ದೊಡ್ಡಬಳ್ಳಾಪುರ ದಾಬಸ್‌ಪೇಟೆ ನಡುವೆ ಕೆಹೆಚ್ಐಆರ್ ಸಿಟಿ ಪ್ರಾಜೆಕ್ಟ್ ಆರಂಭ; ಎಂ.ಬಿ. ಪಾಟೀಲ

By Sathish Kumar KH  |  First Published Aug 20, 2024, 8:38 PM IST

ದೊಡ್ಡಬಳ್ಳಾಪುರ ದಾಬಸ್‌ಪೇಟೆ ನಡುವೆ 2000 ಎಕರೆ ಪ್ರದೇಶದಲ್ಲಿ ಶೀಘ್ರವೇ ಕೆಹೆಚ್‌ಐಆರ್ ಸಿಟಿ ನಿರ್ಮಾಣ ಯೋಜನೆ ಆರಂಭಿಸಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.


ಬೆಂಗಳೂರು (ಆ.20): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜ್ಞಾನ, ಆರೋಗ್ಯ, ನಾವೀನ್ಯತೆ ಮತ್ತು ಸಂಶೋಧನೆ ನಗರ (ಕೆಹೆಚ್ಐಆರ್ ಸಿಟಿ) ನಿರ್ಮಾಣವನ್ನು ದೊಡ್ಡಬಳ್ಳಾಪುರ- ದಾಬಸ್ ಪೇಟೆ ಮಧ್ಯದಲ್ಲಿ  2000 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಈ ಕುರಿತಂತೆ ಮೊದಲ ಹಂತದ ಯೋಜನೆ ಚಾಲನೆ ನೀಡಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

ಬೆಂಗಳೂರಿನ ಖನಿಜ ಭವನದಲ್ಲಿ ಮಂಗಳವಾರ ನಡೆದ ಕೆಎಚ್ಐಆರ್ ಸಿಟಿ (KHIR - Knowledge, Healthcare, Innovation and Research City) ಯೋಜನೆಯ ಸಲಹಾ ಮಂಡಳಿಯ ಪ್ರಥಮ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಕೆಎಚ್ಐಆರ್ ಸಿಟಿ ಈಗ 2,000 ಎಕರೆ ಜಾಗದಲ್ಲಿ ತಲೆ ಎತ್ತಲಿದೆ. ಇದರಲ್ಲಿ 500 ಎಕರೆಯ ಮೊದಲ ಹಂತದ ಯೋಜನೆಗೆ ಸದ್ಯದಲ್ಲೇ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಕೆಎಚ್ಐಆರ್ ಸಿಟಿ ಯೋಜನೆ ವಿಸ್ತರಣೆ ಆಗಲಿದೆ. ಇದಕ್ಕೆ ಸಲಹಾ ಸಮಿತಿಯ ಸದಸ್ಯರ ಸಹಕಾರ ಮತ್ತು ಪಾಲ್ಗೊಳ್ಳುವಿಕೆ ತುಂಬಾ ಅಗತ್ಯವಿದೆ ಎಂದು ಹೇಳಿದರು.

Tap to resize

Latest Videos

undefined

ನನ್ನ ಲೈಫ್ ನನ್ನಿಷ್ಟ, ನಾನು ಬೆಂಗಳೂರು ಪಾರ್ಟಿಗೆ ಹೋಗಿದ್ದೆ ಏನಿವಾಗ? ನಟಿ ಹೇಮಾ

ಇದೊಂದು ಸರ್ಕಾರದಿಂದ ಅಭಿವೃದ್ಧಿ ಮಾಡಲಾಗುತ್ತಿರುವ ಅಸಾಂಪ್ರದಾಯಿಕ ಯೋಜನೆಯಾಗಿದೆ. ಇದು ಬೆಂಗಳೂರು ನಗರದ ಆರ್ಥಿಕತೆಯನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ಯಲಿದೆ. ಸಲಹಾ ಸಮಿತಿಯ ಸದಸ್ಯರು ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಸಲಹಾ ಮಂಡಳಿಯ ಸದಸ್ಯರಿಗೆ ಭೂಮಿಪುತ್ರ ಸಂಸ್ಥೆಯು ನಿರ್ಮಿಸಿರುವ ಯೋಜನೆಯ ಪ್ರಾತ್ಯಕ್ಷಿಕೆಯನ್ನು ತೋರಿಸಲಾಯಿತು. ಜತೆಗೆ ಯೋಜನೆಗೆ ಸಂಬಂಧಿಸಿದಂತೆ ಸಲಹಾ ಮಂಡಳಿಯ ಸದಸ್ಯರಿಂದ ಸಲಹೆ ಸೂಚನೆಗಳನ್ನು ಆಲಿಸಲಾಯಿತು. ದೊಡ್ಡಬಳ್ಳಾಪುರ- ದಾಬಸ್ ಪೇಟೆ ಮಧ್ಯದಲ್ಲಿ ಬರುವ ಕೆಎಚ್ಐಆರ್ ಸಿಟಿಯ ಪರಿಕಲ್ಪನೆ ಅತ್ಯದ್ಭುತವಾಗಿದ್ದು ಬೆಂಗಳೂರಿನ ಬೆಳವಣಿಗೆಗೆ ಅತ್ಯಗತ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಗೃಹ ಜ್ಯೋತಿ ಯೋಜನೆಯ ವಿದ್ಯುತ್ ಕದ್ದ ಕಾಂಗ್ರೆಸ್ ನಾಯಕಿ; 1 ಲಕ್ಷ ರೂ. ದಂಡ ವಿಧಿಸಿದ ಮೆಸ್ಕಾಂ!

ಕೆಹೆಚ್ಐಆರ್ ಸಿಟಿ ಯೋಜನೆಯ ಸಲಹಾ ಮಂಡಳಿ ಸದಸ್ಯರಾದ ನಾರಾಯಣ ಹೃದ್ರೋಗ ಸಂಸ್ಥೆ ಅಧ್ಯಕ್ಷ ಡಾ.ದೇವಿಶೆಟ್ಟಿ, ಬಯೊಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ, ಇನ್ಫೋಸಿಸ್ ಆಡಳಿತ ಮಂಡಳಿ ಸದಸ್ಯ ಮೋಹನದಾಸ್ ಪೈ, ಹ್ರದ್ರೋಗ ತಜ್ಞ ಡಾ.ವಿವೇಕ್ ಜವಳಿ, ಆ್ಯಕ್ಸಲ್ ಪಾಲುದಾರ ಪ್ರಶಾಂತ್ ಪ್ರಕಾಶ್, ಅಮೆರಿಕಾದ ಬೋಸ್ಟನ್ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಟ್ರಸ್ಟಿ ರಾಂಚ್ ಕಿಂಬಾಲ್, ವೆಕ್ಸ್ ಫೋರ್ಡ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ಸಂಸ್ಥೆ ಕಾರ್ಯನಿರ್ವಾಹಕ ಉಪಾಧ್ಯಕ್ಷ ಥಾಮಸ್ ಓಶ ಮತ್ತು ಆಸ್ಟೀನ್ ನ ನಾವೀನ್ಯತೆ ಮತ್ತು ಉದ್ಯಮಶೀಲತೆ ವಿಭಾಗದ ಡೀನ್ ಸ್ಟೀಫನ್ ಎಕ್ಕರ್  ಅವರು ವರ್ಚುಯಲ್ ಆಗಿ ಸಭೆಯಲ್ಲಿ ಪಾಲ್ಗೊಂಡಿದ್ದರು.

click me!