ಕೇರಳ ಮಹಿಳೆಯಿಂದ ಕೆಂಪೇಗೌಡ ಏರ್‌ಪೋರ್ಟ್‌ಗೆ ಬಾಂಬ್‌ ಬೆದರಿಕೆ!

By Kannadaprabha News  |  First Published Feb 6, 2023, 11:00 AM IST

‘ನಾನು ಕೊಲ್ಕತ್ತಾಗೆ ತುರ್ತಾಗಿ ಹೋಗಬೇಕು. ಇಲ್ಲವಾದರೆ, ಬಾಂಬ್‌ ಹಾಕಿ ಏರ್‌ಪೋರ್ಚ್‌ ಸ್ಫೋಟಿಸುತ್ತೇನೆ’ ಎಂದು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದಲ್ಲಿ ಕೆಲ ಕಾಲ ರಂಪಾಟ ಮಾಡಿದ ಮಹಿಳೆಯನ್ನು ಕೆಐಎ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.


ಬೆಂಗಳೂರು (ಫೆ.6) : ‘ನಾನು ಕೊಲ್ಕತ್ತಾಗೆ ತುರ್ತಾಗಿ ಹೋಗಬೇಕು. ಇಲ್ಲವಾದರೆ, ಬಾಂಬ್‌ ಹಾಕಿ ಏರ್‌ಪೋರ್ಚ್‌ ಸ್ಫೋಟಿಸುತ್ತೇನೆ’ ಎಂದು ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ)ದಲ್ಲಿ ಕೆಲ ಕಾಲ ರಂಪಾಟ ಮಾಡಿದ ಮಹಿಳೆಯನ್ನು ಕೆಐಎ ಠಾಣೆ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಕೇರಳ(Kerala) ರಾಜ್ಯದ ಕಾಜಿಕೋಡ್‌ ಮೂಲದ ಮಾನಸಿ ಸತೇಬೈನು (31) ಜೈಲು ಪಾಲಾದವರು. ಫೆ.3ರಂದು ಬೆಳಗ್ಗೆ 8.20ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕೇಂದ್ರ ಕೈಗಾರಿಕಾ ಭದ್ರ ತಾ ಪಡೆಯ (ಸಿಐಎಸ್‌ಎಫ್‌) ಸಿಬ್ಬಂದಿ ಸಂದೀಪ್‌ ಸಿಂಗ್‌ ಅವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

 

ಜಾಗತಿಕ ವಿಮಾನ ನಿಲ್ದಾಣಗಳಲ್ಲಿ ಬೆಂಗಳೂರು ಏರ್‌ಪೋರ್ಟ್‌ಗೆ 2ನೇ ಸ್ಥಾನ..!

ಏನಿದು ಘಟನೆ?: ಸಿಐಎಸ್‌ಎಫ್‌ ಸಿಬ್ಬಂದಿ ಸಂದೀಪ್‌ ಸಿಂಗ್‌ ಫೆ.3ರಂದು ಕೆಐಎ ವಿಮಾನ ನಿಲ್ದಾಣದ ಬೋರ್ಡಿಂಗ್‌ ಗೇಟ್‌ 6ರ ಬಳಿ ಬೆಳಗಿನ ಪಾಳಿಯ ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಳಗ್ಗೆ 8.20ರ ಸುಮಾರಿಗೆ ಗೇಟ್‌ ಸಂಖ್ಯೆ 6ರ ಬಳಿ ಆರೋಪಿ ಮಾನಸಿ ಬಂದಿದ್ದಾಳೆ. ಆಕೆ ಇಂಡಿಗೋ ವಿಮಾನದಲ್ಲಿ ಕೊಲ್ಕತ್ತಾಗೆ ತೆರಳಬೇಕಿತ್ತು. ಈ ವೇಳೆ ಆಕೆ ಸಿಂದೀಪ್‌ ಸಿಂಗ್‌ ಬಳಿ ತೆರಳಿ ‘ನಾನು ತುರ್ತಾಗಿ ಕೊಲ್ಕತ್ತಾಗೆ ತೆರಳಬೇಕು. ಇಲ್ಲವಾದರೆ, ನಾನು ಬಾಂಬ್‌ ಹಾಕಿ ಏರ್‌ಪೋರ್ಚ್‌ ಸ್ಫೋಟಿಸುತ್ತೇನೆ’ ಎಂದು ಬೆದರಿಸಿದ್ದಾಳೆ.

ಸಮಾಧಾನದಿಂದ ಇರುವಂತೆ ಹೇಳಿದರೂ ಆಕೆ ಸಂದೀಪ್‌ ಸಿಂಗ್‌ ಅವರ ಸಮವಸ್ತ್ರದ ಕೊರಳಪಟ್ಟಿಹಿಡಿದು ಎಳೆದಾಡಿ ಚೀರಾಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾಳೆ. ಅಷ್ಟೇ ಅಲ್ಲದೆ, ‘ ಇಲ್ಲಿ ಬಾಂಬ್‌ ಇದೆ. ನಿಮ್ಮ ಪ್ರಾಣ ಉಳಿಸಿ ಕೊಳ್ಳಬೇಕಾದರೆ, ಇಲ್ಲಿಂದ ಜಾಗ ಖಾಲಿ ಮಾಡಿ’ ಎಂದು ಗೇಟ್‌ ಸಂಖ್ಯೆ 6ರ ಬಳಿಯಿದ್ದ ಪ್ರಯಾಣಿಕರಿಗೆ ಹೇಳಿದ್ದಾಳೆ. ಈಕೆಯ ವರ್ತನೆಯಿಂದ ಬೇಸತ್ತ ಸಿಐಎಸ್‌ಎಫ್‌ ಸಿಬ್ಬಂದಿ ಸಂದೀಪ್‌ ಸಿಂಗ್‌ ಕೂಡಲೇ ಆಕೆಯನ್ನು ಹಿಡಿದು ಕೆಐಎ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಬಳಿಕ ಪೊಲೀಸರು ಆಕೆಯ ವಿರುದ್ಧ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ ಹಲ್ಲೆ, ಸಾರ್ವಜನಿಕ ನೆಮ್ಮದಿ ಕೆಡಿಸಿದ ಆರೋಪದಡಿ ಪ್ರಕರಣ ದಾಖಲಿಸಿ ಸೆರೆವಾಸಕ್ಕೆ ತಳ್ಳಿದ್ದಾರೆ.

ಬೆಂಗಳೂರು: ಒಳ ಉಡುಪಿನಲ್ಲಿ ಚಿನ್ನ ಸಾಗಾಟ, ಪ್ರಯಾಣಿಕನ ಬಂಧನ

click me!