'ವಕ್ಫ್ ಭೂಮಿ ಅಲ್ಲಾನಿಗೆ ಸೇರಿದ್ದು ಅದನ್ನು ಮರಳಿ ಪಡೆಯುವುದರಲ್ಲಿ ಯಾವುದೇ ರಾಜಿ ಬೇಡ. ₹2000 ಕೋಟಿ ಮೊತ್ತದ ವಕ್ಫ್ ಆಸ್ತಿ ಖಾಸಗಿಯವರ ವಶದಲ್ಲಿದೆ, ಅದನ್ನು ಮರಳಿ ಪಡೆಯುವವರೆಗೂ ನೀವು ಸುಮ್ಮನೆ ಕೂರಬಾರದು ನಾವೂ ಸುಮ್ಮನೆ ಕೂರಬಾರದು' ಬಿಜೆಪಿ ಮಾಜಿ ಸಿಎಂ ಬೊಮ್ಮಾಯಿ ಹೇಳಿಕೆ ಪ್ರಸ್ತಾಪಿಸಿ ಪ್ರಿಯಾಂಕ್ ಖರ್ಗೆ ವಾಗ್ದಾಳಿ
ಬೆಂಗಳೂರು (ನ.3): ಬಿಜೆಪಿಯವರು ಗೋಸುಂಬೆಗಿಂತ ಹೆಚ್ಚು ವೇಗವಾಗಿ ಬಣ್ಣ ಬದಲಿಸುವವರು. ರೈತರಿಗೆ ವಕ್ಫ್ ಬೋರ್ಡ್ ಮಂಡಳಿ ನೋಟಿಸ್ ನೀಡಿದ್ದನ್ನು ರಾಜಕೀಯಕ್ಕೆ ಬಳಸುತ್ತಿರುವ ಬಿಜೆಪಿಗರು ತಮ್ಮ ಸರ್ಕಾರದ ಆಡಳಿತಾವಧಿಯಲ್ಲೂ ರೈತರಿಗೆ ನೋಟಿಸ್ ನೀಡಿದ್ದರು ಎಂಬುದನ್ನ ಮರೆತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ವಕ್ಫ್ ಬೋರ್ಡ್ ಪರವಾಗಿ ಹೇಳಿಕೆ ನೀಡಿರುವ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ, ಹಿಂದೆ ಇದೇ ಬಿಜೆಪಿ ವಕ್ಫ್ ಬೋರ್ಡ್‌ಗೆ ಬೆಂಬಲವಾಗಿ ನಿಂತಿತ್ತು. ರೈತರ ಭೂಮಿ ಕಸಿಯಲು ಕುಮ್ಮಕ್ಕು ನೀಡಿತ್ತು ಎನ್ನುವದಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಇಲ್ಲಿನ ಮಾತುಗಳೇ ಸಾಕ್ಷಿ, 'ವಕ್ಫ್ ಭೂಮಿ ಅಲ್ಲಾನಿಗೆ ಸೇರಿದ್ದು ಅದನ್ನು ಮರಳಿ ಪಡೆಯುವುದರಲ್ಲಿ ಯಾವುದೇ ರಾಜಿ ಬೇಡ. ₹2000 ಕೋಟಿ ಮೊತ್ತದ ವಕ್ಫ್ ಆಸ್ತಿ ಖಾಸಗಿಯವರ ವಶದಲ್ಲಿದೆ, ಅದನ್ನು ಮರಳಿ ಪಡೆಯುವವರೆಗೂ ನೀವು ಸುಮ್ಮನೆ ಕೂರಬಾರದು ನಾವೂ ಸುಮ್ಮನೆ ಕೂರಬಾರದು, ನಿಮ್ಮ ಜೊತೆಗೆ ನಾವಿದ್ದೇವೆ'ಇದು ಅಂದಿನ ಸಿಎಂ ಬೊಮ್ಮಯಿಯವರೇ ಹೇಳಿದ್ದು.
ಎರಡು ನಾಲಗೆ ಬಿಜೆಪಿಯವರಿಗೆ ಒಂದಷ್ಟು ಪ್ರಶ್ನೆಗಳನ್ನ ಕೇಳುವೆ. ವಕ್ಫ್ ಮಂಡಳಿ ಇಂದು ನೋಟಿಸ್ ನೀಡುವುದಕ್ಕೆ ಹಿಂದಿನ ಸಿಎಂ ಅವರ ನಿರ್ದೇಶನ ಕಾರಣ ಅಲ್ಲವೇ? ವಕ್ಫ್ ಭೂಮಿ ವಿಚಾರದಲ್ಲಿ ಬಿಜೆಪಿಗರ ನಿಲುವಿನಲ್ಲಿ ದ್ವಂದ್ವ ಧೋರಣೆ ಏಕೆ? ಬಿಜೆಪಿಯ ನಿಲುವು ವಕ್ಫ್ ಪರವೋ? ಭೂಮಿ ಹಿಡುವಳಿದಾರರ ಪರವೋ? ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಕ್ಫ್ ನೋಟಿಸ್ ನೀಡಿದ್ದನ್ನು ಮರೆಮಾಚುತ್ತಿರುವುದೇಕೆ? ಬೊಮ್ಮಾಯಿಯವರ ಆದೇಶದಿಂದಲೇ ವಕ್ಫ್ ಭೂಮಿ ವಶಕ್ಕೆ ಮುಂದಾಗಿರುವುದಲ್ಲವೇ? ಇವಕ್ಕೆ ಉತ್ತರ ಕೊಡಿ. ಕೊನೆಯ ಪ್ರಶ್ನೆ ಹಿಪಾಕ್ರಸಿ ಮತ್ತು ಡಬಲ್ ಸ್ಟ್ಯಾಂಡರ್ಡ್, ಇವುಗಳು ಬಿಜೆಪಿಯ ಪಕ್ಷದ ಬೈಲಾದಲ್ಲಿ ಅಡಕವಾಗಿದೆಯೇ ಅಥವಾ ಬಿಜೆಪಿಗರ ಬುದ್ದಿಯಲ್ಲಿ ಸೇರಿಕೊಂಡಿದೆಯೇ? ಎಂದು ಪ್ರಶ್ನಿಸಿರುವ ಸಚಿವರು,
ಬಸವರಾಜ ಬೊಮ್ಮಾಯಿ ಹೇಳೋದೇನು?
ವಕ್ಫ್ ವಿಚಾರದ ಬಗ್ಗೆ ಮಾತನಾಡಿರುವ ನನ್ನ ಹಳೆಯ ವಿಡಿಯೋ ಜಮೀರ್ ಅಹ್ಮದ್ ಪ್ರದರ್ಶಿಸಿದ್ದಾರೆ. ಅದನ್ನು ನಾನು ವಕ್ಫ್ ಮೀಟಿಂಗ್ ನಲ್ಲಿ ಮಾತನಾಡಿರೋದು ಅಲ್ಲ. ವಕ್ಫ್ ಭವನ ಉದ್ಘಾಟನೆ ವೇಳೆ ಮಾತನಾಡಿದ್ದು. ಅನ್ವರ್ ಮನಿಪ್ಪಾಡಿ ಸಮಿತಿಯ ವರದಿ ಕುರಿತು ಬಗ್ಗೆ ಮಾತಾಡಿದ್ದೇನೆ. ಹಲವಾರು ಜನ ವಕ್ಫ್ ಆಸ್ತಿಯನ್ನು ಕಬಳಿಸಿದ್ದಾರೆ. ಅದರಲ್ಲಿ ಅಕ್ರಮ ಕಟ್ಟಡಗಳನ್ನು ಕಟ್ಟಿದ್ದಾರೆ. ವಕ್ಫ್ ಹೆಸರಿನಲ್ಲಿದ್ದ ಸಾವಿರಾರು ಎಕರೆಯನ್ನು ಕಾಂಗ್ರೆಸ್ ನಾಯಕರೇ ಕಬಳಿಸಿದ್ದಾರೆ. ದೊಡ್ಡ ದೊಡ್ಡ ನಾಯಕರು ಕಬಳಿಸಿರುವ ಬಗ್ಗೆ ಅನ್ವರ್ ಮಣಿಪಾಡಿ ವರದಿಯಲ್ಲಿ ಸ್ಪಷ್ಟವಾದ ಉಲ್ಲೇಖವಿದೆ. ಕಾಂಗ್ರೆಸ್ ನಾಯಕರು ಅತಿಕ್ರಮ ಮಾಡಿರೋ ಆಸ್ತಿಯನ್ನು ವಶಕ್ಕೆ ಪಡಬೇಕೆಂದು ನಾನು ಹೇಳಿದ್ದೇನೆ ರೈತರ ವಿಚಾರದಲ್ಲಿ ಬಿಜೆಪಿ ಸರ್ಕಾರ ನೋಟಿಸ್ ಕೊಟ್ಟಿಲ್ಲ. ಯಾವುದೋ ಸಂದರ್ಭದಲ್ಲಿ ಮಾತನಾಡಿದ್ದನ್ನು ತೋರಿಸಿ ದಾರಿ ತಪ್ಪಿಸುವ ಕೆಲಸ ನಡೀತಿದೆ ರೈತರಿಗೆ ನೋಟಿಸ್ ಕೊಡುವ ಬದಲು ನಿಮ್ಮ ಕಾಂಗ್ರೆಸ್ ನಾಯಕರಿಗೆ ನೋಟಿಸ್ ಕೊಡಿ. ಬೆಂಗಳೂರು ಸೇರಿ ಎಲ್ಲೆಲ್ಲಿ ಕಬ್ಜಾ ಮಾಡಿದ್ದಾರೆ ಅದನ್ನು ರಿಕವರಿ ಮಾಡಿ. ಕಾಂಗ್ರೆಸ್ ಪಕ್ಷವೇ ಅಲ್ಪಸಂಖ್ಯಾತರ ಭೂಮಿಯನ್ನು ಕಬಳಿಸಿದೆ ಎಂದು ತಿರುಗೇಟು ನೀಡಿದ್ದಾರೆ.
ಉಡುಪಿಯಲ್ಲಿ 'ಸುಲ್ತಾನಪುರ' ಹೆಸರು ಎಲ್ಲಿಂದ ಬಂತು?! ದಿಶಾಂಕ್ ಆಪ್‌ನಲ್ಲಿ ಹೆಸರು ನೋಡಿ ಗ್ರಾಮಸ್ಥರೇ ಶಾಕ್!
ಸಿಎಂ ಹೇಳಿರುವುದು ರೈತರ ಕಣ್ಣೊರೆಸುವ ತಂತ್ರ. ಸದ್ಯಕ್ಕೆ ನೋಟಿಸ್ ವಾಪಸ್ ಪಡೆಯಬಹುದು. ಮುಂದೆ ಬೇಕಾದಾಗ ನೋಟಿಸ್ ಕೊಡಲೂಬಹುದು. ಚುನಾವಣೆ ನಂತರ ನೋಟಿಸ್ ಕೊಡಲ್ಲ ಅಂತ ಏನು ಗ್ಯಾರಂಟಿ.? ರೈತರ ಬಗ್ಗೆ ಕಾಳಜಿ ಇದ್ದಲ್ಲಿ ವಕ್ಫ್ ಗೆಜೆಟ್ ನೋಟಿಫಿಕೇಶನ್ ರದ್ದುಮಾಡಿ. ನೋಟಿಫಿಕೇಶನ್ ರದ್ದುಮಾಡದೆ ನೋಟೀಸ್ ವಾಪಸ್ ಪಡೆಯೋದ್ರಿಂದ ಉಪಯೋಗವಿಲ್ಲ ನಮ್ಮ ಸರ್ಕಾರದಲ್ಲಿ ನೋಟಿಸ್ ಕೊಟ್ಟಿದ್ದು ಸತ್ಯ ಆದರೆ ಮಸೀದಿ ಇತ್ಯಾದಿ ಆಸ್ತಿ ಮುಸಲ್ಮಾನರ ಹೆಸರಲ್ಲಿ ಇರೋದ್ರ ಬಗ್ಗೆ ನೋಟಿಸ್ ಕೊಡಲಾಗಿದೆ. ಸಾರಾಸಗಟಾಗಿ ಉಳುಮೆ ಮಾಡುತ್ತಿರುವ ರೈತರಿಗೆ ನೋಟಿಸ್ ಕೊಟ್ಟಿಲ್ಲ ನಾಳೆ ಶಿಗ್ಗಾವಿ ಸವಣೂರು ಸೇರಿ ರಾಜ್ಯದಲ್ಲಿಡೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.