಮೇ.29): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಒಂದು ಕಡೆ ನಂದಿನಿ ಹಾಲು ಮಾರಾಟ ಕುಸಿತ ಹಾಗೂ ಮತ್ತೊಂದು ಕಡೆ ಮಳೆ ಸುರಿದು ಹಸಿರು ಮೇವು ಹೆಚ್ಚಾಗಿ ಹಾಲು ಉತ್ಪಾದನೆ ಜಾಸ್ತಿಯಾಗಿರುವ ಪರಿಣಾಮ ರಾಜ್ಯದ 13 ಹಾಲು ಒಕ್ಕೂಟಗಳಲ್ಲಿ ಸಂಗ್ರಹವಾಗುತ್ತಿರುವ ಹಾಲಿನ ಪ್ರಮಾಣ ಹೆಚ್ಚುತ್ತಿದೆ. ಸರ್ಕಾರ ಸಹಕರಿಸದಿದ್ದರೆ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿರುವ ಹಾಲು ಖರೀದಿಯನ್ನು ಸ್ಥಗಿತಗೊಳಿಸಲು ಕೆಎಂಎಫ್‌ ಚಿಂತನೆ ನಡೆಸಿದೆ.

ಕಳೆದ ಒಂದು ತಿಂಗಳ ಹಿಂದೆ 70 ಲಕ್ಷ ಲೀಟರ್‌ ಹಾಲು ಸಂಗ್ರಹಿಸಲಾಗುತ್ತಿತ್ತು. ಈಗ ಮಳೆ ಬಿದ್ದು ಹಸಿರು ಮೇವು ಸಿಗುತ್ತಿದ್ದಂತೆ ಹಾಲು ಉತ್ಪಾದನೆ ಹೆಚ್ಚಾಗಿದ್ದು ಕಳೆದೊಂದು ವಾರದಿಂದ ಹಾಲಿನ ಸಂಗ್ರಹ ಏರಿಕೆಯಾಗಿದ್ದು ಪ್ರತಿದಿನ 88 ರಿಂದ 89 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದೆ. ಆದರೆ ಲಾಕ್‌ಡೌನ್‌ನಿಂದ ಹಾಲು ಮಾರಾಟದಲ್ಲೂ ಕುಸಿತವಾಗುತ್ತಿರುವುದು ಕೆಎಂಎಫ್‌ಗೆ ತಲೆನೋವಿಗೆ ಕಾರಣವಾಗಿದೆ.

Tap to resize

Latest Videos

ಕೊರೋನಾ ವಿರುದ್ಧ ಹೋರಾಟ: ಕೆಎಂಎಫ್‌ನಿಂದ 1 ಕೋಟಿ ವೆಚ್ಚದಲ್ಲಿ ಆಕ್ಸಿಜನ್‌ ಪೂರೈಕೆ

ನಿತ್ಯ ಹಾಲು ಮತ್ತು ಹಾಲಿನ ಇತರ ಉತ್ಪನ್ನಗಳ ಮಾರಾಟದಲ್ಲಿ 10ರಿಂದ 12 ಲಕ್ಷ ಲೀಟರ್‌ ಇಳಿಕೆಯಾಗಿದೆ. ಈ ಹಿಂದೆ 53 ಲಕ್ಷ ಲೀಟರ್‌ ಹಾಲು ಬಳಕೆಯಾಗುತ್ತಿತ್ತು. ಈಗ ಹಾಲಿನ ಉತ್ಪಾದನೆಯೂ ಹೆಚ್ಚಿದ್ದು ಬೇಡಿಕೆ ಕಡಿಮೆಯಾಗಿದ್ದರಿಂದ 35ರಿಂದ 40 ಲಕ್ಷ ಲೀಟರ್‌ ಹಾಲನ್ನು ಹಾಲಿನ ಪುಡಿ ಮತ್ತು ಬೆಣ್ಣೆಯಾಗಿ ಪರಿವರ್ತಿಸಲಾಗುತ್ತಿದೆ. ಹಾಲು ಹೆಚ್ಚಾಗಿ ಉಳಿಯುತ್ತಿರುವುದರಿಂದ ಹಾಲಿನ ಪುಡಿಯಾಗಿ ಪರಿವರ್ತಿಸಲಾಗುತ್ತಿದೆ. ಆದರೆ, ಹಾಲಿನಪುಡಿ ಮತ್ತು ಬೆಣ್ಣೆಯೂ ಮಾರಾಟವಾಗುತ್ತಿಲ್ಲ, ಇದು ಸಂಸ್ಥೆಗೆ ಹೊರೆಯಾಗುತ್ತಿದ್ದು ಹೆಚ್ಚುವರಿಯಾಗಿ ಉತ್ಪಾದನೆಯಾದರೆ ಹಾಲು ಖರೀದಿ ನಿಲ್ಲಿಸಬೇಕಾಗುತ್ತದೆ ಎಂದು ಕೆಎಂಎಫ್‌ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

click me!