ಕಾಂಗ್ರೆಸ್ ಸರ್ಕಾರ ಬೇಕಂತಲೇ ದರ್ಶನ್ ಕೊಲೆ ಕೇಸಿನ ಫೋಟೋ ರಿಲೀಸ್ ಮಾಡ್ತಿದೆ; ಕೇಂದ್ರ ಸಚಿವ ಜೋಶಿ

By Sathish Kumar KH  |  First Published Sep 6, 2024, 6:52 PM IST

ರಾಜ್ಯ ಸರ್ಕಾರವು ಮುಡಾ ಹಗರಣದ ಚರ್ಚೆಯನ್ನು ಮುಚ್ಚಿಹಾಕಲು ನಟ ದರ್ಶನ್ ಅವರ ರೇಣುಕಾಸ್ವಾಮಿ ಕೊಲೆ ಪ್ರಕರಣದ ಫೋಟೋಗಳನ್ನು ಬಿಡುಗಡೆ ಮಾಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ. 


ಧಾರವಾಡ (ಸೆ.06): ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲಿರುವ ಮುಡಾ ಹಗರಣದ ಚರ್ಚೆಯನ್ನು ಹತ್ತಿಕ್ಕಲೆಂದೇ ಸ್ವತಃ ಕಾಂಗ್ರೆಸ್ ಸರ್ಕಾರದಿಂದ ನಟ ದರ್ಶನ್ ಮಾಡಿದ್ದಾರೆನ್ನಲಾದ ರೇಣುಕಾಸ್ವಾಮಿ ಕೊಲೆ ಕೇಸಿನ ಸಂಬಂಧಿತ ಫೋಟೋಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದರ್ಶನ್ ಫೋಟೋ ಉದ್ದೇಶಪೂರ್ವಕವಾಗಿಯೇ ರಿಲೀಸ್ ಮಾಡುತ್ತಿದೆ. ಖುದ್ದು ರಾಜ್ಯ ಸರ್ಕಾರದಿಂದಲೇ ಈ ಕೆಲಸ ಮಾಡಲಾಗುತ್ತಿದೆ. ಚಿತ್ರದುರ್ಗದ ವ್ಯಕ್ತಿ ರೇಣುಕಾಸ್ವಾಮಿಯದ್ದು ರಾಜ್ಯ ಕಂಡಂತಹ ಅತ್ಯಂತ ಕ್ರೂರ ಹತ್ಯೆಯಾಗಿದೆ. ಆದರೆ, ಸಿಎಂ ಸಿದ್ದರಾಮಯ್ಯ ಮಾಡಿದ್ದಾರೆನ್ನಲಾದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ಮತ್ತು ಕಾಂಗ್ರೆಸ್ ಸರ್ಕಾರದ ಮಂತ್ರಿ ನಾಗೇಂದ್ರ ಅವರು ಭಾಗಿಯಾಗಿರುವ ವಾಲ್ಮೀಕಿ ಹಗರಣಗಳು ಹೊರಗೆ ಬಂದ ನಂತರ ಅವುಗಳ ಬಗ್ಗೆ ಚರ್ಚೆ ಜೋರಾಯಿತು.

Tap to resize

Latest Videos

ಸ್ಯಾಂಡಲ್‌ವುಡ್‌ಗೆ ತಪ್ಪಲಿಲ್ವಾ ನಾಗದೋಷ: ಮೊದಲು ನಾಗಭೂಷಣ, ಈಗ ನಾಗಶೇಖರ್ ಕಾರು ಆಕ್ಸಿಡೆಂಟ್!

ರಾಜ್ಯಾದ್ಯಂತ ಮುಡಾ ಮತ್ತು ವಾಲ್ಮೀಕಿ ಹಗರಣದ ಕುರಿತ ಚರ್ಚೆಗಳು ಶುರುವಾದ ನಂತರ, ಈ ಚರ್ಚೆಯನ್ನು ಡೈವರ್ಟ್ ಮಾಡುವ ಉದ್ದೇಶದಿಂದಲೇ ಸ್ವತಃ ರಾಜ್ಯ ಸರ್ಕಾರದಿಂದಲೇ ಪುನಃ ನಟ ದರ್ಶನ್ ಪ್ರಕರಣವನ್ನು ಮುನ್ನೆಲೆಗೆ ಎಳೆದು ತರಲಾಗಿದೆ. ಸಂಕುಚಿತ ಷಡ್ಯಂತ್ರ ಮನೋಭಾವದಿಂದ ಹೀಗೆ ಮಾಡಲಾಗಿದೆ. ಇಲ್ಲಿ ಕೊಲೆ ಮಾಡಿದವರಿಗೆ ನ್ಯಾಯಾಲಯದಲ್ಲಿ ಅತ್ಯಂತ ಕಠಿಣ ಶಿಕ್ಷೆ ಆಗಲೇಬೇಕು. ಆದರೆ, ಆರೋಪಿಗಳ ಮೊಬೈಲ್ ಫೋನ್‌ಗಳಿಂದ ರಿಟ್ರೀವ್ (ಮರು ಸಂಗ್ರಹಿಸಲಾದ) ಮಾಡಿದ ಫೋಟೋಗಳನ್ನು ಬಿಡುಗಡೆ ಮಾಡಿರೋದು ಅಕ್ಷಮ್ಯ ಅಪರಾಧವಾಗಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರ ಒಂದು ಗಂಭೀರ ಕೊಲೆ ಕೇಸಿಗೆ ಸಂಬಂಧಿಸಿದ ಫೋಟೋಗಳನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುತ್ತಿರುವ ವಿಚಾರವನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಬೇಕು. ಇದಕ್ಕೆ ಕಾರಣಿಕರ್ತರಾದ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಬೇಕು. ಇಲ್ಲಿ ವಿಷಯಾಂತರ ಮಾಡಲೆಂದೇ ಹೀಗೆ ಮಾಡಲಾಗಿದೆ ಎಂದು ಆರೋಪಿಸಿದರು.

ಎತ್ತಿನಹೊಳೆ ಯೋಜನೆ: ಹಾಸನ, ಚಿಕ್ಕಮಗಳೂರಿಗೆ ನೀರು; ಕೋಲಾರ, ಚಿಕ್ಕಬಳ್ಳಾಪುರಕ್ಕೆ ಖಾಲಿ ಚೊಂಬು?

ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರೆ ವರ್ಷವಾಗಿದೆ. ಒಂದೂವರೆ ವರ್ಷ ಬಿಟ್ಟು ಈಗ ಯಾಕೆ ಕೋವಿಡ್ ಹಗರಣದ ತನಿಖೆ ಮಾಡುತ್ತಿದೆ? ಜೊತೆಗೆ, ಈ ತನಿಖೆಯಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿಯನ್ನು ಹೊರಗೆ ಬಿಟ್ಟಿದ್ದಾರೆ. 2021 - 22ರ ವರದಿ ಇದಾಗಿದೆ. ಇಲ್ಲಿಯವರೆಗೂ ಯಾಕೆ ಬಿಡುಗಡೆ ಮಾಡಿರಲಿಲ್ಲ? ನೀವು ಕಳ್ಳತನ ಮಾಡಿದಾಗ ನಿಮ್ಮನ್ನು ಹಿಡಿದಾಗ ಇನ್ನೊಬ್ಬರ ಮೇಲೆ ಗೂಬೆ ಕೂರಿಸೋ ಯತ್ನ ಮಾಡುತ್ತಿದ್ದಾರೆ. ಅವರೂ ಕಳ್ಳತನ ಮಾಡಿದ್ದಾರೆ ಅಂತ ಬಿಂಬಿಸಿ ಬಚಾವಾಗೋ ಯತ್ನ ಮಾಡಲಾಗುತ್ತಿದೆ. ಇದೆಲ್ಲವೂ ನಡೆಯೋದಿಲ್ಲ. ಅವರು ಏನು ತನಿಖೆ ಮಾಡ್ತಾರೋ ಮಾಡಲಿ. ಹಿಂದೆ ಆರೋಗ್ಯ ಸಚಿವರಾಗಿದ್ದ ಸುಧಾಕರ್ ಅವರೇ ಹೇಳಿದ್ದಾರೆ. ಏನು ಬೇಕಾದರೂ ತನಿಖೆ ಮಾಡಿ ನನಗೇನು ಭಯ ಇಲ್ಲ ಅಂತ ಹೇಳಿದ್ದಾರೆ. ವಿಜಯೇಂದ್ರ, ಅಶೋಕ ಅವರೂ ತನಿಖೆ ಮಾಡಲಿ ಅಂದಿದ್ದಾರೆ. ಜನಾರ್ದನ್ ರೆಡ್ಡಿ ಪ್ರಕರಣದಿಂದ ಹಿಡಿದು ಎಲ್ಲವೂ ಮುಡಾ ಹಗರಣ ಆದ ನಂತರ ಶುರುವಾಗಿವೆ ಎಂದು ಟೀಕೆ ಮಾಡಿದರು.

click me!