ಹೊರ ರಾಜ್ಯಗಳಿಂದ ವಾಹನಗಳನ್ನು ತಂದು ಇಲ್ಲಿ ರಸ್ತೆ ತೆರಿಗೆ ಪಾವತಿಸದೇ, ನಿಯಮ ಉಲ್ಲಂಘಿಸುತ್ತಾ ಚಲಾಯಿಸುತ್ತಿರುವವರಿಗೆ ಕರ್ನಾಟಕ ಶಾಕ್ ನೀಡಿದೆ. ಇಂತಹ ವಾಹನಗಳನ್ನು ಸೀಝ್ ಮಾಡಲಾಗುತ್ತಿದೆ. ಇದೀಗ ನಾನ್ KA ವಾಹನಗಳ ಮೇಲೆ ಕರ್ನಾಟಕ ಪೊಲೀಸರ ಕೈಗೊಂಡ ಕ್ರಮಗಳೇನು? ಇದರಿಂದ ಹಲವರು ಕಂಗಾಲಾಗಿದ್ದೇಕೆ?
ಬೆಂಗಳೂರು(ಮಾ.27) ಕರ್ನಾಟಕದ ಪ್ರಮುಖ ನಗರ, ಪಟ್ಟಣ, ಹಳ್ಳಿ ಸೇರಿದಂತೆ ಎಲ್ಲೆಡೆ ಹೊರ ರಾಜ್ಯಗಳಿಂದ ಉದ್ಯೋಗ ಸೇರಿದಂತೆ ಹಲವು ಕಾರಣಗಳಿಂದ ಬಂದು ನೆಲೆ ನಿಂತಿದ್ದಾರೆ. ಆದರೆ ಹೀಗೆ ಬಂದವರ ಪೈಕಿ ಹಲವರು ರಸ್ತೆ ಸಾರಿಗೆ ನಿಯಮ ಉಲ್ಲಂಘಿಸುತ್ತಿದ್ದಾರೆ. ಹೊರ ರಾಜ್ಯಗಳ ವಾಹನಗಳನ್ನು ತಂದು ಇಲ್ಲಿ ಚಲಾಯಿಸುತ್ತಿದ್ದಾರೆ. ಆದರೆ ಕರ್ನಾಟಕ ರಾಜ್ಯಕ್ಕೆ ತೆರಿಗೆ ಪಾವತಿಸುತ್ತಿಲ್ಲ, ಇಲ್ಲಿ ರಸ್ತೆ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಬೆಂಗಳೂರು, ಮೈಸೂರು ಸೇರಿದಂತೆ ಕರ್ನಾಟಕ ಪ್ರಮುಖ ನಗರಗಳಲ್ಲಿ ನಿಯಮ ಉಲ್ಲಂಘಿಸುತ್ತಿರುವ ವಾಹನಗಳ ಪೈಕಿ ಹೊರ ರಾಜ್ಯದ ವಾಹನಗಳ ಪಾಲು ದೊಡ್ಡದಿದೆ. ಇದೀಗ ಕರ್ನಾಟಕ ರಸ್ತೆ ಸಾರಿಗೆ ಇಲಾಖೆ ಹಾಗೂ ಟ್ರಾಫಿಕ್ ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಕರ್ನಾಟಕಕ್ಕೆ ರಸ್ತೆ ತೆರಿಗೆ ಪಾವತಿಸದೆ ಓಡಿಸುತ್ತಿರುವ ಹೊರ ರಾಜ್ಯದ ವಾಹನ, ಇಲ್ಲಿನ ನಿಯಮ ಉಲ್ಲಂಘಿಸಿ ಸಾಗುತ್ತಿರುವ ಹೊರ ರಾಜ್ಯದ ವಾಹನಗಳನ್ನು ಅಧಿಕಾರಿಗಳು ಸೀಝ್ ಮಾಡಿದ್ದಾರೆ.
ಬೆಂಗಳೂರಿನಲ್ಲಿದೆ ಹೊರ ರಾಜ್ಯದ ಹೆಚ್ಚು ವಾಹನ
ಬೆಂಗಳೂರಿನಲ್ಲಿ ಈಗಾಗಲೇ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಹೊರ ರಾಜ್ಯಗಳಿಂದ ವಾಹನಗಳನ್ನು ತಂದು ಬೆಂಗಳೂರಿನಲ್ಲಿ ಪ್ರತಿನಿತ್ಯ ಬಳಸಲಾಗುತ್ತಿದೆ. ರಾಜ್ಯದಲ್ಲಿ 30 ದಿನಕ್ಕಿಂತ ಹೆಚ್ಚು ಕಾಲ ಹೊರ ರಾಜ್ಯದ ವಾಹನ ಓಡಿಸಿದರೆ ಸಂಪೂರ್ಣವಾಗಿ ಕರ್ನಾಟಕ ರಸ್ತೆ ತೆರಿಗೆ ಪಾವತಿಸಬೇಕು. ಹಲವು ವಾಹನಗಳು ಕೆಲ ವರ್ಷಗಳಿಂದ ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗದಲ್ಲಿ ಪ್ರತಿ ನಿತ್ಯ ಬಳಕೆಯಾಗುತ್ತಿದೆ. ರಸ್ತೆ ಸಾರಿಗೆ ನಿಯಮದ ಪ್ರಕಾರ ಕರ್ನಾಟಕ ಅಧಿಕಾರಿಗಳು ಇದೀಗ ಹೊರ ರಾಜ್ಯದ ಹಲವು ಕಾರುಗಳನ್ನು ಸೀಝ್ ಮಾಡಿದ್ದಾರೆ. ಜೊತೆಗೆ ದುಬಾರಿ ದಂಡ ವಿಧಿಸಿದ್ದಾರೆ.
ಭಾರತದಲ್ಲಿ ಪೊಲೀಸ್ ಕಂಪ್ಲೇಂಟ್ ಕೊಡೋದು ಹೇಗೆ? ಇಲ್ಲಿದೆ ಮಾಹಿತಿ
ಕರ್ನಾಟಕ ಮೂಲೆ ಮೂಲೆಯಲ್ಲಿ ಕ್ರಮ
ಕೇವಲ ಬೆಂಗಳೂರು ಮಾತ್ರವಲ್ಲ, ಕರ್ನಾಟಕದ ಎಲ್ಲಾ ಭಾಗದಲ್ಲಿ ಹೊರರಾಜ್ಯದ ವಾಹನಗಳ ವಿರುದ್ದ ಕ್ರಮಕ್ಕ ಆರ್‌ಟಿಒ ಅಧಿಕಾರಿಗಳು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಮುಂಬೈ ರಿಜಿಸ್ಟ್ರೇಶನ್ ಮರ್ಸಿಡಿಸ್ ಬೆಂಜ್ ಕಾರನ್ನು ಸೀಝ್ ಮಾಡಿ ವಾಹನ ಮಾಲೀಕರಿಗೆ ದುಬಾರಿ ದಂಡ ವಿಧಿಸಿದ್ದಾರೆ. ಲಕ್ಷುರಿ ಕಾರುಗಳ ಜೊತೆಗೆ ಹ್ಯುಂಡೈ ಐ20 ಸೇರಿದಂತೆ ಇತರ ಕಾರುಗಳನ್ನು ಸೀಝ್ ಮಾಡಿ ದಂಡ ವಿಧಿಸಿದ್ದಾರೆ.
ಮೋಟಾರು ವಾಹನ ಕಾಯ್ದೆ ಏನು ಹೇಳುತ್ತೆ?
1988ರ ಕೇಂದ್ರ ಮೋಟಾರು ವಾಹನ ಕಾಯ್ದೆ ಪ್ರಕಾರ, ಒಂದು ರಾಜ್ಯದಲ್ಲಿ ರಿಜಿಸ್ಟ್ರೇಶನ್ ಆದ ವಾಹನ ಹೊರ ರಾಜ್ಯದಲ್ಲಿ ಗರಿಷ್ಠ 11 ತಿಂಗಳು ಓಡಾಡಬಹುದು. ಅದಕ್ಕಿಂತ ಹೆಚ್ಚು ಕಾಲ ಹೊರ ರಾಜ್ಯದಲ್ಲಿ ಓಡಿದರೆ ಅಥವಾ ಇದ್ದರೆ ಆಯಾ ರಾಜ್ಯಕ್ಕೆ ಸಂಪೂರ್ಣ ರ್ತೆ ತೆರಿಗೆ ಪಾವತಿಸಬೇಕು.
ಕರ್ನಾಟಕ ಮೋಟಾರ್ ವಾಹನ ಕಾಯ್ದೆ ಹೇಳುವುದೇನು?
ಕೇಂದ್ರ ಮೋಟಾರು ವಾಹನ ಕಾಯ್ದೆ ಹೆಚ್ಚಿನ ಕಾಲಾವಕಾಶ ನೀಡಿದೆ. ಆದರೆ 2014ರ ಕರ್ನಾಟಕ ಮೋಟಾರು ವಾಹನ ಕಾಯ್ದೆ ಪ್ರಕಾರ ಹೊರ ರಾಜ್ಯದ ವಾಹನಗಳು ಕರ್ನಾಟಕದಲ್ಲಿ ಗರಿಷ್ಠ 30 ದಿನ ಓಡಾಟ ನಡೆಸಬಹುದು. ಅದಕ್ಕಿಂತ ಹೆಚ್ಚು ದಿನ ಕರ್ನಾಟಕದಲ್ಲಿ ಓಡಿದರೆ ಸಂಪೂರ್ಣ ರಸ್ತೆ ತೆರಿಗೆ ಪಾವತಿಸಬೇಕು.
ಕರ್ನಾಟಕ ನಿಯಮ ಅನುಸರಿಸರಿ ರಾಜ್ಯದ ಆರ್‌ಟಿಒ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ. 30 ದಿನಕ್ಕಿಂತ ಹೆಚ್ಚಿನ ಕಾಲ ಹೊರ ರಾಜ್ಯದ ವಾಹನ ಓಡಾಟ ನಡೆಸಿದರೆ ದಂಡ ಬೀಳುವುದು ಖಚಿತ. ದಂಡ ತಪ್ಪಿಸಲು ವಾಹನ ರಿಜಿಸ್ಟ್ರೇಶನ್ ಕರ್ನಾಟಕಕ್ಕೆ ಬದಲಾಯಿಸಬೇಕು, ಅಥವಾ ಇಲ್ಲಿನ ರೋಡ್ ಟ್ಯಾಕ್ಸ್ ಪಾವತಿಸಬೇಕು. ಇದರನ್ನು ಹೊರತುಪಡಿಸಿ ಬೇರೇ ಮಾರ್ಗವಿಲ್ಲ. ಇದರ ಜೊತೆಗೆ ರಸ್ತೆ ನಿಯಮ ಉಲ್ಲಂಘಿಸಿದರೂ ಬೀಳುತ್ತೆ ದುಬಾರಿ ದಂಡ.
ಖಾಕಿ ಡ್ರೆಸ್‌ನಲ್ಲಿ ಸ್ವಾಮೀಜಿ ಕಾಲಿಗೆ ಬಿದ್ದ 6 ಪೊಲೀಸರು ಟ್ರಾನ್ಸ್‌ಫರ್! ಆ ಸ್ವಾಮೀಜಿ ಯಾರು ಗೊತ್ತಾ?