ರಸ್ತೆ ಬದಿ ನಿಂತಿದ್ದ ಬಾಲಕನಿಗೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟ ಘಟನೆ ಧಾರವಾಡ-ಹಳಿಯಾಳ ರಸ್ತೆಯಲ್ಲಿನ ತಾಲೂಕಿನ ಸಲಕಿನಕೊಪ್ಪದ ಬಳಿ ಸಂಭವಿಸಿದೆ.
ಧಾರವಾಡ (ಅ.14) : ರಸ್ತೆ ಬದಿ ನಿಂತಿದ್ದ ಬಾಲಕನಿಗೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಮೃತಪಟ್ಟ ಘಟನೆ ಧಾರವಾಡ-ಹಳಿಯಾಳ ರಸ್ತೆಯಲ್ಲಿನ ತಾಲೂಕಿನ ಸಲಕಿನಕೊಪ್ಪದ ಬಳಿ ಸಂಭವಿಸಿದೆ.
ಮುಧೋಳ ಮೂಲದ ಅರ್ಷದ ಅಹ್ಮದ ಸಲೀಂ ಚೌಧರಿ (8) ಮೃತಪಟ್ಟಿದ್ದು, ದಾಂಡೇಲಿಗೆ ತೆರಳುತ್ತಿದ್ದ ಸಮಯದಲ್ಲಿ ಧಾರವಾಡ ತಾಲೂಕಿನ ಸಲಕಿನಕೊಪ್ಪದ ಬಳಿ ಉಪಹಾರಕ್ಕಾಗಿ ಹೊಟೆಲ್ ಬಳಿ ಕಾರು ನಿಲ್ಲಿಸಿದ್ದರು.
ಉಪಹಾರ ಮುಗಿಸಿ ಬಾಲಕ ಕಾರು ಬಳಿ ನಿಂತ ಸಮಯದಲ್ಲಿ, ದಾಂಡೇಲಿಯಿಂದ ಸೊಲ್ಲಾಪುರಕ್ಕೆ ತೆರಳುತ್ತಿದ್ದ ಬಸ್ ಡಿಕ್ಕಿ ಹೊಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಿಸದೇ ಆತ ಕೊನೆಯುದಿರೆಳೆದಿದ್ದಾನೆ.
ಬೆಂಗಳೂರು: ಬೆಳ್ಳಂಬೆಳಗ್ಗೆ ಕಾರು-ಲಾರಿ ನಡುವೆ ಭೀಕರ ಅಪಘಾತ; ತಾಯಿ-ಮಕ್ಕಳು ಸಾವು!
ನಿಯಂತ್ರಣ ತಪ್ಪಿ ಸೇತುವೆ ಕಟ್ಟೆ ಏರಿದ ಲಾರಿ
ಕಂಪ್ಲಿ: ಸಮೀಪದ ಚಿಕ್ಕ ಜಂತಕಲ್ ಗ್ರಾಮದ ಈರಣ್ಣ ಕಾಲುವೆಯ ಬಳಿ ಬಸ್ ಹಾಗೂ ಲಾರಿಗಳು ಅತೀ ವೇಗವಾಗಿ ಬಂದ ಕಾರಣ ಲಾರಿ ಚಾಲಕ ವಾಹನ ನಿಯಂತ್ರಿಸಲು ಸಾಧ್ಯವಾಗದೆ ಕಾಲುವೆಯ ಸೇತುವೆ ಕಟ್ಟೆ ಮೇಲೆ ಹತ್ತಿಸಿದ ಘಟನೆ ಸಂಭವಿಸಿದೆ.
ಬಸ್‌ಗೆ ಲಾರಿ ವಾಲಿ ನಿಂತಿದ್ದು, ಬಸ್‌ನ ಕೆಲ ಕಿಟಕಿಯ ಗಾಜುಗಳು ಬಿರುಕುಬಿಟ್ಟಿವೆ. ಅಲ್ಲದೆ ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಇದರಿಂದಾಗಿ ಸ್ವಲ್ಪ ಹೊತ್ತು ರಸ್ತೆ ಸಂಚಾರಕ್ಕೆ ಸಮಸ್ಯೆಯಾಗಿತ್ತು. ಬಳಿಕ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಅಪಘಾತ ಸಂಭವಿಸಿದ ಸ್ಥಳದ ಪಕ್ಕದಲ್ಲಿನ ಕಾಲುವೆ ಬದಿಯ ಹಾದಿಯಲ್ಲಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟ ಬಳಿಕ ವಾಹನಗಳ ದಟ್ಟಣೆ ಕಡಿಮೆಯಾಯಿತು. ಬಳಿಕ ಕ್ರೇನ್ ಸಹಾಯದಿಂದ ಲಾರಿ- ಬಸ್‌ಗಳನ್ನು ಹೊರ ತೆಗೆಯಲಾಯಿತು.