'ಉದ್ಯಮ ಸುಧಾರಣೆ ಕ್ರಿಯಾ ಯೋಜನೆ (ಬಿಆರ್‌ಎಪಿ) 2022ʼಯಲ್ಲಿ ಕರ್ನಾಟಕವು ದೇಶದಲ್ಲಿಯೇ ಉನ್ನತ ಸಾಧನೆ ಮಾಡಿದೆ. ಇದನ್ನು ಮೆಚ್ಚಿ ಕೇಂದ್ರ ಸರ್ಕಾರ ಗೌರವಿಸಿ ಸನ್ಮಾನಿಸಿದೆ.
ಬೆಂಗಳೂರು (ಸೆ.06): 'ಉದ್ಯಮ ಸುಧಾರಣೆ ಕ್ರಿಯಾ ಯೋಜನೆ (ಬಿಆರ್‌ಎಪಿ) 2022ʼ (Business Reform Action Plan (BRAP) 2022) ಯಲ್ಲಿ ಕರ್ನಾಟಕವು ದೇಶದಲ್ಲಿಯೇ ಉನ್ನತ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ಸರ್ಕಾರದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನಾ ಇಲಾಖೆಯು (ಡಿಪಿಐಐಟಿ) ನವದೆಹಲಿಯಲ್ಲಿ ಏರ್ಪಡಿಸಿದ್ದ ʼಉದ್ಯೋಗ ಸಮಾಗಂ” ಕಾರ್ಯಕ್ರಮದಲ್ಲಿ ಈ ಗೌರವ ಪ್ರದಾನ ಮಾಡಲಾಗಿದೆ.
ಉದ್ಯಮ ವಹಿವಾಟು ಉತ್ತೇಜಿಸಲು ಸುಲಲಿತ ವಾತಾವರಣ ಬಲಪಡಿಸುವ ಮತ್ತು ರಾಜ್ಯದಾದ್ಯಂತ ಸೇವಾ ವಿತರಣೆ ಹೆಚ್ಚಿಸುವ ಗುರಿ ಹೊಂದಿರುವ 261 ಉದ್ಯಮ ಸುಧಾರಣೆಗಳು ಮತ್ತು 91 ನಾಗರಿಕ-ಕೇಂದ್ರಿತ ಉಪಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ರಾಜ್ಯದ ಅಸಾಧಾರಣ ಪ್ರಯತ್ನಗಳಿಗೆ ಈ ಪುರಸ್ಕಾರ ದೊರೆತಿದೆ. 'ಉದ್ಯಮ ಸುಧಾರಣಾ ಕ್ರಿಯಾ ಯೋಜನೆ 2020' ರಲ್ಲಿನ 'ಉನ್ನತ ಸಾಧನೆಯ ಯಶಸ್ಸನ್ನು ರಾಜ್ಯವು ಮುಂದುವರೆಸಿದೆ.
ಅನ್ನಭಾಗ್ಯ ಯೋಜನೆ: 10 Kg ಅಕ್ಕಿ ಬೇಕಾ? ಇಲ್ಲ 5 kg ಹಣ ಬೇಕಾ? ಪ್ರಾಯೋಗಿಕ ಯೋಜನೆ ಜಾರಿ!
ರಾಜ್ಯದ ಈ ಸಾಧನೆಯನ್ನು ರಾಷ್ಟ್ರ ಮಟ್ಟದಲ್ಲಿ ಗುರುತಿಸಿರುವುದು ಸುಲಲಿತ ಉದ್ಯಮ ಸೌಲಭ್ಯ ಕಲ್ಪಿಸುವಲ್ಲಿನ ರಾಜ್ಯದ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಉದ್ಯಮ ಸುಧಾರಣಾ ಕ್ರಮಗಳಿಗೆ ಚಾಲನೆ ನೀಡುವಲ್ಲಿ ರಾಜ್ಯ ಸರ್ಕಾರ ಕೈಗೊಂಡಿರುವ ಗಮನಾರ್ಹ ಪ್ರಯತ್ನಗಳಿಗಾಗಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿದರು.
ಕೇಂದ್ರ ಸರ್ಕಾರದ ʼಡಿಪಿಐಐಟಿʼಯ ಈ ಮನ್ನಣೆಯು ಉದ್ಯಮ ಸುಧಾರಣಾ ಕ್ರಮಗವ್ಯಬಳಿಗೆ ಕರ್ನಾಟಕ ಅನುಸರಿಸುತ್ತಿರುವ ಧೋರಣೆಗೆ ದೊರೆತ ಮಾನ್ಯತೆಯಾಗಿದ್ದು, ಸುಸ್ಥಿರ ಆರ್ಥಿಕ ಬೆಳವಣಿಗೆಗೆ ವೇದಿಕೆ ಕಲ್ಪಿಸಲಿದೆ. ಈ ವೇಳೆ ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಇದ್ದರು.