ರಾಜ್ಯದ ಎರಡನೇ ಅತೀ ದೊಡ್ಡ ರೈಲ್ವೆ ನಿಲ್ದಾಣ ಕುಡುಕರ ಅಡ್ಡೆ, ನಿಯಂತ್ರಿಸಲು ವಿಫಲವಾದ ಇಲಾಖೆ!

By Kannadaprabha News  |  First Published May 12, 2024, 1:44 PM IST

ರಾಜ್ಯದ ಎರಡನೇ ಅತೀ ದೊಡ್ಡ ರೈಲ್ವೆ ನಿಲ್ದಾಣವೆಂಬ ಹೆಗ್ಗಳಿಕೆ ಪಡೆದಿರುವ ಬಂಗಾರಪೇಟೆ ರೈಲ್ವೆ ನಿಲ್ದಾಣದ ಸುತ್ತಮುತ್ತ  ಕುಡುಕರನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ.


ಬಂಗಾರಪೇಟೆ (ಮೇ.12): ರಾಜ್ಯದ ಎರಡನೇ ಅತೀ ದೊಡ್ಡ ರೈಲ್ವೆ ನಿಲ್ದಾಣವೆಂಬ ಹೆಗ್ಗಳಿಕೆ ಪಡೆದಿರುವ ಬಂಗಾರಪೇಟೆ ರೈಲ್ವೆ ನಿಲ್ದಾಣದ ಸುತ್ತಮುತ್ತ ಕುಡುಕರ ಅಡ್ಡವಾಗಿ ಬದಲಾಗಿದ್ದರೂ ಇಲಾಖೆಯಾಗಲಿ, ರೈಲ್ವೆ ಪೊಲೀಸರಾಗಲಿ ಕುಡುಕರನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ.

ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ನಂತರ ದೊಡ್ಡ ನಿಲ್ದಾಣ ಹಾಗೂ ಇಲಾಖೆಗೆ ಹೆಚ್ಚು ಆದಾಯ ತರುವ ನಿಲ್ದಾಣವೆಂಬ ಹೆಗ್ಗಳಿಕೆ ಪಡೆದಿರುವ ಪಟ್ಟಣದ ರೈಲ್ವೆ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶವನ್ನು ಕುಡುಕರಿಂದ ಕಲುಷಿತ ವಾತಾವರಣ ನಿರ್ಮಾಣವಾಗಿ, ನಿತ್ಯ ರೈಲು ಹತ್ತಲು ಬರುವ ಸಾವಿರಾರು ಪ್ರಯಾಣಿಕರಿಗೆ ಕಿರಿಕಿರಿ ಉಂಟಾಗಿದೆ. ಹೊರಗಡೆಯಿಂದ ಪ್ಲಾಟ್‌ಫಾರಂಗೆ ಹೋಗಲು ಇರುವ ಮೆಟ್ಟಲುಗಳ ಬಳಿ, ಮೆಟ್ಟಲುಗಳ ಮೇಲೆ ಭಿಕ್ಷುಕರು,ಕುಡುಕರು ಅಲ್ಲೆ ಕುಡಿದು ಮಲಗುವರು.

Tap to resize

Latest Videos

ಪಂಜಾಬ್‌ನಲ್ಲಿ ವಿಚಿತ್ರ ಘಟನೆ, ಬೋಗಿ ಬಿಟ್ಟು 3 ಕಿ.ಮೀ. ಚಲಿಸಿದ ರೈಲು ಎಂಜಿನ್‌!

ಮೆಟ್ಟಲುಗಳಲ್ಲಿ ಬೀಡಿ, ಸಿಗರೇಟು ತುಂಡುಗಳನ್ನು ಹಾಗೂ ಮದ್ಯದ ಪಾಕೇಟ್‌ಗಳನ್ನು ಎಸೆದು ಪ್ರಯಾಣಿಕರು ಮೆಟ್ಟಲು ಹತ್ತಲು ಮುಂಜುಗರ ಪಡುವಂತಾಗಿದೆ. ಇನ್ನೂ ಕೆಲವರು ಪ್ಲಾಟ್ಪಾರಂಗಳ ಮೇಲೆಯೇ ಕುಡಿದು ಬಿದ್ದಿದ್ದರೂ ರೈಲ್ವೆ ಪೊಲೀಸರು ಪ್ರಶ್ನಿಸುವುದಿಲ್ಲ, ಇದರಿಂದ ನಿಲ್ದಾಣದಲ್ಲಿ ಕುಡುಕರ ಹಾಗೂ ಭಿಕ್ಷುಕರ ಹಾವಳಿ ಮಿತಿ ಮೀರಿದೆ. ಪ್ರಯಾಣಿಕರು ಮುಜುಗರದಿಂದಲೇ ನಿಲ್ದಾಣಕ್ಕೆ ಪ್ರವೇಶ ಮಾಡುವಂತಾಗಿದೆ.

ಹೈದರಾಬಾದ್ ಟ್ರಾಫಿಕ್ ತಪ್ಪಿಸೋಕೆ ಮೆಟ್ರೋ ರೈಡ್ ಮಾಡಿದ ರಶ್ಮಿಕಾ ಬಾಯ್ ಫ್ರೆಂಡ್! ಇವ್ರು ಅವ್ರಲ್ಲ?

ಪಟ್ಟಣದ ರೈಲ್ವೆ ನಿಲ್ದಾಣವನ್ನು ಕೋಟ್ಯಾಂತರ ರು. ವೆಚ್ಚದಲ್ಲಿ ಮೇಲ್ದರ್ಜೇಗೆ ಏರಿಸುವ ಕಾಮಗಾರಿ ಬರದಿಂದ ಸಾಗಿದೆ. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ನಿತ್ಯ ೧೨ಸಾವಿರಕ್ಕೂ ಹೆಚ್ಚಿನ ಜನರು ರೈಲು ಮಾರ್ಗದ ಮೂಲಕ ಬೆಂಗಳೂರಿಗೆ ಪ್ರಯಾಣ ಮಾಡುವರು. ಇಂತಹ ನಿಲ್ದಾಣದಲ್ಲಿ ಕುಡುಕರ ಹಾಗೂ ಭಿಕ್ಷುಕರ ಹಾವಳಿಯಿಂದ ಪ್ರಯಾಣಿಕರಿಗೆ ಮುಕ್ತಿ ಕಾಣಿಸಬೇಕೆಂದು ಒತ್ತಾಯಿಸಿದ್ದಾರೆ.

click me!