ಶನಿವಾರ 30 ಜಿಲ್ಲೆಗಳಲ್ಲೂ ಅಬ್ಬರಿಸಿದ ಕೊರೋನಾ: ರಾಜ್ಯದಲ್ಲಿ 5 ಲಕ್ಷ ಗಡಿದಾಟಿದ ಸೋಂಕಿತರ ಸಂಖ್ಯೆ

By Suvarna NewsFirst Published Sep 19, 2020, 8:18 PM IST
Highlights

ಶನಿವಾರ ಕರ್ನಾಟಕದ 30 ಜಿಲ್ಲೆಗಳಲ್ಲೂ ಕೊರೋನಾ ಅಬ್ಬರಿಸಿದ್ದು, ಒಟ್ಟು ರಾಜ್ಯದಲ್ಲಿ ಸೊಂಕಿತರ ಸಂಖ್ಯೆ 5 ಲಕ್ಷ ಗಡಿದಾಟಿದೆ.ಆದರೂ ಚತರಿಕೆ ಪ್ರಮಾಣವೂ ಹೆಚ್ಚಳವಾಗಿದೆ.

ಬೆಂಗಳೂರು, (ಸೆ.19): ರಾಜ್ಯದಲ್ಲಿ ಇಂದು (ಶನಿವಾರ) 8,364 ಹೊಸ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 114 ಸೋಂಕಿತರು  ಮಹಾಮಾರಿಗೆ ಬಲಿಯಾಗಿದ್ದಾರೆ. ಇನ್ನು 10815 ಮಂದಿ ಆಸ್ಪತ್ರೆಯಿಂದ ಡಿಸ್ವಾರ್ಜ್ ಆಗಿದ್ದಾರೆ

ರಾಜ್ಯದ ಕೊರೋನಾ ಸೋಂಕಿತರ ಸಂಖ್ಯೆ 5,11,346ಕ್ಕೆ ಏರಿಕೆಯಾಗಿದ್ದು, 4,04,841 ಮಂದಿ ಈವರೆಗೂ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಚೇತರಿಕೆ ಪ್ರಮಾಣದಲ್ಲಿ ಏರಿಕೆಯಾಗಿದೆ.

ಕೊರೋನಾ ಹೋರಾಟ: ಮೊಝಂಬಿಕ್‌ಗೆ ಭಾರತದಿಂದ 13 ಬಗೆಯ ಔಷಧ ನೆರವು

ಒಟ್ಟು 7922 ಮಂದಿ ಮೃತಪಟ್ಟಿದ್ದು, 98,564 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 822 ಸೋಂಕಿತರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ  ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಜಿಲ್ಲಾವಾರು ಕೊರೋನಾ ಸಂಖ್ಯೆ

click me!