
ಶಿವಮೊಗ್ಗ (ಮಾ.21): ದೆಹಲಿಯಲ್ಲಿ ನಾಲ್ಕು ತಿಂಗಳಿಂದ ರೈತರ ಹೋರಾಟ ನಡೆದಿದೆ. ಕೇಂದ್ರ ಸರ್ಕಾರದ ಮೂರು ಕೃಷಿ ವಿರೋಧಿ ಕಾಯ್ದೆಗಳನ್ನು ಹಿಂಪಡೆಯುವ ಸಲುವಾಗಿ ಹೋರಾಟ ನಡೆದಿದೆ. ಬಹು ರಾಷ್ಟ್ರೀಯ ಕಂಪೆನಿಗಳ ಹುನ್ನಾರದಿಂದ ಕಾಯ್ದೆ ಬಂದಿದೆ ಎಂದು ರಾಷ್ಟ್ರೀಯ ಕಿಸಾನ್ ಮೋರ್ಚಾದ ರಾಕೇಶ್ ಸಿಂಗ್ ಟಿಕಾಯತ್ ಮತ್ತು ಯುದ್ದವೀರ್ ಸಿಂಗ್ ಹೇಳಿದರು.
ಶಿವಮೊಗ್ಗದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಕೇಶ್ ಸಿಂಗ್ ಟಿಕಾಯತ್ ಮತ್ತು ಯುದ್ದವೀರ್ ಸಿಂಗ್, ರೈತ ಬೆಳೆದ ಬೆಳೆಗಳನ್ನು ಕಡಿಮೆ ದರದಲ್ಲಿ ಖರೀದಿಸಿ ಗ್ರಾಹಕರಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ಕಂಪೆನಿಯ ವಿರುದ್ಧ ನಮ್ಮ ಹೋರಾಟ. ಈ ನೀತಿಯ ವಿರುದ್ಧ ದೃಶ್ಯ, ಮುದ್ರಣ, ಸಾಮಾಜಿಕ ಜಾಲತಾಣದಲ್ಲಿ ಲೇಖನ ಪ್ರಕಟಿಸಿದರೇ ಕೇಸ್ ದಾಖಲಾಗುತ್ತಿದೆ. ವಿದ್ಯುತ್, ಬೀಜ, ಕೃಷಿ ಹೀಗೆ ಇವುಗಳ ಮೇಲೆ ಕಾಯ್ದೆಗಳನ್ನು ಜಾರಿಗೆ ತಂದು ಜನ ಸಾಮಾನ್ಯರ ಜೀವನ ಸಂಕಷ್ಟಕ್ಕೆ ಸಿಲುಕುತ್ತದೆ ಎಂದರು.
ಡಿಸೆಂಬರ್‌ವರೆಗೂ ರೈತ ಚಳವಳಿ ನಡೆಯಲಿದೆ: ರಾಕೇಶ್ ಟಿಕಾಯತ್
ದೆಹಲಿಯಲ್ಲಿ ಮೋದಿ ಮೀಡಿಯ ಮತ್ತು ನ್ಯಾಷನಲ್ ಮೀಡಿಯಾ ಎಂದು ಎರಡು ಗುಂಪು ಇದೆ. ಹೋರಾಟದ ಪರವಾಗಿ ಲೇಖನ ಬರೆಯುವ ಪತ್ರಕರ್ತರಿದ್ದಾರೆ. ಅವರ ಮೇಲೆ ದಾಳಿ ನಡೆದಿದ್ದು ಅವರ ರಕ್ಷಣೆ ಗೂ ನಾವು ಮುಂದಾಗಬೇಕಿದೆ. 8 ಲಕ್ಷ ಮಿಲಿಯನ್ ಟನ್ ಸ್ಟೋರೇಜ್ ಮಾಡುವ ಗೋದಾಮು ಗಳನ್ನು ಅದಾನಿಯಂತಹವರು ಹೊಂದಿದ್ದಾರೆ. ಹೀಗಾಗಿ ನಾವು ರೋಟಿ ತಿಜೋರಿಯಲ್ಲಿ ಬಂಧಿಸಿ ಇಡುತ್ತೇವೆ ಎಂದು ಅವರು ಹೇಳಿದರು.
ದೆಹಲಿಯಲ್ಲಿ ಕೇವಲ ರೈತರ ಹೋರಾಟ ನಡೆಯುತ್ತಿಲ್ಲ. ಈ ಹೋರಾಟಕ್ಕೆ ಎಲ್ಲಾ ವರ್ಗದ ಜನರಿಂದ ಬೆಂಬಲ ಸಿಕ್ಕಿದೆ ಎಂದು ಕಿಸಾನ್ ಮೋರ್ಚಾ ಮುಖಂಡರು ಎಂದು ಅಸಮಾಧಾನ ಹೊರಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ