ರೈಲು ಪ್ರಯಾಣಿಕರೇ ಗಮನಿಸಿ; ಯಶವಂತಪುರ ರೈಲುಗಳ ಮಾರ್ಗ ಬದಲಾವಣೆ

Published : Feb 19, 2025, 01:48 PM ISTUpdated : Feb 19, 2025, 01:52 PM IST
ರೈಲು ಪ್ರಯಾಣಿಕರೇ ಗಮನಿಸಿ; ಯಶವಂತಪುರ ರೈಲುಗಳ ಮಾರ್ಗ ಬದಲಾವಣೆ

ಸಾರಾಂಶ

ಉತ್ತರ ಮಧ್ಯ ರೈಲ್ವೆಯು ಯಶವಂತಪುರ-ಲಕ್ನೋ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಮಾರ್ಗವನ್ನು ಬದಲಾಯಿಸಿದೆ. ಫೆಬ್ರವರಿ 24 ರಿಂದ ಯಶವಂತಪುರದಿಂದ ಹೊರಡುವ ರೈಲು ಮತ್ತು ಫೆಬ್ರವರಿ 20 ಮತ್ತು 27 ರಿಂದ ಲಕ್ನೋದಿಂದ ಹೊರಡುವ ರೈಲು ಕೆಲವು ನಿಲ್ದಾಣಗಳಲ್ಲಿ ನಿಲ್ಲುವುದಿಲ್ಲ.

ಉತ್ತರ ಮಧ್ಯ ರೈಲ್ವೆ ವಲಯದಲ್ಲಿ ವಿವಿಧ ಕಾರ್ಯಾಚರಣೆಯ ಕಾರಣಗಳಿಂದಾಗಿ ಈ ಕೆಳಗಿನ ರೈಲುಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗುತ್ತಿದೆ ಎಂದು ಉತ್ತರ ಮಧ್ಯ ರೈಲ್ವೆಯು ಸೂಚಿಸಿದೆ.

ಫೆಬ್ರವರಿ 24, 2025 ರಂದು ಯಶವಂತಪುರ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 22683 ಯಶವಂತಪುರ-ಲಕ್ನೋ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಓಹಾನ್ ಕ್ಯಾಬಿನ್, ಬಾಂಡಾ, ಭೀಮಸೇನ್, ಕಾನ್ಪುರ ಸೆಂಟ್ರಲ್ ಮತ್ತು ಲಕ್ನೋ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಈ ರೈಲು ನೈನಿ, ಪ್ರಯಾಗ್ ರಾಜ್, ಮಾ ಬೆಲ್ಹಾ ದೇವಿ ಧಾಮ್ ಪ್ರತಾಪ್ ಗಡ, ಅಮೇಥಿ ಮತ್ತು ರಾಯ್ ಬರೇಲಿ ನಿಲ್ದಾಣಗಳಲ್ಲಿನ ತನ್ನ ನಿಯಮಿತ ನಿಲುಗಡೆ ತಪ್ಪಿರುತ್ತದೆ.

ಫೆಬ್ರವರಿ 20 ಮತ್ತು ಫೆ.27 ರಂದು ಲಕ್ನೋ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 22684 ಲಕ್ನೋ-ಯಶವಂತಪುರ ಸಾಪ್ತಾಹಿಕ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಲಕ್ನೋ, ಕಾನ್ಪುರ ಸೆಂಟ್ರಲ್, ಭೀಮಸೇನ್, ಬಾಂಡಾ ಮತ್ತು ಓಹಾನ್ ಕ್ಯಾಬಿನ್ ನಿಲ್ದಾಣಗಳ ಮೂಲಕ ಚಲಿಸಲಿದೆ. ಈ ಮಾರ್ಗ ಬದಲಾವಣೆಯಿಂದ ಈ ರೈಲು ರಾಯ್ ಬರೇಲಿ, ಅಮೇಥಿ, ಮಾ ಬೆಲ್ಹಾ ದೇವಿ ಧಾಮ್ ಪ್ರತಾಪ್ ಗಡ, ಪ್ರಯಾಗ್ ರಾಜ್ ಮತ್ತು ನೈನಿ ನಿಲ್ದಾಣಗಳಲ್ಲಿ ತನ್ನ ನಿಯಮಿತ ನಿಲುಗಡೆ ಇರುವುದಿಲ್ಲ.

ಇದನ್ನೂ ಓದಿ: ಕುಂಭಮೇಳಕ್ಕೆ ಹೋಗುವ ಪ್ರಯಾಣಿಕರೇ ಗಮನಿಸಿ, ರೈಲ್ವೆ ಇಲಾಖೆಯಿಂದ ಈ ರೈಲುಗಳನ್ನು ರದ್ದು!

ರೈಲ್ವೆ ಪ್ರಯಾಣಿಕರು ತಮ್ಮ ಪ್ರಯಾಣಕ್ಕೂ ಮುಂಚೆ ರೈಲಿನ ಸ್ಥಿತಿಯನ್ನು ಪರಿಶೀಲಿಸಿಕೊಳ್ಳಬೇಕೆಂದು ರೈಲ್ವೆ ಅಧಿಕಾರಿಗಳು ಕೋರಿದ್ದಾರೆ. ಇದಕ್ಕಾಗಿ www.enquiry.indianrail.gov.in  ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ 139ಕ್ಕೆ ಕರೆ ಮಾಡಿ ಮಾಹಿತಿ ಪಡೆಯಿರಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್