
ಉತ್ತರ ಕನ್ನಡ, (ಡಿ.17): ಹೊಸ ಕಾಶಿ ನಿರ್ಮಾಣ ಯೋಜನೆಯ (Kashi Vishwanath Corridor Project) ಹಿಂದಿನ ರೂವಾರಿ ನಿತಿನ್ ರಮೇಶ್ (Nitin Ramesh) ಅವರು ಗೋಕರ್ಣಕ್ಕೆ (Gokarna) ಭೇಟಿ ನೀಡಿದರು.
ಉತ್ತರ ಪ್ರದೇಶದ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿರುವ ಕರ್ನಾಟಕದ ಮೂಲದ ನಿತಿನ್ ರಮೇಶ್ ಅವರು ಇಂದು (ಶುಕ್ರವಾರ) ಗೋಕರ್ಣಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
"
ದೂರದ ಊರಿಗೆ ಸ್ಥಳಾಂತರಗೊಂಡರೂ ಅವರ ಕುಟುಂಬ ಗೋಕರ್ಣದೊಂದಿಗೆ ನಂಟು ಹೊಂದಿದೆ. ಮದುವೆ, ಧಾರ್ಮಿಕ ಕಾರ್ಯಕ್ರಮಗಳು ಇದ್ದರೆ ಗೋಕರ್ಣಕ್ಕೆ ಬರುತ್ತಾರೆ.
ಸತತ ದಾಳಿ ಮೆಟ್ಟಿನಿಂತ ದೇವನಗರಿ, ಪ್ರಧಾನಿ ಮೋದಿ ಉದ್ಘಾಟಿಸಿದ ಕಾಶಿ ವಿಶ್ವನಾಥ ಕಾರಿಡಾರ್ ವಿಶೇಷತೆ ಏನು?
`ದಕ್ಷಿಣ ಕಾಶಿ’ ಎನಿಸಿಕೊಂಡಿರುವ ಗೋಕರ್ಣ ಮೂಲದವರೇ ಕಾಶಿ ವಿಶ್ವನಾಥ ದೇವಸ್ಥಾದ ಪುನರ್ ನಿರ್ಮಾಣ ಯೋಜನೆಯ ರೂವಾರಿಯಾಗಿರುವುದು ಜಿಲ್ಲೆಯ ಜನರು ಹೆಮ್ಮೆ ಪಡುವ ಸಂಗತಿ.
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮೂಲದ ನಿತಿನ್ ರಮೇಶ್ ಅವರು ಮುಂಬೈನಲ್ಲಿ ಜನಿಸಿ, ಉನ್ನತ ಶಿಕ್ಷಣ ಪೂರೈಸಿದ ನಂತರ ಯುಪಿಎಸ್‍ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಅವರು 1990ರ ಬ್ಯಾಚ್‍ನ ಐಎಎಸ್ ಅಧಿಕಾರಿ. ಕಳೆದ 30 ವರ್ಷಗಳಿಂದ ಉತ್ತರ ಪ್ರದೇಶದಲ್ಲಿ ನೆಲೆಸಿರುವ ನಿತಿನ್ ಅವರು ಉತ್ತರ ಪ್ರದೇಶ ಸರ್ಕಾರದ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ಹೊಸ ಕಾಶಿ ನಿರ್ಮಾಣ ಯೋಜನೆಯ ಹಿಂದಿನ ರೂವಾರಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಮೂಲದ ನಿತಿನ್ ರಮೇಶ್ ಗೋಕರ್ಣ. ನಿತಿನ್ ಅವರ ಅಜ್ಜ ಮುಂಬೈನಲ್ಲಿ ರೈಲ್ವೆ ಉದ್ಯೋಗಿಯಾಗಿದ್ದರು. ಹಾಗಾಗಿ ಅವರ ಕುಟುಂಬ ಗೋಕರ್ಣದಿಂದ ಮುಂಬೈಗೆ ಸ್ಥಳಾಂತರಗೊಂಡಿತ್ತು. ನಿತಿನ್ ಅವರ ತಂದೆ ಮುಂಬೈನಲ್ಲೇ ಜನಿಸಿ ಅಲ್ಲಿಯೇ ನೆಲೆಸಿದ್ದರು.
Kashi Vishwanath Temple: ಕಾಶಿಯ ಕುರಿತ ಆಸಕ್ತಿಕರ ಸಂಗತಿಗಳಿ
ನಿತಿನ್ ಅವರೂ ಮುಂಬೈನಲ್ಲಿ ಜನಿಸಿ, ಉನ್ನತ ಶಿಕ್ಷಣ ಪೂರೈಸಿದ ನಂತರ ಯುಪಿಎಸ್‍ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಅವರು 1990ರ ಬ್ಯಾಚ್‍ನ ಐಎಎಸ್ ಅಧಿಕಾರಿ. ಕಳೆದ 30 ವರ್ಷಗಳಿಂದ ಉತ್ತರ ಪ್ರದೇಶದಲ್ಲಿ ನೆಲೆಸಿರುವ ನಿತಿನ್ ಅವರು ಉತ್ತರ ಪ್ರದೇಶ ಸರ್ಕಾರದ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಹಿಂದೆ ಅವರು ವಾರಣಸಿಯ ಜಿಲ್ಲಾಧಿಕಾರಿಯೂ ಆಗಿದ್ದರು.
ಜಗತ್ತಿನ ಅತ್ಯಂತ ಪುರಾತನ ನಗರಗಳಲ್ಲಿ ಒಂದಾದ ವಾರಾಣಸಿಯಲ್ಲಿರುವ ಕಾಶಿ ವಿಶ್ವನಾಥನ ದೇಗುಲಕ್ಕೆ ಭೇಟಿ ನೀಡಬೇಕು ಎಂಬುದು ಪ್ರತಿಯೊಬ್ಬ ಹಿಂದುಗಳ ಆಸೆ. ಆದರೆ ವಾರಾಣಸಿಯಲ್ಲಿ ಕಾಶಿ ವಿಶ್ವನಾಥನ ದೇಗುಲವನ್ನು ಹುಡುಕಿ ದೇಗುಲಕ್ಕೆ ಹೋಗುವುದೇ ಒಂದು ಕಠಿಣ ಸವಾಲಾಗಿತ್ತು. ನೂರಾರು ಕಟ್ಟಡಗಳ ಮಧ್ಯದಲ್ಲಿ ದೇಗುವ ಅಡಗಿ ಕುಳಿತಿತ್ತು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಕಾಶಿಯ ಘಾಟ್ ಗಳಿಂದ ವಿಶ್ವನಾಥನ ದೇಗುಲಕ್ಕೆ ತಡೆರಹಿತ ಸಂಪರ್ಕ ಕಲ್ಪಿಸಲು ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಗೆ ಕಾರ್ಯಗತಗೊಳಿಸಲು ಯೋಜನೆ ಸಿದ್ಧಪಡಿಸಿದ್ದರು.
2019 ರಲ್ಲಿ ಮೋದಿ ಅವರು ಕಾರಿಡಾರ್ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. 339 ಕೋಟಿ ರೂ. ವೆಚ್ಚದಲ್ಲಿ ಕಾರಿಡಾರ್ ನಿರ್ಮಾಣವಾಗಿದೆ. ವಾರಾಣಸಿ ಬೆಳೆಯುತ್ತಿದ್ದಂತೆ ಅತಿಕ್ರಮಣರ ಕಾಟ ಹೆಚ್ಚಾಗಿ ಕಾಶಿಯ ದೇಗುಲಕ್ಕೆ ಸೇರಿದ್ದ ಜಾಗವನ್ನೆಲ್ಲಾ ಆಕ್ರಮಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಕಾರಿಡಾರ್ ಗೆ ಅಗತ್ಯವಿದ್ದ ಸ್ಥಳದಲ್ಲಿದ್ದ ಕಟ್ಟಡಗಳನ್ನು ಖರೀದಿಸಿ ಆ ಸ್ಥಳದಲ್ಲಿ ಕಾರಿಡಾರ್ ನಿರ್ಮಿಸಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ