ನಾನು ನಂದಿನಿ ದೆಹಲಿಗೆ ಬಂದಿನೀ, ನೋಯ್ಡಾಗೆ ಹೊಂಟೀನಿ, ಮುಂದೆ ಮುಂಬೈಗೂ ಹೋಗ್ತೀನಿ!

By Santosh Naik  |  First Published Dec 28, 2024, 9:00 PM IST

ಕರ್ನಾಟಕ ಹಾಲು ಮಹಾಮಂಡಳದ ನಂದಿನಿ ಉತ್ಪನ್ನಗಳಿಗೆ ಉತ್ತರ ಭಾರತದಲ್ಲಿ ಭಾರಿ ಬೇಡಿಕೆ ವ್ಯಕ್ತವಾಗಿದ್ದು, ನೊಯ್ಡಾ, ರಾಜಸ್ಥಾನ ಮತ್ತು ಮುಂಬೈಗಳಿಗೆ ವಿಸ್ತರಣೆಗೆ ಯೋಜನೆ ರೂಪಿಸಲಾಗಿದೆ.


ಬೆಂಗಳೂರು (ಡಿ.28): ರಾಜ್ಯದ ಹೆಮ್ಮೆಯ ಹಾಲಿನ ಬ್ರ್ಯಾಂಡ್‌ ಕರ್ನಾಟಕ ಹಾಲು ಮಹಾಮಂಡಳದ ನಂದಿಗೆ ಉತ್ತರದಲ್ಲಿ ಭಾರೀ ಡಿಮ್ಯಾಂಡ್‌ ವ್ಯಕ್ತವಾಗಿದೆ. ಅದರಲ್ಲೂ ತಿರುಪತಿಯಲ್ಲಿ ಕಲಬೆರಕೆ ತುಪ್ಪದ ಬಳಿಕ ಕೆಎಂಎಫ್‌ನ ಹಾಲಿ ಹಾಗೂ ತುಪ್ಪಕ್ಕೆ ದೇಶಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಈಗಾಲೇ ದೆಹಲಿಗೆ ಕಾಲಿಟ್ಟಿರುವ ನಂದಿನಿ ಬ್ರ್ಯಾಂಡ್‌ ಶೀಘ್ರದಲ್ಲಿಯೇ ರಾಷ್ಟ್ರ ರಾಜಧಾನಿಗೆ ಸಮೀಪವಿರುವ ಉತ್ತರ ಪ್ರದೇಶದ ನೋಯ್ಡಾಗೆ ಕಾಲಿಡಲಿದೆ. ಶೀಘ್ರದಲ್ಲಿಯೇ ಉತ್ತರ ಪ್ರದೇಶದ ನೊಯ್ಡಾಗೆ ನಂದಿನಿ ಹಾಲು ಸರಬರಾಜು ಆಗಲಿದೆ. ಅಲ್ಲಿನ ಮಾರುಕಟ್ಟೆಯಲ್ಲಿ ಅಧ್ಯಯನ ಮಾಡುವ ಬಗ್ಗೆ ಉತ್ತರ ಪ್ರದೇಶಕ್ಕೆ ಕೆಎಂಎಫ್‌ನ ಹಿರಿಯ ಅಧಿಕಾರಿಗಳ ಟೀಮ್‌ ಭೇಟಿಕೊಟ್ಟಿದ್ದು, ಉತ್ತರ ಪ್ರದೇಶದ ಹಿರಿಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಉತ್ತರ ಪ್ರದೇಶ ಮಾತ್ರವಲ್ಲದೆ, ರಾಜಸ್ಥಾನ, ಮುಂಬೈಯಲ್ಲೂ ಮಾರ್ಕೆಟ್ ವಿಸ್ತರಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.

ಇನ್ನು ಅಯ್ಯೋಧ್ಯೆಯಲ್ಲಿರುವ ಆಂಜನೇಯ ದೇವಾಸ್ಥಾನದಲ್ಲೂ  ನಂದಿನಿ ತುಪ್ಪ ಬಳಕೆ ಆಗುತ್ತಿದೆ. ಸುಮಾರು 10ವರ್ಷದಿಂದ ಬಳಕೆ ಆಗುತ್ತಿದೆ. ತಿರುಪತಿ ವಿವಾದ ನಂತರ 10-15%ಹೆಚ್ಚಾಗಿ ನಮ್ಮ ತುಪ್ಪ ಮಾರಾಟವಾಗುತ್ತಿದೆ. ನಾನು ಶಿರಡಿಗೆ ಹೋದಾಗಲೂ ಅಲ್ಲಿಯವರು ಬೇಡಿಕೆ ಇಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಶಿರಡಿಗೂ ಕೂಡ ಸರಬರಾಜು ಮಾಡುವ ವ್ಯವಸ್ಥೆ ಮಾಡುತ್ತೇವೆ ಎಂದು ಕೆಎಂಎಫ್‌ ಅಧ್ಯಕ್ಷ ಭೀಮಾ ನಾಯ್ಕ್‌ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

Tap to resize

Latest Videos

undefined

ಇತ್ತೀಚೆಗೆ KMF ನಿಂದ ಪ್ರೋಟಿನ್ ಬರಿತ ಇಡ್ಲಿ ದೋಸೆ ಹಿಟ್ಟು  ಕೂಡ ಮಾರುಕಟ್ಟೆಗೆ ಪರಿಚಯ ಮಾಡಿದೆ. 5% ಪ್ರೋಟೀನ್ ಇರುವ ಇಡ್ಲಿ ದೋಸೆ ಹಿಟ್ಟು ಇದಾಗಿದ್ದು. ಬೆಂಗಳೂರಿನ ಜನರ ಒತ್ತಾಯದ ಮೇರೆಗೆ ನಂದಿನಿ ದೋಸೆ ಹಿಟ್ಟು ಪರಿಚಯ ಮಾಡಲಾಗಿದೆ. 450 ಗ್ರಾಂ ಹಾಗು 900 ಗ್ರಾಂ ಪ್ಯಾಕೆಟ್ ಪರಿಚಯ ಮಾಡಲಾಗಿದೆ. 450 ಗ್ರಾಂಗೆ 40 ರೂ ಹಾಗೂ 900 ಗ್ರಾಂ ಪ್ಯಾಕೆಟ್ ಗೆ 80 ರೂಪಾಯಿ ನಿಗದಿ ಮಾಡಲಾಗಿದೆ.

Breaking: ಅಜೆರ್ಬೈಜಾನ್ ವಿಮಾನ ದುರಂತಕ್ಕೆ ರಷ್ಯಾ ಕಾರಣ, ಕ್ಷಮೆ ಕೇಳಿದ ವ್ಲಾಡಿಮಿರ್‌ ಪುಟಿನ್‌!

click me!