ವಿಜಯಪುರ ಅಲ್-ಅಮೀನ್ ಕಾಲೇಜಿನಲ್ಲಿ ಕಾಶ್ಮೀರಿ ವಿದ್ಯಾರ್ಥಿಗೆ ಹಲ್ಲೆ; ಪ್ರಧಾನಿಗೆ ದೂರು ಕೊಟ್ಟ ಸ್ನೇಹಿತ!

Published : Feb 19, 2025, 04:55 PM ISTUpdated : Feb 19, 2025, 05:39 PM IST
ವಿಜಯಪುರ ಅಲ್-ಅಮೀನ್ ಕಾಲೇಜಿನಲ್ಲಿ ಕಾಶ್ಮೀರಿ ವಿದ್ಯಾರ್ಥಿಗೆ ಹಲ್ಲೆ; ಪ್ರಧಾನಿಗೆ ದೂರು ಕೊಟ್ಟ ಸ್ನೇಹಿತ!

ಸಾರಾಂಶ

ವಿಜಯಪುರದ ಅಲ್ ಅಮೀನ್ ವೈದ್ಯಕೀಯ ಕಾಲೇಜಿನಲ್ಲಿ ಕಾಶ್ಮೀರ ಮೂಲದ ಎಂಬಿಬಿಎಸ್ ವಿದ್ಯಾರ್ಥಿಯ ಮೇಲೆ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿ ಹಲ್ಲೆ ನಡೆಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿಯ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ಸೇರಿದಂತೆ ಗಣ್ಯರಿಗೆ ಟ್ಯಾಗ್ ಮಾಡಿ ರಕ್ಷಣೆ ಕೋರಿದ್ದಾರೆ.

ವಿಜಯಪುರ ನಗರದಲ್ಲಿರುವ ಅಲ್ ಅಮೀನ್ ವೈದ್ಯಕೀಯ ಕಾಲೇಜಿನಲ್ಲಿ ಕಾಶ್ಮೀರ ಮೂಲದ 2ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯ ಮೇಲೆ ಸ್ಥಳೀಯ 4ನೇ ವರ್ಷದ ಹಿರಿಯ ವಿದ್ಯಾರ್ಥಿಗಳು ರ‍್ಯಾಗಿಂಗ್ ಮಾಡಿ, ಕೋಣೆಯಲ್ಲಿ ಕೂಡಿಹಾಕಿ ಮನಸೋಇಚ್ಛೆ ಥಳಿಸಿದ್ದಾರೆ. ಕೂಡಲೇ ಇವರ ವಿರುದ್ಧ ಕ್ರಮ ಕೈಗೊಂಡು ತಮಗೆ ರಕ್ಷಣೆ ನೀಡಬೇಕು ಎಂದು ಸಂತ್ರಸ್ಥ ವಿದ್ಯಾರ್ಥಿ ಹಮೀಮ್‌ನ ಸ್ನೇಹಿತ ನಾಸಿರ್ ಖುಹೇಹಮಿ ಎನ್ನುವವರು ಟ್ವೀಟ್ ಮಾಡಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಸಿಎಂ ಸಿದ್ದರಾಮಯ್ಯ, ರಾಹುಲ್‌ ಗಾಂಧಿಗೆ ಟ್ಯಾಗ್ ಮಾಡಿ ರಕ್ಷಣೆಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ನಾಸಿರ್ ಖುಹೇಹಮಿ @NasirKhuehami ಅವರು, ಕರ್ನಾಟಕದ ಬಿಜಾಪುರದ ಅಲ್-ಅಮೀನ್ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿರುವ ಕಾಶ್ಮೀರದ ಅನಂತನಾಗ್‌ನ 2ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಹಮೀಮ್ ಮೇಲೆ 2019ರ ಬ್ಯಾಚ್‌ನ ಹಿರಿಯ ವಿದ್ಯಾರ್ಥಿಗಳು ಅತ್ಯಂತ ಕೆಟ್ಟದಾಗಿ ರ‍್ಯಾಗಿಂಗ್ ಮತ್ತು ದೈಹಿಕ ಹಲ್ಲೆ ಮಾಡಿದ್ದಾರೆ. ನಿನ್ನೆ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ನಡೆಯುತ್ತಿದ್ದ 2022ನೇ ಬ್ಯಾಚ್ ಮತ್ತು ಹಳೆಯ ವಿದ್ಯಾರ್ಥಿಗಳ 2019ನೇ ಎಂಬಿಬಿಎಸ್ ಬ್ಯಾಚ್‌ಗಳ ನಡುವಿನ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲು ಕಾಲೇಜು ಆಟದ ಮೈದಾನಕ್ಕೆ ಹಮೀಮ್ ಹೋದಾಗ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾನೆ.

ಕ್ರಿಕೆಟ್ ಪಂದ್ಯ ನೋಡಲು ಬೌಂಡರಿಯ ಲೈನ್ ಬಳಿ ನಿಂತಿದ್ದ ಹಮೀಮ್‌ಗೆ ಒಬ್ಬ ಹಿರಿಯ ವಿದ್ಯಾರ್ಥಿ ಬೌಂಡರಿಯಿಂದ ಹೊರಗೆ ನಿಲ್ಲುವಂತೆ ಹೇಳಿದನು. ಆಗ ಸರಿ ಎಂದು ಮೂದಾನದಿಂದ ದೂರ ಸರಿದುಕೊಂಡು ನಿಂತು ಅಲ್ಲಿಂದ ಕ್ರಿಕೆಟ್ ಮ್ಯಾಚ್ ನೋಡುತ್ತಿದ್ದನು. ಆದರೂ, ಹಿರಿಯ ವಿದ್ಯಾರ್ಥಿಗಳು ಅವನ ಮೇಲೆ ಜಗಳ ಆರಂಭಿಸುವುದಕ್ಕೆ ಮುಂದಾದರು. ಕಳೆದ ವರ್ಷ ಹಮೀಮ್ ಪರೀಕ್ಷೆಯ ಸಮಯದಲ್ಲಿ ಊಟದ ವಿಚಾರಕ್ಕೆ ಮೆಸ್‌ನಲ್ಲಿ ಹಿರಿಯ ವಿದ್ಯಾರ್ಥಿಯಿಂದ ಕೋಪ ಎದುರಿಸಿದ್ದನು. ಇಲ್ಲಿಂದ ಟಾರ್ಗೆಟ್ ಮಾಡಿಕೊಂಡು ಹಮೀಮ್‌ಗೆ ಕಿರುಕುಳ ನೀಡುತ್ತಾ ಬರುತ್ತಿದ್ದಾರೆ.

ಇದನ್ನೂ ಓದಿ: ಭಾರತದ ಖ್ಯಾತ ಪವರ್‌ಲಿಫ್ಟರ್‌ ಯಶ್ಟಿಕಾ ಆಚಾರ್ಯ 270 ಕೆ.ಜಿ. ಭಾರ ಎತ್ತುವಾಗ ಸಾವು

2023ರ ಬ್ಯಾಚ್ ಕ್ರಿಕೆಟ್ ತಂಡದ ನಾಯಕನಾಗಿದ್ದ ಹಮೀಮ್, ಹಿರಿಯ ವಿದ್ಯಾರ್ಥಿಗಳ ತಂಡದ ಅತ್ಯಂತ ಬಲಿಷ್ಟ ಆಟಗಾರನಾಗಿ ಕಾಣಿಸಿಕೊಂಡಿದ್ದನು. ಹೀಗಾಗಿ, ಹಮೀಮ್ 2019-2022 ಬ್ಯಾಚ್‌ಗಳ ಹಿರಿಯ ವಿದ್ಯಾರ್ಥಿಗಳ ಪಂದ್ಯವನ್ನು ವೀಕ್ಷಣೆ ಮಾಡದಂತೆ ನಿರ್ಬಂಧ ವಿಧಿಸಿ ಅಲ್ಲಿಂದ ಹೋಗುವಂತೆ ಸೂಚಿಸಿದರು. ಇದಕ್ಕೆ ಹಮೀಮ್ ನಿರಾಕರಿಸಿದನು. ಜೊತೆಗೆ, ನಾನು ಈ ಮ್ಯಾಚ್ ಏಕೆ ನೋಡಬಾರದು ಎಂದು ಎದರುತ್ತರ ಕೊಡುತ್ತಾ ನಿಂತನು. ಇದನ್ನು ಸಹಿಸಿಕೊಳ್ಳದ ಹಿರಿಯ ವಿದ್ಯಾರ್ಥಿಗಳು ಆತನುಗೆ ಮೌಖಿಕವಾಗಿ ಬೆದರಿಕೆ ಹಾಕಿದರು.

ಮೌಖಿಕ ಬೆದರಿಕೆಯಾಗಿ ಪ್ರಾರಂಭವಾದ ಜಗಳ ನಂತರ ಹಾಸ್ಟೆಲ್‌ಗೂ ವಿಸ್ತರಣೆಗೊಂಡಿತು. ಆಗ ಹಿರಿಯ ವಿದ್ಯಾರ್ಥಿಗಳು ಹಮೀಮ್‌ಗೆ ಅವಮಾನಿಸಿ ಅಲ್-ಹಮೀಮ್‌ಗೆ ಎಲ್ಲರಿಗೂ ಸೆಲ್ಯೂಟ್ ಮಾಡುವಂತೆ, ಹಾಡುಗಳನ್ನು ಹಾಡುವಂತೆ, ಮನರಂಜನೆಗಾಗಿ ನೃತ್ಯ ಮಾಡುವಂತೆ ರ‍್ಯಾಗಿಂಗ್ ಮಾಡಿದ್ದಾರೆ. ಮುಂದುವರೆದು ಬಲವಂತವಾಗಿ ತಮ್ಮ ಕಾರಿನೊಳಗೆ ಹತ್ತಿಸಲು ಪ್ರಯತ್ನಿಸಿ, ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದಾರೆ. ಆಗ ನೀವು ನನಗೆ ಕಿರುಕುಳ ನೀಡುತ್ತಿರುವುದು ಒಳ್ಳೆಯದಲ್ಲ, ಕಾಲೇಜು ನಿಯಮಗಳಿಗೆ ವಿರುದ್ಧವಾಗಿವೆ ಎಂದು ಹೇಳಿದಾಗ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಗಲಾಟೆ ಆಗುವುದನ್ನು ಗ್ರಹಿಸಿದ ಸ್ನೇಹಿತರು ವಿಡಿಯೋ ರೆಕಾರ್ಡ್ ಮಾಡಲು ಮುಂದಾದಾಗ ಅದನ್ನೂ ನಿರ್ಬಂಧಿಸಿದರು.

ಇದನ್ನೂ ಓದಿ: ಇದು ಮಹಾಕುಂಭ ಅಲ್ಲ, ಮೃತ್ಯುಕುಂಭ..! ಮಮತಾ ಬ್ಯಾನರ್ಜಿ ವಿವಾದಾತ್ಮಕ ಹೇಳಿಕೆ, ಬಿಜೆಪಿ ಆಕ್ರೋಶ

ಇದಾದ ನಂತರ 6-8 ಜನರ ಗುಂಪು ತಡರಾತ್ರಿ ಅವರ ಹಮೀಮ್ ಇರುವ ಹಾಸ್ಟೆಲ್ ಕೋಣೆಗೆ ನುಗ್ಗಿ ಕ್ರೂರವಾಗಿ ಹಲ್ಲೆ ಮಾಡಿದ್ದಾರೆ. ಅವನು ಕ್ಷಮೆಯಾಚಿಸುವ ವೀಡಿಯೊವನ್ನು ರೆಕಾರ್ಡ್ ಮಾಡುವಂತೆ ಹಮೀನ್ ಸ್ನೇಹಿತರಿಗೆ ಹೇಳಿದರು. 'ನೀವು ಇನ್ನೂ 4 ವರ್ಷಗಳು ಇಲ್ಲಿರಬೇಕು. ನಾವು ಸ್ಥಳೀಯರು - ನಿಮ್ಮ ಜೀವನವನ್ನು ನಾವು ಎಷ್ಟು ಭಯಾನಕಗೊಳಿಸಬಹುದು ಎಂದು ಊಹಿಸಿ' ಎಂದು ಕೊಲೆ ಬೆದರಿಕೆ ಹಾಕಿದ್ದಾರೆ. ಮುಂದಿನ 4 ವರ್ಷಗಳ ಕಾಲ ನಿಮಗೆ ಇಲ್ಲಿ ಕ್ರಿಕೆಟ್ ಆಡಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ಬರೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!