ಸರ್ಕಾರದ್ದು ಒಂದಿಂಚೂ ಜಾಗ ಇಲ್ಲ, ವಕ್ಫ್ ಆಸ್ತಿಯೇ ಒತ್ತುವರಿ ಆಗಿದೆ: ಸಚಿವ ಜಮೀರ್ ಅಹ್ಮದ್

By Ravi Janekal  |  First Published Nov 2, 2024, 3:38 PM IST

ವಕ್ಫ್ ವಿಚಾರದಲ್ಲಿ ಬಿಜೆಪಿ ಅವರು ಅನವಶ್ಯಕ ಗೊಂದಲ ಸೃಷ್ಟಿ ಮಾಡಿದ್ದಾರೆ. ಜಿಲ್ಲೆಯ ಹೊನವಾಡದಲ್ಲಿ ಕೇವಲ 11 ಎಕರೆ ಮಾತ್ರ ವಕ್ಫ್ ಅಸ್ತಿಯಿದೆ. ಆದರೆ ಅಲ್ಲಿ 1,200 ಎಕರೆ ಇದೆ ಅಂತಾ ಹೇಳಿದ್ದಾರೆ. ನಾವು ಯಾರಿಗೂ ನೋಟಿಸ್ ನೀಡಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದರು.


ವಿಜಯಪುರ  (ನ.2): ವಕ್ಫ್ ವಿಚಾರದಲ್ಲಿ ಬಿಜೆಪಿ ಅವರು ಅನವಶ್ಯಕ ಗೊಂದಲ ಸೃಷ್ಟಿ ಮಾಡಿದ್ದಾರೆ. ಜಿಲ್ಲೆಯ ಹೊನವಾಡದಲ್ಲಿ ಕೇವಲ 11 ಎಕರೆ ಮಾತ್ರ ವಕ್ಫ್ ಅಸ್ತಿಯಿದೆ. ಆದರೆ ಅಲ್ಲಿ 1,200 ಎಕರೆ ಇದೆ ಅಂತಾ ಹೇಳಿದ್ದಾರೆ. ನಾವು ಯಾರಿಗೂ ನೋಟಿಸ್ ನೀಡಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದರು.

ವಿಜಯಪುರದ ಹೊನವಾಡದಲ್ಲಿ ವಕ್ಫ್ ಆಸ್ತಿ ವಿವಾದ ಸಂಬಂಧ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಬಿಜೆಪಿ ಸರಕಾರದಲ್ಲೂ ವಕ್ಫ್ ಆಸ್ತಿ ಅತಿಕ್ರಮಿಸಿದ ಸಾವಿರಾರು ಜನರಿಗೆ ನೋಟಿಸ್ ನೀಡಲಾಗಿತ್ತು. ವಕ್ಫ್ ಆಸ್ತಿಯಲ್ಲಿ  ಒಂದು ಇಂಚು ಸರಕಾರದ್ದು ಇಲ್ಲ, ವಕ್ಫ್  ಆಸ್ತಿಯೇ ಸಾಕಷ್ಟು  ಒತ್ತುವರಿಯಾಗಿದೆ. ಅದನ್ನ ಸರಿಪಡಿಸುವ ಕೆಲಸ ನಾನು ಮಾಡುತ್ತಿದ್ದೇನೆ ಎಂದರು.

Tap to resize

Latest Videos

undefined

ಉಡುಪಿಯಲ್ಲಿ 'ಸುಲ್ತಾನಪುರ' ಹೆಸರು ಎಲ್ಲಿಂದ ಬಂತು?! ದಿಶಾಂಕ್ ಆಪ್‌ನಲ್ಲಿ ಹೆಸರು ನೋಡಿ ಗ್ರಾಮಸ್ಥರೇ ಶಾಕ್!

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರೇ ವಕ್ಫ್ ಆಸ್ತಿ ಬಿಟ್ಟುಕೊಡಿ ಅಂತಾ ಹೇಳಿದ್ರು. ಅವರು ಹೇಳಿಲ್ಲ ಅನ್ನಬಹುದು ಆದರೆ ಅವರ ಹೇಳಿದ ವಿಡಿಯೋ ಬೇಕಾದರೆ ಪ್ಲೇ ಮಾಡ್ತೇನೆ ನೋಡಿ. 41 ಮೋನೋಮೆಂಟ್ ಗೆ ವಕ್ಫ್ ಬೋರ್ಡನಿಂದ ನೋಟಿಸ್ ನೀಡಿದ  ವಿಚಾರದ ಬಗ್ಗೆ ಪ್ರಸ್ತಾಪಿಸಿದ ಸಚಿವರು, ಗೋಲ್‌ಗುಂಬಜ್ ಅವರಿಗೆ ಬಿಟ್ಟುಕೊಟ್ಟಿದ್ದೇವೆ ಗೋಲಗುಂಬಜ್ ಅನ್ನು ಕೇಂದ್ರದವರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಅದಕ್ಕೆ ನಾವು ಅದನ್ನು ಅವರಿಗೆ ಬಿಟ್ಟುಕೊಟ್ಟಿದ್ದೇವೆ. ವಕ್ಫ್ ಆಸ್ತಿಯನ್ನ 90% ನಷ್ಟು ಮುಸ್ಲಿಂ ರೇ ಒತ್ತುವರಿ ಮಾಡಿಕೊಂಡಿದ್ದಾರೆ. ಆ ಆಸ್ತಿಯನ್ನ ಮರಳಿ ಪಡೆಯುವ ಕೆಲಸ ಮಾಡುತ್ತೇನೆ. ಒತ್ತುವರಿ ಮಾಡಿ‌ರುವವರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳಲ್ಲ ಎಂದರು.

ಸಿಎಂ ಸ್ಥಾನದಲ್ಲಿ ಟಗರು ಕೂತಿದೆ:

ಬಿಜೆಪಿಯವರಿಗೆ ಬೇರೆ ಯಾವುದೇ ಇಶ್ಯೂ ಈಗಿಲ್ಲ. ಮುಡಾ ಹಗರಣದಲ್ಲಿ ಏನಿಲ್ಲ ಎಂದು ಗೊತ್ತಾಯ್ತು ಈಗ ವಕ್ಫ್ ಹಿಡಿದುಕೊಂಡಿದ್ದಾರೆ. ರಾಜ್ಯದಲ್ಲಿ ಮೂರು ಕಡೆ ಬೈ ಇಲೆಕ್ಷನ್ ಇದೆ, ಮಹಾರಾಷ್ಟ್ರದಲ್ಲಿ ಚುನಾವಣೆ ಇದೆ ಅದಕ್ಕಾಗಿ ಪಾಲಿಟಿಕಲ್ ಗಿಮಿಕ್  ಮಾಡುತ್ತಿದ್ದಾರೆ. ರಾಜಕೀಯ ಮಾಡುವ ಹಾಗಿದ್ದರೆ ನಮ್ಮ ಜೊತೆ ಮಾಡಿ ಜನರಿಗೆ ದಾರಿ ತಪ್ಲಿಸಬೇಡಿ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

ಇನ್ನು ಉಪಚುನಾವಣೆ ಬಳಿಕ ಡಿಕೆಶಿ ಸಿಎಂ ಆಗುವರು ಎಂಬ ಕೆಲ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ, ಐದು ವರ್ಷ ಸಿದ್ದರಾಮಯ್ಯ ನವರೇ ಸಿಎಂ ಆಗಿರುತ್ತಾರೆ. ಕೆಲವರು ಅವರರವರ ಅಭಿಪ್ರಾಯ ಹೇಳುತ್ತಾರೆ. ನನ್ನ ಅಭಿಪ್ರಾಯ ನಾನು ಹೇಳಿರುವೆ. ಸಿಎಂ ಸ್ಥಾನದಲ್ಲಿ ಟಗರು ಕೂತಿದೆ ಅವರನ್ನು ಅಲ್ಲಾಡಿಸಲು ಆಗಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಡಿಕೆ ಶಿವಕುಮಾರ ಬೆಂಬಲಿಗರಿಗೆ ಟಾಂಗ್ ನೀಡಿದರು.

ಮೋದಿಯನ್ನ ಟೀಕಿಸೋದು ಆಕಾಶಕ್ಕೆ ಉಗಿದಂತೆ, ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ವಾಗ್ದಾಳಿ

ಅಲ್ಲಾ ನ ಆಸ್ತಿ ಎಲ್ಲಿಂದ ಬಂತು ಎಂಬ ಕೇಂದ್ರ ಸಚಿವ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ ಸಚಿವರು,  ವಕ್ಫ್ ಬಗ್ಗೆ ಅವರಿಗೆ ಬುದ್ದಿ ಇರಬೇಕು. ವಕ್ಫ್ ಎಂದರೆ ಅಲ್ಲಾನ ಆಸ್ತಿ ಎನ್ನುತ್ತೇವೆ. ಅದು ಪ್ರಲ್ಹಾದ್ ಜೋಶಿ ಕೊಟ್ಟ ಆಸ್ತಿ ಅಲ್ಲ, ಸರ್ಕಾರ ಕೊಟ್ಟ ಆಸ್ತಿ ಅಲ್ಲ, ದಾನಿಗಳು ಕೊಟ್ಟ ಆಸ್ತಿ. ಹಿಂದೆ ಬಸವರಾಜ್ ಬೊಮ್ಮಾಯಿ ಅವರೇ ವಕ್ಫ್ ಆಸ್ತಿ ಅತಿಕ್ರಮಣ ಆಗುತ್ತಿದೆ ಎಂದು ಒಂದು ಕಾರ್ಯಕ್ರಮದಲ್ಲಿ ಮಾತಾನಾಡಿದ್ದಾರೆ. ಹಾಗಿದ್ದರೆ ಬಸವರಾಜ್ ಬೊಮ್ಮಾಯಿ ಯಾಕೆ ಹಾಗೆ ಹೇಳುತ್ತಿದ್ದರು? ವಕ್ಫ್ ಇರಲಿ, ಮುಜರಾಯಿ ಇರಲಿ ಎಲ್ಲವೂ ದೇವರ ಆಸ್ತಿ. ಮುಜರಾಯಿ ಇಲಾಖೆಯದ್ದು 36 ಸಾವಿರ ಎಕರೆ ಇದೆ. ಅದರಲ್ಲೂ 800 ಎಕರೆ ಅತೀಕ್ರಮಣವಾಗಿದೆ.  ಇದನ್ನ ಬಿಜೆಪಿಯ ಬಸವರಾಜ್ ಬೊಮ್ಮಾಯಿಯವರೇ ಹೇಳಿಕೆ ನೀಡಿದ್ದಾರೆ. ಅವರು ಸಿಎಂ ಇದ್ದಾಗಲೇ ಈ ವಿಚಾರವಾಗಿ ಹೇಳಿದ್ದಾರೆ ಎಂದರು.

click me!