ಹಾಲು, ಮೊಸರಿನ ಬೆಲೆ ಏರಿಕೆ ಬೆನ್ನಲ್ಲೇ ಕರ್ನಾಟಕದ ಜನತೆಗೆ ಮತ್ತೊಂದು ಶಾಕ್‌..!

By Girish GoudarFirst Published Dec 9, 2022, 8:15 PM IST
Highlights

ಹಾಲಿನಿಂದ ತಯಾರಾಗುವ ಎಲ್ಲ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.  ಸದ್ದಿಲ್ಲದೇ ಕೆಎಂಎಫ್ ಸಿಹಿ ತಿನಿಸು ಹಾಗೂ ತುಪ್ಪದ ದರ ಏರಿಕೆ. 

ಬೆಂಗಳೂರು(ಡಿ.09):  ನಂದಿನಿ ಹಾಲು, ಮೊಸರಿನ ಬೆಲೆ ಏರಿಕೆ ಬೆನ್ನಲ್ಲೇ ಸಾರ್ವಜನಿಕರಿಗೆ ಕೆಎಂಎಫ್ ಮತ್ತೊಂದು ಶಾಕ್ ನೀಡಿದೆ. ಹೌದು,  ಹಾಲಿನಿಂದ ತಯಾರಾಗುವ ಎಲ್ಲ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.  ಸದ್ದಿಲ್ಲದೇ ಕೆಎಂಎಫ್ ಸಿಹಿ ತಿನಿಸು ಹಾಗೂ ತುಪ್ಪದ ದರ ಏರಿಕೆಯಾಗುತ್ತಿವೆ. ಪ್ರತಿ ಉತ್ಪನ್ನದ ಮೇಲೆ ಶೇ. 5 ರಿಂದ ರಿಂದ ಶೇ. 15 ರಷ್ಟು ದರ ಏರಿಕೆಯಾಗಿದೆ. 

ನವೆಂಬರ್ 24 ರಂದು ಕೆಎಂಎಫ್ ನಂದಿನಿ ಹಾಲು, ಮೊಸರಿನ ದರದ ಮೇಲೆ 2 ರೂಪಾಯಿ ಏರಿಸಿತ್ತು.  ಅಲ್ಲದೇ ಆ ಸಂಪೂರ್ಣ ಹಣವನ್ನು ರೈತರಿಗೆ ನೀಡುವುದಾಗಿ ಕೆಎಂಎಫ್ ತಿಳಿಸಿತ್ತು. ಆದ್ರೆ ಹಾಲು, ಮೊಸರು ದರ ಏರಿಕೆಗೂ ಮೊದಲೇ ಹಂತಹಂತವಾಗಿ ಉತ್ಪನ್ನಗಳ ಬೆಲೆಯನ್ನ ಕೆಎಂಎಫ್ ಏರಿಸಿದೆ.

ನಂದಿನಿ ಹಾಲಿನ ಬೆಲೆ ಹೆಚ್ಚಳ: ಕಾಫಿ-ಟೀ ಹಾಗೂ ಉಪಹಾರದ ಮೇಲೆ ಎಫೆಕ್ಟ್

ಯಾವ ಉತ್ಪನ್ನಗಳ ಬೆಲೆ ಎಷ್ಟಿತ್ತು?, ಈಗ ಉತ್ಪನ್ನಗಳ ದರ ಎಷ್ಟಾಗಿದೆ?

* ತುಪ್ಪ 1 ಕೆ.ಜಿ 520 ರಿಂದ 610 ರೂಗೆ ಏರಿಕೆ
* ಪೇಡ 250 ಗ್ರಾಂ 105 ರಿಂದ 140 ರೂಪಾಯಿ ಏರಿಕೆ
* ಮೈಸೂರು ಪಾಕ್ 250 ಗ್ರಾಂ 115 ರಿಂದ 160 ರೂಪಾಯಿಗೆ ಏರಿಕೆ
* ಕೋವಾ 200 ಗ್ರಾಂ 90 ರಿಂದ 100 ರೂಪಾಯಿ ಏರಿಕೆ
* ಜಾಮೂನ್ ಅರ್ಧ ಕೆಜಿ ಟಿನ್ 105 ರಿಂದ 135 ರೂಪಾಯಿಗೆ ಏರಿಕೆ
* ಪ್ಲೇವರ್ಡ್ ಮಿಲ್ಕ್ 20 ರಿಂದ 25 ರೂಪಾಯಿಗೆ ಏರಿಕೆ
* ನಂದಿನಿ ಐಸ್ ಕ್ರೀಂನ ಪ್ರತಿ ಪ್ಯಾಕೇಟ್ ಮೇಲೂ 5 ರೂಪಾಯಿ ಏರಿಕೆ
* ಪನ್ನೀರು ಪ್ರತಿ ಕೆಜಿಗೆ 20 ರೂಪಾಯಿ ಏರಿಕೆ
 

click me!