ಕರ್ನಾಟಕದ ಶಾಸಕರಿಗೆ ಕನ್ನಡವೇ ಬರೊಲ್ಲ, ಮರಾಠಿಯಲ್ಲಿ ಮಾತನಾಡಿದ ವಿಠಲ್ ಹಲಗೇಕರ್

By Sathish Kumar KH  |  First Published Dec 15, 2023, 3:34 PM IST

ಕರ್ನಾಟಕ ಖಾನಾಪುರ ವಿಧಾನಸಭಾ ಕ್ಷೇತ್ರದ ಶಾಸಕ ವಿಠಲ್ ಹಲಗೇಕರ್ ಅವರು ಬೆಳಗಾವಿ ಅಧಿವೇಶನದಲ್ಲಿ ಕನ್ನಡದಲ್ಲಿ ಮಾತನಾಡಿದ್ದಾರೆ.


ವಿಧಾನಸಭೆ (ಡಿ.15): ಕರ್ನಾಟಕದ ಗಡಿಭಾಗ ಬೆಳಗಾವಿ ಜಿಲ್ಲೆಯ ಖಾನಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರ ವಿಠಲ್ ಹಲಗೇಕರ್ ಅವರಿಗೆ ಸ್ಪಷ್ಟವಾಗಿ ಕನ್ನಡವೇ ಬರುವುದಿಲ್ಲವೆಂದು ತಾವು ತಮಗೆ ಗೊತ್ತಿರುವ ಮರಾಠಿಯಲ್ಲಿಯೇ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ್ದಾರೆ. ಈ ಮೂಲಕ ವಿಧಾನಸಭೆಯಲ್ಲಿದ್ದ ಎಲ್ಲರಿಗೂ ಆಶ್ಚರ್ಯವಾಗಿದ್ದು, ಬಹುತೇಕ ಶಾಸಕರು ಕನ್ನಡದಲ್ಲಿಯೇ ಮಾತನಾಡುವಂತೆ ಆಗ್ರಹಿಸಿದ ಘಟನೆ ಶುಕ್ರವಾರ ಬೆಳಗ್ಗೆ ನಡೆದ ಬೆಳಗಾವಿ ಅಧಿವೇಶನದಲ್ಲಿ ನಡೆದಿದೆ.

ಹೌದು, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದು ನಾವು ಹೇಳುತ್ತೇವೆ. ಅದರಲ್ಲಿಯೂ ಗಡಿ ಜಿಲ್ಲೆಗಳಾದ ಬೆಳಗಾವಿ, ಬಳ್ಳಾರಿ, ಕೋಲಾರ ಜಿಲ್ಲೆಗಳಲ್ಲಿ ಕನ್ನಡ ಮಾತನಾಡುವವರೇ ಅಲ್ಪಭಾಷಿಕರು ಎಂದೆನಿಸಿಕೊಳ್ಳುತ್ತಿದ್ದಾರೆ. ಇನ್ನು ಬೆಳಗಾವಿಯಲ್ಲಿ ಕನ್ನಡದ ಸಾರ್ವಭೌಮತ್ವದ ಮೇಲೆ ಆಗಿಂದಾಗ್ಗೆ ಮರಾಠಿಗರ ಆಕ್ರಮಣ ನಡೆಯುತ್ತಲೇ ಇರುತ್ತದೆ. ಈಗ ಮರಾಠಿ ಭಾಷೆ ಸೀದಾ ಕನ್ನಡ ನಾಡಿನ ಆಡಳಿತ ಕೇಂದ್ರಕ್ಕೆ ಲಗ್ಗೆಯಿಟ್ಟಿದೆ. ಅಂದರೆ, ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಖಾನಾಪುರ ಶಾಸಕ ವಿಠಲ್ ಹಲಗೇಕರ್ ಅವರು ಮರಾಠಿಯಲ್ಲಿ ಮಾತನಾಡಿದ್ದಾರೆ.

Tap to resize

Latest Videos

ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಕೇಸ್: ಸಂಪುಟ ನಿರ್ಧಾರ ಪ್ರಶ್ನಿಸಿದ ರಿಟ್‌ ವಿಚಾರಣೆ

ಈ ವೇಳೆ ತಬ್ಬಿಬ್ಬಾದ ಸ್ಪೀಕರ್ ಯು.ಟಿ. ಖಾದರ್ ಹಾಗೂ ಶಾಸಕರು ಈ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆಗ ಶಾಸಕ ವಿಠಲ್ ಹಲಗೇಕರ್ ಅವರು ತಾವು ಮರಾಠಿಯಲ್ಲಿ ಮಾತನಾಡಲು ಅವಕಾಶ ಕೇಳಿದ್ದಾರೆ. ಇದಕ್ಕೆ ಬೇರೆ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ, ಇದಕ್ಕೆ ವಿಧಾನಸಭಾಧ್ಯಕ್ಷ ಖಾದರ್ ಅವರು, ನಿಮಗೆ ಯಾವ ಭಾಷೆ ಬರತ್ತೊ, ಆ ಭಾಷೆಯಲ್ಲಿ ಮಾತನಾಡಿ ಎಂದಿದ್ದಾರೆ. ಆಗ ಪುನಃ ಅಧಿವೇಶನದಲ್ಲಿ ಶಾಸಕರು ಕನ್ನಡದಲ್ಲಿ ಮಾತನಾಡುವಂತೆ ಆಗ್ರಹಿಸಿದ್ದಾರೆ. ಆಗ ಸ್ಪೀಕರ್ ಖಾದರ್, ನೀವು ಕನ್ನಡದಲ್ಲಿ ಮಾತನಾಡಲು ಪ್ರಯತ್ನ ಮಾಡಿ, ಬರದಿದ್ದಾಗ ಮರಾಠಿಯಲ್ಲಿ ಮಾತನಾಡಿ ಎಂದರು.

ಇನ್ನು ಸದನದಲ್ಲಿ ಸ್ಪೀಕರ್ ಖಾದರ್ ತೀರ್ಮಾನಕ್ಕೆ ಕೆಲವು ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಂತರ, ತಡವರಿಸುತ್ತಾ ಕನ್ನಡದಲ್ಲಿ ಮಾತನಾಡಿದ ಹಲಗೇಕರ್ ಅವರು, ರಾಠಿ ಶಾಲೆಗೆ ಶಿಕ್ಷಕರ ಕೊರತೆ, ಖಾನಾಪುರ ‌ಕುಡಿಯವ ನೀರಿನ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ನಂತರ ಕನ್ನಡದಲ್ಲಿಯೇ ಮಾತನಾಡುವಂತೆ ಆಗ್ರಹಿಸಿದ ಶಾಸಕರಿಗೆ ತಿರುಗೇಟು ಕೊಟ್ಟ ಶಾಸಕ ಹಲಗೇಕರ್ ಅವರು,ನಾವು ಕೂಡ ಕನ್ನಡದಲ್ಲಿ ‌ಮಾತನಾಡುತ್ತೇವೆ, ನಮ್ಮ ಸಮಸ್ಯೆ ಬಗೆ ಹರಸಿದ್ದೀರಾ ಎಂದು ಕಿಡಿಕಾರಿದರು.

ಇಂದಲ್ಲ, ನಾಳೆ ಪಾಕಿಸ್ತಾನ ಭಾರತಕ್ಕೆ ಸೇರುತ್ತೆ: ಈಶ್ವರಪ್ಪ ಭವಿಷ್ಯ

ಕನ್ನಡ ಬರುತ್ತದೆ ಮಾತನಾಡಿಸಿ ಎಂದ ಸವದಿ: ಈ ವೇಳೆ ಶಾಸಕ ಲಕ್ಷ್ಮಣ ಸವದಿ ಮಧ್ಯ ಪ್ರವೇಶ ಮಾಡಿದ ಲಕ್ಷ್ಮಣ ಸವದಿ ಅವರು, ಶಾಸಕ ವಿಠಲ ಹಲಗೇಕರ್ ಅವರಿಗೆ ಸ್ಪಷ್ಟವಾಗಿ ಕನ್ನಡ ಮಾತನಾಡಲು ಬರುತ್ತದೆ. ಅವರಿಗೆ ಕನ್ನಡ ಮಾತನಾಡಲು ಹೇಳಿ ಎಂದು ಆಗ್ರಹಿಸಿದರು. ಆದರೂ, ಹಲಗೇಕರ್ ಬೆಂಬಲಕ್ಕೆ ಬಂದ ಸ್ಪೀಕರ್ ಅವರು ಶಾಸಕ ಹಲಗೇಕರ್ ಕನ್ನಡ ಮಾತನಾಡಿದಾಗ ಅದಲ್ಲಿ ಉಂಟಾದ ದೋಷಗಳನ್ನು ಸ್ಪೀಕರ್ ಅವರೇ ಸರಿಪಡಿಸಿದರು. ಜೊತೆಗೆ, ಮುಂದಿನ ಅಧಿವೇಶನಗಳಲ್ಲಿ ಸದನಕ್ಕೆ ಬರುವಾಗ ಸ್ಪಷ್ಟ ಕನ್ನಡ ‌ಕಲಿತುಕೊಂಡೇ ಬರಬೇಕು ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸೂಚನೆ ನೀಡಿದರು.

click me!