ಕೆಎಂಎಫ್‌ ನೌಕರರೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ವ್ಯಾಪ್ತಿಗೆ: ಹೈಕೋರ್ಟ್‌

By Govindaraj SFirst Published Aug 11, 2022, 4:45 AM IST
Highlights

ಕರ್ನಾಟಕ ಹಾಲು ಮಹಾ ಮಂಡಲದ (ಕೆಎಂಎಫ್‌) ನೌಕರರು ಸಹ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ವ್ಯಾಪ್ತಿಗೆ ಬರಲಿದ್ದಾರೆ ಎಂದು ಹೈಕೋರ್ಟ್‌ ಮಹತ್ವದ ಆದೇಶ ಮಾಡಿದೆ. ನಂದಿನಿ ಹಾಲು ಉತ್ಪನ್ನಗಳ ವ್ಯವಸ್ಥಾಪಕ ನಿರ್ದೇಶಕ ವಿ.ಕೃಷ್ಣಾರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ಬೆಂಗಳೂರು (ಆ.11): ಕರ್ನಾಟಕ ಹಾಲು ಮಹಾ ಮಂಡಲದ (ಕೆಎಂಎಫ್‌) ನೌಕರರು ಸಹ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ವ್ಯಾಪ್ತಿಗೆ ಬರಲಿದ್ದಾರೆ ಎಂದು ಹೈಕೋರ್ಟ್‌ ಮಹತ್ವದ ಆದೇಶ ಮಾಡಿದೆ. ನಂದಿನಿ ಹಾಲು ಉತ್ಪನ್ನಗಳ ವ್ಯವಸ್ಥಾಪಕ ನಿರ್ದೇಶಕ ವಿ.ಕೃಷ್ಣಾರೆಡ್ಡಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಈ ಆದೇಶ ಮಾಡಿದೆ.

ಅಲ್ಲದೆ, ಕೇವಲ ಸರ್ಕಾರಿ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕ್ರಮ ಜರುಗಿಸಬೇಕಾಗಿದೆ. ಆದರೆ, ತಾನು ಸರ್ಕಾರಿ ನೌಕರನಲ್ಲ. ಕೆಎಂಎಫ್‌ ಸಿಬ್ಬಂದಿಯಾಗಿದ್ದೇನೆ. ತನಗೆ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅನ್ವಯಿಸುವುದಿಲ್ಲ. ಆದಾಯಕ್ಕೂ ಮೀರಿದ ಆಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಎಸಿಬಿ ತಮ್ಮ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದುಪಡಿಸುವಂತೆ ಕೋರಿ ವಿ.ಕೃಷ್ಣ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ವಜಾಗೊಳಿಸಿದೆ.

ಪೊಲೀಸರ ಮೇಲೆ ದಾಳಿ ಉಗ್ರ ಕೃತ್ಯ: ಹೈಕೋರ್ಟ್‌

ಕೋರ್ಟ್‌ ಕಟು ನುಡಿ: ‘ಅರ್ಜಿದಾರರು ನಂದಿನಿ ಉತ್ಪನ್ನಗಳ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಅವರು ಕೆಎಂಎಫ್‌ ಘಟಕದಡಿ ಬರುತ್ತಾರೆ. ಸಹಕಾರಿ ಸಂಘವಾಗಿರುವ ಕೆಎಂಎಫ್‌ ಸಾರ್ವಜನಿಕ ಸಂಸ್ಥೆಯಾಗಿದೆ. ಅದರ ಉದ್ಯೋಗಿಗಳು ಸಹ ಸರ್ಕಾರಿ ನೌಕರರೆಂದೇ ಪರಿಗಣಿಸಲ್ಪಡುತ್ತಾರೆ ಹಾಗೂ ಅವರನ್ನು ಸಾರ್ವಜನಿಕ ಸಿಬ್ಬಂದಿ ವ್ಯಾಪ್ತಿಗೆ ಒಳಪಡಿಸಬಹುದಾಗಿದೆ. ಇನ್ನೂ ಅರ್ಜಿದಾರರ ಹೊಂದಿರುವ ಹುದ್ದೆಯು ಸಾರ್ವಜನಿಕ ನಿಬಂಧನೆಗೆ ಒಳಪಟ್ಟಿರುವುದಲ್ಲಿ ಯಾವುದೇ ಸಂದೇಶಹವಿಲ್ಲ. ಹಾಗಾಗಿ ಅರ್ಜಿದಾರರೂ ಭ್ರಷ್ಟಾಚಾರ ನಿಗ್ರಹ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತಾರೆ. 

ಆದಾಯ ಮೀರಿ ಆಸ್ತಿ ಗಳಿಸಿದ ಆರೋಪ ಇರುವುದರಿಂದ ಅವರು ವಿಚಾರಣೆ ಎದುರಿಸಬೇಕಾಗಿದೆ’ ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ. ಅಲ್ಲದೆ, ‘ಭ್ರಷ್ಟಾಚಾರವು ಸಮಾಜದಲ್ಲಿ ವಿವಿಧ ಸ್ವರೂಪಗಳಲ್ಲಿ ಜನರ ಜೀವನ ಆವರಿಸಿದೆ. ಲಂಚಗುಳಿತನವು ಸಾರ್ವಜನಿಕ ಆಡಳಿತಕ್ಕೆ ಅಪಾಯಕಾರಿ. ದೇಶದ ಉತ್ತಮ ಆಡಳಿತಕ್ಕಾಗಿ ಭ್ರಷ್ಟಾಚಾರಕ್ಕೆ ಶೂನ್ಯ ಸಹಿಷ್ಣುತೆ ಅನಿವಾರ್ಯವಾಗಿದೆ’ ಎಂದು ನ್ಯಾಯಪೀಠ ಕಟುವಾಗಿ ನುಡಿದೆ

ಮದುವೆ ಆಸೆ ತೋರಿಸಿ ರೇಪ್‌: ಕೋರ್ಟ್‌ಲ್ಲಿ ವಿಚಿತ್ರ ಕೇಸ್‌ ರದ್ದು

ಪ್ರಕರಣ ಏನು?: ಆದಾಯ ಮೀರಿ ಶೇ.107 ಆಸ್ತಿ ಹೊಂದಿದ ಆರೋಪ ಸಂಬಂಧ ವಿ. ಕೃಷ್ಣಾರೆಡ್ಡಿ ವಿರುದ್ಧ 2021 ನ.20ರಂದು ದಾಳಿ ನಡೆಸಿದ್ದ ಎಸಿಬಿ ಬಳಿಕ ಪ್ರಕರಣ ದಾಖಲಿಸಿತ್ತು. ಆ ಪ್ರಕರಣ ರದ್ದತಿಗೆ ಕೋರಿ ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.

click me!