ನಂದಿನಿ ಹಾಲಿನ ದರ 2 ರೂ ಹೆಚ್ಚಳ ಮಾಡಿ ಕೆಎಂಎಫ್ ಆದೇಶ, ಹೊಸ ದರ ಪಟ್ಟಿ ಇಲ್ಲಿದೆ

By Gowthami K  |  First Published Jun 25, 2024, 11:38 AM IST

ಪೆಟ್ರೋಲ್ ಬೆಲೆ ಹೆಚ್ಚಳ ಬೆನ್ನಲ್ಲೇ ಮತ್ತೆ ಗ್ರಾಹಕರಿಗೆ ಬರೆ ಬಿದ್ದಿದೆ. ನಂದಿನಿ ಹಾಲಿನ ದರ ಹೆಚ್ಚಳ ಮಾಡಿ ಕೆಎಂಎಫ್ ಆದೇಶ ಹೊರಡಿಸಿದೆ.


ಬೆಂಗಳೂರು (ಜೂ.25): ಕರ್ನಾಟಕ ಹಾಲು ಮಂಡಳಿ ಹಾಲು ಸಂಗ್ರಹದಲ್ಲಿ ಎರಡನೇ ಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲಿ ಮೊದಲ ಸ್ಥಾನ. ಲೀಟರ್‌ ಹಾಲಿಗೆ 2.10 ರೂ ಬೆಲೆ ಹೆಚ್ಚಳ ಮಾಡಿ ಆದೇಶಿಸಿದೆ. ಈ ಮೂಲಕ ಗ್ರಾಹಕರಿಗೆ ಮತ್ತೆ ಬರೆ ಬಿದ್ದಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಪೆಟ್ರೋಲ್ , ಡೀಸೆಲ್ ಬೆಲೆ ಹೆಚ್ಚಳ ಮಾಡಿ ಆದೇಶಿಸಿತ್ತು. ಇದೀಗ ಕೆಎಂಎಫ್ ಹಾಲಿ ದರ ಹೆಚ್ಚಳ ಮಾಡಿದೆ. ಹಾಲಿನ ದರದ ಜೊತೆ ಪ್ರತೀ ಪ್ಯಾಕೆಟ್‌ನಲ್ಲಿ 50ml ಹಾಲು ಕೂಡ ಹೆಚ್ಚಳ ಮಾಡಲಿದೆ. ಹೀಗಾಗಿ ಇನ್ನು ಮುಂದೆ ಅರ್ಧ ಲೀ ಹಾಲಿನ ಪ್ಯಾಕೆಟ್ ನಲ್ಲಿ 50 ml ಹೆಚ್ಚು ಇರಲಿದ್ದು, ಒಟ್ಟು  550 ml ಹಾಲು ಸಿಗಲಿದೆ. ನಾಳೆಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.

ಬ್ಯಾಂಕ್‌ ಉದ್ಯೋಗ ಬಯಸುವವರಿಗೆ ಸುವರ್ಣಾವಕಾಶ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 586 ಹುದ್ದೆ

Tap to resize

Latest Videos

ಈ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮನಾಯ್ಕ್ ಸುದ್ದಿಗೋಷ್ಠಿ ನಡೆಸಿ,  98 ಲಕ್ಷ 17ಸಾವಿರ ಲೀ ಹಾಲು ಸಂಗ್ರಹ ಆಗ್ತಿದೆ. ಸದ್ಯದಲ್ಲೇ ಒಂದು ಕೋಟಿ ಸಂಗ್ರಹ ಗುರಿ ಮುಟ್ಟಲಿದೆ. ಇದು ದಾಖಲೆ. ರಾಜ್ಯದ 27 ಲಕ್ಷ ಹಾಲು ಉತ್ಪಾದಕರು ಇದಕ್ಕೆ ಕಾರಣ. ಸದ್ಯದ ಶೇಖರಣೆಯಲ್ಲಿ 30 ಲಕ್ಷ ಪೌಡರ್ ಗೆ ಕಳುಹಿಸುತ್ತಿದ್ದೇವೆ. ಇದರಲ್ಲಿ ನಮ್ಮ ಬಂಡವಾಳ ಸ್ವಲ್ಪ ಡೆಡ್ ಆಗ್ತಿದೆ. 27 ಲಕ್ಷ ಹಾಲು ಉತ್ಪಾದಕರು ಗ್ರಾಹಕರಿಗೆ ತೊಂದರೆಯಾಗಬಾರದು. ಇಬ್ಬರು ಕೂಡ ನಮಗೆ ಎರಡು ಕಣ್ಣಿದ್ದ ಹಾಗೆ. ಲೀ ಗೆ ಸದ್ಯ ಗ್ರಾಹಕರಿಗೆ 42 ರೂ ಇದೆ ಎಂದಿದ್ದಾರೆ.

ತನ್ನ ಅಗಾಧ ಸೌಂದರ್ಯಕ್ಕೆ ಅವಿವಾಹಿತಳಾಗಿಯೇ ಉಳಿದ ಜಗತ್ತಿನ ಅತ್ಯಂತ ಸುಂದರಿ!

ಸಾವಿರ ಎಂಎಲ್ ಬರ್ತಿದ್ದ ಹಾಲು ಇನ್ಮೇಲೆ ಸಾವಿರದ ಐವತ್ತು ಎಂಎಲ್ ಗೆ ಏರಿಕೆಯಾಗಲಿದೆ. ಅಂದರೆ 1ಲೀಟರ್‌ ಹಾಲಿನ ಪ್ಯಾಕೆಟ್‌ನಲ್ಲಿ 50ml ಸೇರ್ಪಟೆಯಾಗಿ,  1ಲೀಟರ್ 50ml ಹಾಲು ಇರಲಿದೆ. ಹಾಗಾಗಿ ಹೆಚ್ಚುವರಿ ಹಾಲಿಗೆ 2 ರೂ ಹೆಚ್ಚಳ ಮಾಡುತ್ತಿದ್ದೇವೆ. ಹಾಲು ಹೆಚ್ಚಳ ಮಾಡಿದ್ದಕ್ಕೆ 2ರೂ ದರ ಏರಿಕೆ ಮಾಡಿದ್ದೇವೆ ಎಂದು ಕೆಎಂಎಫ್‌ ಅಧ್ಯಕ್ಷರು ತಿಳಿಸಿದ್ದಾರೆ. ಹಾಲಿನ ದರ ಮಾತ್ರ ಹೆಚ್ಚಳ ಮಾಡಲಾಗಿದೆ. ಮೊಸರಿಗೆ ಈ ಹಿಂದಿನ ದರವೇ ಅನ್ವಯವಾಗಲಿದೆ.

ಹಾಲಿನ‌ ಲೀಟರ್ ಹಾಲಿನ ಹೊಸ ದರ ಪಟ್ಟಿ ಹೀಗಿದೆ:
ನೀಲಿ ಪ್ಯಾಕೆಟ್ ಹಾಲು 42 ರಿಂದ 44 ರೂ
ನೀಲಿ ಪ್ಯಾಕೆಟ್ (ಟೋನ್ಡ್ ಹಾಲು) 43 ರಿಂದ 45ರೂ
ಆರೆಂಜ್ ಪ್ಯಾಕೆಟ್ ಹಾಲು 46ರಿಂದ 48 ರೂ
ಆರೆಂಜ್ ಸ್ಪೆಷಲ್ ಹಾಲು 48 ರಿಂದ 50 ರೂ
ಶುಭಂ ಹಾಲು 48ರಿಂದ 50 ರೂ
ಸಮೃದ್ದಿ ಹಾಲು 51ರಿಂದ 53ರೂ
ಶುಭಂ (ಟೋನ್ಡ್ ಹಾಲು) 49ರಿಂದ 51ರೂ
ಸಂತೃಪ್ತಿ ಹಾಲು 55 ರಿಂದ 57 ರೂ
ಶುಭಂ ಗೋಲ್ಡ್ ಹಾಲು 49ರಿಂದ 51ರೂ
ಶುಭಂ ಡಬಲ್ ಟೋನ್ಡ್ ಹಾಲು 41 ರಿಂದ 43 ರೂ ಗೆ ಏರಿಕೆ

ದರ ಏರಿಕೆಗೆ ಕಾರಣಗಳೇನು?
15% ಹಾಲು ಸಂಗ್ರಹ ಹೆಚ್ಚಳ ಆಗಿದೆ. ಇದನ್ನ ಮಾರಾಟ ಮಾಡುವ ದೃಷ್ಟಿಯಿಂದ ಪ್ರತಿ ಪ್ಯಾಕೇಟ್ ಗೆ  50 ಎಂಎಲ್ ಹೆಚ್ಚುವರಿ ಹಾಲನ್ನ ಪ್ಯಾಕೇಟ್ ನಲ್ಲಿ ನೀಡಲಿದ್ದೇವೆ. ಹಾಗಾಗಿ ಹೆಚ್ಚುವರಿ ಹಾಲು ನೀಡಿ 2 ರೂ ಹೆಚ್ಚಳ ಮಾಡುತ್ತಿದ್ದೇವೆ. ಇದು ದರ ಏರಿಕೆ ಅಲ್ಲ. ಪ್ರತಿ ಪ್ಯಾಕೆಟ್ ಗೆ ಹೆಚ್ಚುವರಿ ಹಾಲು ಸೇರಿಸಿ ದರ ಏರಿಕೆ ಮಾಡಿದ್ದೇವೆ ಎಂದು ಕೆಎಂಎಫ್ ಸಮರ್ಥನೆ ಮಾಡಿಕೊಂಡಿದೆ.

click me!