ವಿಶೇಷ ಪ್ಯಾಕೇಜ್‌: ಅಗಸ, ಕ್ಷೌರಿಕ, ಮೆಕ್ಯಾನಿಕ್‌, ಟೈಲರ್‌ಗೆ 2,000 ಬಿಡುಗಡೆ

By Kannadaprabha NewsFirst Published May 29, 2021, 10:08 AM IST
Highlights

* 11 ಅಸಂಘಟಿತ ಕಾರ್ಮಿಕರಿಗೆ ಪ್ಯಾಕೇಜ್‌
* 66.9 ಕೋಟಿ ರು. ಅನುದಾನ ಮಂಜೂರು
* ಅರ್ಹ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಪರಿಹಾರ ಮೊತ್ತ ಜಮೆ 
 

ಬೆಂಗಳೂರು(ಮೇ.29): ಕೋವಿಡ್‌ ಸೆಮಿ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾಗಿರುವ ಅಗಸ, ಕ್ಷೌರಿಕ ಸೇರಿದಂತೆ 11 ವಲಯದ ಅಸಂಘಟಿತ ಕಾರ್ಮಿಕರಿಗೆ ಪರಿಹಾರ ನೀಡಲು ರಾಜ್ಯ ಸರ್ಕಾರ 66.9 ಕೋಟಿ ರು. ಅನುದಾನ ಮಂಜೂರು ಮಾಡಿದೆ.

ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ 11 ವರ್ಗಗಳಾದ ಅಗಸರು, ಕ್ಷೌರಿಕರು, ಮನೆಗೆಲಸದವರು, ಟೈಲರ್ಸ್‌, ಮೆಕ್ಯಾನಿಕ್‌, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಮತ್ತು ಭಟ್ಟಿಕಾರ್ಮಿಕ ವರ್ಗಗಳ ಒಟ್ಟು 3.30 ಲಕ್ಷ ಅಸಂಘಟಿತ ಕಾರ್ಮಿಕರನ್ನು ನೋಂದಾಯಿಸಿ ಸ್ಮಾರ್ಟ್‌ಕಾರ್ಡ್‌ ನೀಡಲಾಗಿದೆ. ಈ ನೋಂದಾಯಿತ ಕಾರ್ಮಿಕರಿಗೆ ತಲಾ 2 ಸಾವಿರ ರು.ನಂತೆ ಆರ್ಥಿಕ ನೆರವು ನೀಡುವಂತೆ ಸರ್ಕಾರ ಆದೇಶಿಸಿದೆ.

Latest Videos

ಚಾಲಕರ ಖಾತೆಗೆ 3,000 ರು. ಪರಿಹಾರ ನೇರ ವರ್ಗ: ಸರ್ಕಾರ

ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸ್ವೀಕರಿಸಿ ಅರ್ಹ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ನೇರವಾಗಿ ಮೊತ್ತ ಜಮೆ ಮಾಡಬೇಕೆಂದು ಸೂಚಿಸಿದೆ. ಗುರುವಾರವಷ್ಟೆ ಸರ್ಕಾರ ಕಟ್ಟಡ ಕಾರ್ಮಿಕರು ಮತ್ತು ಕಲಾವಿದರಿಗೆ 754 ಕೋಟಿ ರು. ಪರಿಹಾರ ಬಿಡುಗಡೆ ಮಾಡಿತ್ತು.
 

click me!