
ಪಡಿತರ ಚೀಟಿದಾರರಿಗೆ (Ration Card) ಇ-ಕೆವೈಸಿ (e-KYC) ಅಪ್ಡೇಟ್ ಮಾಡಲು ರೂಪಿಸಲಾಗಿರುವ 'ಅನ್ನ ಸೇವೆ' (Anna Seve) ಮೊಬೈಲ್ ಆ್ಯಪ್ ಸೇವೆಯನ್ನು ನಾಳೆಯಿಂದ (ಅಕ್ಟೋಬರ್ 14) ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಅಧಿಕೃತವಾಗಿ ವಿಸ್ತರಣೆ ಮಾಡಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ರಾಜ್ಯದಾದ್ಯಂತ ರೇಷನ್ ಕಾರ್ಡ್ ಇ-ಕೆವೈಸಿ (e-KYC) ಮಾಡಿಸಲು ಸರತಿ ಸಾಲಿನಲ್ಲಿ ನಿಲ್ಲುವ ಅಥವಾ ಕಚೇರಿಗಳಿಗೆ ಅಲೆಯುವ ತಾಪತ್ರಯಕ್ಕೆ ತೆರೆ ಎಳೆಯಲು ಅ.01ರಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು 'ಅನ್ನ ಸೇವೆ' ಎಂಬ ನೂತನ ಮೊಬೈಲ್ ಆ್ಯಪ್ ಅನ್ನು ಲೋಕಾರ್ಪಣೆ ಮಾಡಿತ್ತು. ಆದರೆ, ಈ ಅನ್ನ ಸೇವೆ ಅನ್ನು ಕೇವಲ 8 ಜಿಲ್ಲೆಗಳಿಗೆ ಮಾತ್ರ ಅನ್ವಯವಾಗುವಂತೆ ಪ್ರಾಯೋಗಿಕವಾಗಿ ಬಿಡುಗಡೆ ಮಾಡಲಾಗಿತ್ತು. 13 ದಿನಗಳ ಪ್ರಾಯೋಗಿಕ ಸೇವೆಯು ಯಶಸ್ವಿಯಾದ ಬೆನ್ನಲ್ಲಿಯೇ ನಾಳೆಯಿಂದ (ಅ.14ರಿಂದ) ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅನ್ವಯವಾಗುವಂತೆ ಆಪ್ ಸೇವೆಯನ್ನು ವಿಸ್ತರಣೆ ಮಾಡಲಾಗುತ್ತಿದೆ.
ಇನ್ನುಮುಂದೆ ರಾಜ್ಯದ ಪಡಿತರ ಚೀಟಿದಾರರು ರೇಷನ್ ಕಾರ್ಡ್ ಕೇಂದ್ರಕ್ಕೆ ಅಲೆದು, ಸರತಿ ಸಾಲಿನಲ್ಲಿ ನಿಂತುಕೊಳ್ಳದೇ ಮನೆಯಲ್ಲಿ ಕುಳಿತುಕೊಂಡು ಮೊಬೈಲ್‌ನಲ್ಲಿ ಸುಲಭವಾಗಿ, ಸರಳ ಪ್ರಕ್ರಿಯೆಯ ಮೂಲಕ ತಮ್ಮ ಇ-ಕೆವೈಸಿ ಪೂರ್ಣಗೊಳಿಸಬಹುದು. ಅನ್ನ ಸೇವೆ, ಆಧಾರ್‌ಫೇಸ್ ಆರ್‌ಡಿ (AadhaarFaceRD) ಹಾಗೂ ಸಿಎಸ್‌ಸಿ (CSC) ಆ್ಯಪ್‌ಗಳನ್ನು ಅಳವಡಿಸಿಕೊಂಡು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಬಹುದು. ಈ ಮೂಲಕ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಈ ಡಿಜಿಟಲ್ ಹೆಜ್ಜೆ ರಾಜ್ಯದ ಕೋಟ್ಯಂತರ ಪಡಿತರ ಚೀಟಿದಾರರಿಗೆ ದೊಡ್ಡ ಮಟ್ಟದ ಅನುಕೂಲ ಕಲ್ಪಿಸಲಿದೆ.
ಮೊದಲ ಹಂತದಲ್ಲಿ ಈ 'ಅನ್ನ ಸೇವೆ' ಆ್ಯಪ್ ಅನ್ನು ಪೈಲೆಟ್ ಪ್ರಾಜೆಕ್ಟ್ ಆಗಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಉತ್ತರ ಕನ್ನಡ (ಕಾರವಾರ), ಬಳ್ಳಾರಿ, ಬೀದರ್ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಪರಿಚಯಿಸಲಾಗಿತ್ತು. ಈ ಜಿಲ್ಲೆಗಳಲ್ಲಿ ಆಪ್ ಸೇವೆ ಯಶಸ್ವಿಯಾದ ಬೆನ್ನಲ್ಲಿಯೇ ರಾಜ್ಯಾದ್ಯಂತ ಸೇವೆಗೆ ಮುಕ್ತಗೊಳಿಸಲಾಗಿದೆ. ರಾಜ್ಯದಲ್ಲಿ ಪರಡಿತರ ಚೀಟಿಯನ್ನು ಹೊಂದಿರುವ ಹಾಗೂ ಇ-ಕೆವೈಸಿ ಅಪ್ಡೇಟ್ ಮಾಡಬೇಕಾದ ಫಲಾನುಭವಿಗಳಿಗೆ ಈ ಆ್ಯಪ್ ಹೆಚ್ಚು ಅನುಕೂಲವಾಗಲಿದೆ.
ANNA SEVA APP AVAILABLE ACROSS ALL DISTRICTS OF KARNATAKA FROM TOMORROW!
Ration cardholders can now complete their e-KYC through a simple and convenient process. Install the Anna Seva, AadhaarFace RD and CSC apps to avail of this facility.
Simple Process. Seamless Service. Citizen-Friendly Digital Solutions.
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಾಳೆಯಿಂದ ಅನ್ನ ಸೇವೆ ಆ್ಯಪ್ ಲಭ್ಯ!
ಪಡಿತರ ಚೀಟಿದಾರರು ಇನ್ನು ಸುಲಭವಾಗಿ, ಸರಳ ಪ್ರಕ್ರಿಯೆಯ ಮೂಲಕ ತಮ್ಮ ಇ-ಕೆವೈಸಿ ಪೂರ್ಣಗೊಳಿಸಬಹುದು. ಅನ್ನ ಸೇವೆ, ಆಧಾರ್‌ಫೇಸ್ ಆರ್‌ಡಿ ಹಾಗೂ ಸಿಎಸ್‌ಸಿ ಆ್ಯಪ್‌ಗಳನ್ನು ಅಳವಡಿಸಿಕೊಂಡು ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳಿ.
ಸರಳ ಪ್ರಕ್ರಿಯೆ, ಸುಗಮ ಸೇವೆ - ಜನಸ್ನೇಹಿ ಡಿಜಿಟಲ್ ಸೌಲಭ್ಯ!
#AnnaSeveApp #EKYC #Karnataka #RationCard @KarnatakaVarthe
— Rizwan Arshad (@ArshadRizwan) October 13, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ