ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಚರಂಡಿ ನೀರೆಲ್ಲ ರಸ್ತೆಮೇಲೆ ಹರಿಯುತ್ತಿವೆ. ಫ್ಲೈಓವರ್‌ಗಳೇ ಜಲಪಾತದಂತೆ ಸುರಿಯುತ್ತಿವೆ. ಭಾರೀ ಮಳೆಗೆ ಜಲಪಾತದಂತಾಗಿರುವ ಪೀಣ್ಯದ ಫ್ಲೈಓವರ್ ಅಧ್ವಾನ ನೋಡಿ ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ವ್ಯಂಗ್ಯ ಮಾಡಿದ್ದಾರೆ.
ಬೆಂಗಳೂರು (ಆ.20): ನಗರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಚರಂಡಿ ನೀರೆಲ್ಲ ರಸ್ತೆಮೇಲೆ ಹರಿಯುತ್ತಿವೆ. ಫ್ಲೈಓವರ್‌ಗಳೇ ಜಲಪಾತದಂತೆ ಸುರಿಯುತ್ತಿವೆ. ಭಾರೀ ಮಳೆಗೆ ಜಲಪಾತದಂತಾಗಿರುವ ಪೀಣ್ಯದ ಫ್ಲೈಓವರ್ ಅಧ್ವಾನ ನೋಡಿ ಹಿಂದೂ ಮುಖಂಡ ಪುನೀತ್ ಕೆರೆಹಳ್ಳಿ ವ್ಯಂಗ್ಯ ಮಾಡಿದ್ದಾರೆ.
ಈ ಬಗ್ಗೆ ವಿಡಿಯೋ ಮಾಡಿರುವ ಪುನೀತ್ ಕೆರೆಹಳ್ಳಿ, ಫ್ರೀ, ಫ್ರೀ.. ಬೆಂಗಳೂರಿನ ಜನತೆಗೆ ಮಾತ್ರ ಫ್ರೀ ಸ್ಕೀಂ. ಯಾರಿಗೆಲ್ಲ ಬೇಕು ಬೇಗ ಬೇಗ ಬನ್ನಿ. ಕಾಕಾ ಪಾಟೀಲ್ ನಿಮ್ಗೂ ಫ್ರೀ.. ನಿಮ್ಮಪ್ಪನಿಗೂ ಫ್ರೀ.. ಇದು ಕಾಂಗ್ರೆಸ್ ಸರ್ಕಾರದ ಹೊಸ ಯೋಜನೆ. ದುಡ್ಡು ಕೊಟ್ಟು ಕಾರ್ ವಾಶ್ ಮಾಡಿಸ್ಬೇಡಿ. ಸೀದಾ ಕಾರ್ ತಗೊಂಡು ಜಾಲಹಳ್ಳಿ ರೂಟ್‌ಗೆ ಬಂದ್ರೆ ಸಾಕು ಕಾಂಗ್ರೆಸ್ ಸರ್ಕಾರದ ಫ್ರೀಯಾಗಿ ಕಾರು ವಾಶ್ ಮಾಡಿಕೊಡುತ್ತೆ. ಮಳೆಗಾಲದ ಜಲತಾಪ ನೋಡೋಕೆ ಕೊಡಗು, ಮಡಿಕೇರಿ ಅಬ್ಬಿಫಾಲ್ಸ್ ನೋಡೋಕೆ ಹಣ ಖರ್ಚು ಮಾಡಿ ಯಾಕೆ ಹೋಗ್ತಿರಿ. ಬೆಂಗಳೂರಿನಲ್ಲೇ ಸಿದ್ದರಾಮಯ್ಯ ಉಚಿತವಾಗಿ ಫಾಲ್ಸ್ ರೆಡಿ ಮಾಡಿಕೊಟ್ಟಿದ್ದಾರೆ. ಮಳೆಯಲ್ಲಿ ಇಲ್ಲಿ ಬಂದರೆ ಕಾರಲ್ಲಿ ಕೂತ್ಕೊಂಡು ಫ್ಲೈಓವರ್ ಜಲಪಾತ ಕಣ್ತುಂಬುಕೊಳ್ಳಬಹುದು. ಬನ್ನಿ ನೀವು ಹೋಗ್ಬಹುದು, ನಿಮ್ಮ ಕಾರು ಉಚಿತವಾಗಿ ಹೋಗ್ಬಹುದು ಎಂದು ವ್ಯಂಗ್ಯ ಮಾಡಿರುವ ಪುನೀತ್ ಕೆರೆಹಳ್ಳಿ.
ಕೊಲ್ಕತ್ತಾ ವೈದ್ಯೆ ರೇಪ್, ಮರ್ಡರ್ ಪ್ರಕರಣ ಹಿನ್ನೆಲೆ: ವೈದ್ಯಕೀಯ ಸಿಬ್ಬಂದಿ, ಮಹಿಳೆಯರ ರಕ್ಷಣೆಗೆ ಮುಂದಾದ ಸರ್ಕಾರ
ವಿಡಿಯೋದಲ್ಲಿ ಕಾರು ಚಲಾಯಿಸುತ್ತ ಫ್ಲೈಓವರ್ ಮೇಲಿಂದ ಜಲಪಾತದಂತೆ ನೀರು ಸುರಿಯುತ್ತಿರುವ ದೃಶ್ಯ ಸೆರೆಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದ ವೈರಲ್ ಆಗಿದೆ.