ಕೋಟೆ ನಾಡು ಚಿತ್ರದುರ್ಗದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಆದ್ರೆ ಹೆದ್ದಾರಿ ಸ್ವಚ್ಚತೆ ಹಾಗೂ ನಿರ್ವಹಣೆ ಮಾಡಬೇಕಾದ ಅಧಿಕಾರಿಗಳು ಹಾಗು ಗುತ್ತಿಗೆದಾರರ ನಿರ್ಲಕ್ಷದಿಂದಾಗಿ ಅಲ್ಲಿನ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ (ಆ.20) ಕೋಟೆ ನಾಡು ಚಿತ್ರದುರ್ಗದಲ್ಲಿ ಮೂರು ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿವೆ. ಆದ್ರೆ ಹೆದ್ದಾರಿ ಸ್ವಚ್ಚತೆ ಹಾಗೂ ನಿರ್ವಹಣೆ ಮಾಡಬೇಕಾದ ಅಧಿಕಾರಿಗಳು ಹಾಗು ಗುತ್ತಿಗೆದಾರರ ನಿರ್ಲಕ್ಷದಿಂದಾಗಿ ಅಲ್ಲಿನ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ಶಿಥಿಲಾವಸ್ಥೆಗೆ ತಲುಪಿದ ಹೈವೆ ತಡೆಗೋಡೆ. ಬಿರುಕು ಬಿಟ್ಟ ರಸ್ತೆಗಳು. ನಿರ್ವಹಣೆ ಇಲ್ಲದೇ ಗಿಡ ಮರ ಬೆಳೆದ ಫ್ಲೈಓವರ್ ಗಳು. ಪ್ರಾಣಭಯದಿಂದ ಓಡಾಡುವ ವಾಹನ ಸವಾರರು. ಚಿತ್ರದುರ್ಗದ ಚಳ್ಳಕೆರೆ ಗೇಟ್ ಬಳಿಯ ಫ್ಲೈಓವರ್ ನಲ್ಲಿ ನಿತ್ಯ ನರಕಯಾತನೆಯಾಗಿದೆ., ಚಿತ್ರದುರ್ಗದಿಂದ ಹಿರಿಯೂರು ವರೆಗೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 4 ರಲ್ಲಿರುವ ಗುಯಿಲಾಳು ಟೋಲ್ ಸಿಬ್ಬಂದಿ, ವಾಹನ ಸವಾರರಲ್ಲಿ ಕೇವಲ ಹಣ ವಸೂಲಿಗೆ ಸೀಮಿತವಾಗಿದ್ದಾರೆ ಹೊರೆತು ಹೆದ್ದಾರಿ ಹಾಗು ಫ್ಲೈಓವರ್ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಹೀಗಾಗಿ ಈ ಮಾರ್ಗದಲ್ಲಿನ ಹೆದ್ದಾರಿಯಲ್ಲಿರುವ ಫ್ಲೈಓವರ್ ಬದಿಯ ತಡೆಗೋಡೆ ಯೊಳಗೆ ಅರಳಿಗಿಡಗಳು ಬೆಳೆದು ನಿಂತಿದ್ದು,ಫ್ಲೈಓವರ್ ಕುಸಿದುಬಿಳು ಸ್ಥಿತಿಯಲ್ಲಿದೆ ವಾಹನ ಸವಾರರು ಓಡಾಡಲು ಭಯಪಡುವಂತಾಗಿದೆ. ಇತ್ತೀಚೆಗೆ ಚಿತ್ರದುರ್ಗ ತಾಲ್ಲೂಕಿನ ಕ್ಯಾದಿಗ್ಗೆರೆ ಬಳಿ ತಡೆಗೋಡೆ ಯ ಸಿಮೆಂಟ್ ಕಾಂಕ್ರೀಟ್ ತುಂಡೊಂದು ಸರ್ವೀಸ್ ರಸ್ತೆಗೆ ಬಿದ್ದಿದ್ದು, ವಾಹನ ಸವಾರರು ಕ್ಷಣಮಾತ್ರದಲ್ಲಿ ಈ ಅಪಾಯದಿಂದ ಪಾರಾಗಿದ್ದಾರೆ. ಇದರಿಂದಾಗಿ ಇಂದಲ್ಲ,ನಾಳೆ ಹೆದ್ದಾರಿಯಲ್ಲಿ ದೊಡ್ಡಅವಘಡ ಸಂಭವಿಸುವ ಆತಂಕ ಶುರುವಾಗಿದೆ.
ನಿತ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಸವಾರರು ಪ್ರಾಣವನ್ನು ಕೈಯಲ್ಲಿಡಿದು ಸಾಗುವಂತಾಗಿದೆ. ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ. ಇನ್ನು ಚತುಷ್ಪದ ರಸ್ತೆ ನಿರ್ಮಾಣವಾದ್ರೆ ಅಪಘಾಯಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಭಾವಿಸಿದ್ದ ಕೋಟೆನಾಡಿನ ಜನರ ನಂಬಿಕೆ ಹುಸಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಹಾಗು ಸರ್ವೀಸ್ ರಸ್ತೆ ನಿರ್ಮಾಣ ಮಾಡಿದ ಗುತ್ತಿಗೆದಾರ ನಿಯಮನುಸಾರ ನಿರ್ವಹಣೆ ಮಾಡದೇ ನಿರ್ಲಕ್ಷ್ಯ ತೋರಿದ್ದು, ಜನರ ಬಲಿಗಾಗಿ ರಸ್ತೆಗಳು ಬಾಯ್ತೆರೆದು ಕುಳಿತಿವೆ. ಆದ್ರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆಂದು ನಾಗರೀಕರು ಆರೋಪಿಸಿದ್ದಾರ
ಕೊಲ್ಕತ್ತಾ ವೈದ್ಯೆ ರೇಪ್, ಮರ್ಡರ್ ಪ್ರಕರಣ ಹಿನ್ನೆಲೆ: ವೈದ್ಯಕೀಯ ಸಿಬ್ಬಂದಿ, ಮಹಿಳೆಯರ ರಕ್ಷಣೆಗೆ ಮುಂದಾದ ಸರ್ಕಾರ
ಒಟ್ಟಾರೆ ಹೆದ್ದಾರಿಯಲ್ಲಿನ ಫ್ಲೈಓವರ್ ಹಾಗು ರಸ್ತೆ ನಿರ್ವಹಣೆ ಮಾಡಬೇಕಾದ ಗುತ್ತಿಗೆದಾರರು ಹಾಗು ಅಧಿಕಾರಿಗಳು ಮೈ ಮರೆತಿದ್ದಾರೆ. ಹೀಗಾಗಿ ನತಡೆಗೋಡೆಯಲ್ಲಿ ಗಿಡಮರಗಳು ಬೆಳೆದು,ರಸ್ತೆಗಳು ಮೃತ್ಯು ಕೂಪಗಳಾಗಿ ಮಾರ್ಪಟ್ಟಿವೆ. ಇನ್ನಾದ್ರು ಸಂಬಂಧಪಟ್ಟವರು ನಿಯಮಾನುಸಾರ ಹೆದ್ದಾರಿ ನಿರ್ವಹಣೆಗೆ ಮುಂದಾಗಬೇಕಿದೆ. ಸಾರ್ವಜನಿಕರ ಆತಂಕ ಶಮನ ಗೊಳಿಸಬೇಕಿದೆ.