
ಬೆಂಗಳೂರು (ಏ.17) ಪರೀಕ್ಷೆ, ಫಲಿತಾಂಶ ಮುಗಿಸಿ ರಜೆಯ ಮಜಾ ಸವಿಯುತ್ತಿರುವ ವಿದ್ಯಾರ್ಥಿಗಳಿಗೆ ಇದೀಗ 2026-27ರ ಸಾಲಿನ ಶೈಕ್ಷಣಿಕ ವೇಳಾಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಈ ಬಾರಿ ರಾಜ್ಯದಲ್ಲಿ ಮೇ.29ರಿಂದ ಶಾಲೆಗಳು ಪುನರ್ ಆರಂಭಗೊಳ್ಳಲಿದೆ. ರಾಜ್ಯದ ಸರಕಾರಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ 2026-27 ನೆ ಶೈಕ್ಷಣಿಕ ವರ್ಷವು ಮೇ 29 ರಿಂದ ಆರಂಭವಾಗಲಿವೆ ಎಂದಿದೆ.
ಮೇ.29 ರಿಂದ ಶಾಲೆಗಳು ಆರಂಭಗೊಂಡರೆ, ಈ ಬಾರಿ ದಸರಾ ಹಬ್ಬಕ್ಕೆ 18 ದಿನ ರಜೆ ನೀಡಲಾಗಿದೆ. ಹೀಗಾಗಿ ಶೈಕ್ಷಣಿಕ ಸಾಲಿನ ಮೊದಲ ಅವಧಿ ಮೇ.29 ರಿಂದ ಅಕ್ಟೋಬರ್ 2ರ ವರೆಗೆ ಇರಲಿದೆ. ಬಳಿಕ 18 ದಿನ ದಸರ ರಜೆ ಸವಿಯನ್ನು ವಿದ್ಯಾರ್ಥಿಗಳು ಅನುಭವಿಸಲಿದ್ದಾರೆ.
2026-27ರ ಸಾಲಿನ ಶೈಕ್ಷಣಿಕ ವರ್ಷದ ಎರಡನೇ ಅವಧಿ ಅಕ್ಟೋಬರ್ 22 ರಿಂದ ಆರಂಭಗೊಳ್ಳಲಿದೆ. ಈ ಅವಧಿ ಎಪ್ರಿಲ್ ತಿಂಗಳವರೆಗೆ ಇರಲಿದೆ. ಎಪ್ರಿಲ್ ತಿಂಗಳಲ್ಲಿ ಪರೀಕ್ಷೆಯೊಂದಿಗೆ ಶೈಕ್ಷಣಿಕ ವರ್ಷ ಅಂತ್ಯಗೊಳ್ಳಲಿದೆ. ಒಟ್ಟು 365 ದಿನಗಳಲ್ಲಿ 245 ಕರ್ತವ್ಯ ದಿನಗಳಾಗಿದೆ ಎಂದಿದೆ. ಇದರಲ್ಲಿ ಬೋಧನೆಗೆ 181 ದಿನ , ಪಠ್ಯೇತರ ಚಟುವಟಿಕೆ ಉಳಿದ ದಿನಗಳನ್ನು ಮೀಸಲಿಡಲಾಗುವುದು ಎಂದು ಶೈಕ್ಷಣಿಕ ಪ್ರಕಟಣೆಯಲ್ಲಿ ಹೇಳಲಾಗಿದೆ. ಜೂನ್ 30ರೊಳಗೆ ಮಕ್ಕಳ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ.
ಶಾಲೆ ಬಿಟ್ಟ 6 ರಿಂದ 18 ವರ್ಷದ ಮಕ್ಕಳನ್ನು ಮರಳಿ ತರಲು ವಿಶೇಷ ಆಂದೋಲನ ನಡೆಸಲು ಇಲಾಖೆ ಆದೇಶಿಸಿಸಿದೆ. ಜಿಲ್ಲೆ, ತಾಲೂಕು, ಹಾಗೂ ಗ್ರಾಮಮಟ್ಟದಲ್ಲಿ ಈ ಆಂದೋಲ ಸಕ್ರಿಯವಾಗಿ ಜಾರಿಗೊಳಿಸಲು ಇಲಾಖೆ ತಯಾರಿ ಮಾಡಿಕೊಂಡಿದೆ. ಈ ಮೂಲಕ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಿ ವಿದ್ಯಾಭ್ಯಾಸ ಮಟ್ಟ ಹೆಚ್ಚಿಸಲು, ಮಕ್ಕಳ ಭವಿಷ್ಯ ಉಜ್ವಲಗೊಳಿಸಲು ಇಲಾಖೆ ಮುಂದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ