
ಬೆಂಗಳೂರು: ನವದೆಹಲಿಯಲ್ಲಿ ಪ್ರತಿಪಕ್ಷಗಳು ಎಸ್‌ಐಆರ್ ವಿರುದ್ಧ ನಡೆಸಿದ ಬೃಹತ್ ಪ್ರತಿಭಟನಾ ಮೆರವಣಿಗೆಯ ವೇಳೆ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಹಿಡಿದು ತಳ್ಳಿದ್ದಾರೆ ಎನ್ನಲಾದ ಘಟನೆಗೆ ಸಂಬಂಧಿಸಿದಂತೆ ರಾಜ್ಯ ರಾಜಕಾರಣದಲ್ಲಿ ಚರ್ಚೆ ಹುಟ್ಟುಹಾಕಿದೆ. ಮಾತ್ರವಲ್ಲ ಸೋಷಿಯಲ್ ಮೀಡಿಯಾಲ್ಲಿ ಕೂಡ ಪರ ವಿರೋಧ ಚರ್ಚೆಗಳು ಆರಂಭವಾಗಿದೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಕಾಂಗ್ರೆಸ್ ಹೈಕಮಾಂಡ್‌ನ ಈ ನಡವಳಿಕೆಯನ್ನು ಕಟುವಾಗಿ ಖಂಡಿಸಿದ್ದು, ಇದು ಕೇವಲ ಡಿ.ಕೆ. ಶಿವಕುಮಾರ್ ಅವರಿಗೆ ನಡೆದ ಅವಮಾನವಲ್ಲ, ಬದಲಾಗಿ ಇಡೀ ಕರ್ನಾಟಕದ ಜನತೆಗೆ ಎಸಗಿದ ಭಾರಿ ಅಪಮಾನ, ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಕೊರಳು ಪಟ್ಟಿ ಹಿಡಿದು ರಾಹುಲ್ ಗಾಂಧಿ ತಳ್ಳಿದ್ದಾರೆ. ಇದು ಡಿಕೆ ಶಿವಕುಮಾರ್ ಗೆ ಅವಮಾನ ಅಲ್ಲ. ಇದು ರಾಜ್ಯದ ಜನರಿಗೆ ಮಾಡಿರುವ ಅಪಮಾನ. ಅವರನ್ನು ಈ ರೀತಿ ಹೀನಾಯವಾಗಿ ತಳ್ಳಿದ ನಡೆ ಸರಿಯಲ್ಲ. ಯಾವುದೇ ಪಕ್ಷದ ಹೈಕಮಾಂಡ್ ನಾಯಕರು, ಯಾವುದೇ ಮುಖ್ಯಮಂತ್ರಿಗಳಿಗೆ ಈ ರೀತಿ ಮಾಡಿಲ್ಲ. ಇತಿಹಾಸದಲ್ಲೇ ಮೊದಲ ಬಾರಿಗೆ ದೇಶದಲ್ಲೇ ಕರ್ನಾಟಕ ಸಿಎಂಗೆ ಈ ರೀತಿ ಮಾಡಿದ್ದಾರೆ. ಇದು ನಾವೆಲ್ಲರೂ ತಲೆ ತಗ್ಗಿಸುವಂತ ಘಟನೆ. ರಾಹುಲ್ ಗಾಂಧಿ ಯವರಿಗೆ ಗೌರವ ಇದ್ದರೆ ರಾಜ್ಯದ ಜನರ ಬಳಿ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಇಲ್ಲಿ ರಾಹುಲ್ ಗಾಂಧಿ ಪ್ರಚಾರಕ್ಕೆ ಜನರು ಬಿಡಬಾರದು.
ಡಿಕೆ ಶಿವಕುಮಾರ್ ಅವರನ್ನು ಕರೆಸಿಕೊಂಡಿದ್ದು ಯಾಕೆ? ಈ ರೀತಿ ಅವಮಾನ ಮಾಡಿದ್ದು ಯಾಕೆ? ಇದು ಕಾಂಗ್ರೆಸ್ ನ ಸಂಸ್ಕೃತಿಯಾ ಗುಲಾಮಗಿರಿಗಿಂತಲೂ ಬಹಳ ಕೆಟ್ಟದಾಗಿರುವ ಗುಲಾಮಗಿರಿ. ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕವನ್ನು ಮತ್ತು ಇಲ್ಲಿನ ನಾಯಕರನ್ನು ಕೇವಲ 'ಹಣ ಕೊಡುವ ಎಟಿಎಂ ಮಿಷನ್' ರೀತಿಯಲ್ಲಿ ಬಳಸಿಕೊಳ್ಳುತ್ತಿದೆ. ಯಾವಾಗಲೂ ಗಾಂಧಿ ಕುಟುಂಬ ಅಂತಾ ಆರಾಧಿಸುತ್ತಿದ್ದ ಡಿಕೆ ಶಿವಕುಮಾರ್ ಅವರನ್ನು ಅದೇ ಗಾಂಧಿ ಕುಟುಂಬ ಕತ್ತು ಹಿಡಿದು ಹೊರಗೆ ಹಾಕಿದೆ. ಡಿಕೆ ಶಿವಕುಮಾರ್ ಗೆ ಮುಖಭಂಗ ಆಗಿದೆ. ರಾಜ್ಯದ ಜನರಿಗೂ ಅಪಮಾನ ಆಗಿದೆ ಎಂದು ಕಿಡಿಕಾರಿದ್ದಾರೆ.
ಇನ್ನು ಸಿಎಂ ಡಿಕೆಶಿ ಅವರನ್ನು ನೂಕುನುಗ್ಗಲಿನಲ್ಲಿ ತಳ್ಳಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಉಪಮುಖ್ಯಂತ್ರಿ ಜಿ. ಪರಮೇಶ್ವರ ಅವರು ಪ್ರತಿಭಟನೆಗಳ ಸಂಧರ್ಭದಲ್ಲಿ ಯಾರ ಕಂಟ್ರೋಲ್ ನಲ್ಲಿ ಇರುತ್ತೆ, ಆ ಪರಿಸ್ಥಿತಿ ಹಾಗೆ ಇರುತ್ತೆ. ರಾಹುಲ್ ಗಾಂಧಿ ಅವರ ಸೆಕ್ಯೂರಿಟಿ ಗಳ ಕೆಲಸ ಅದು. ಸಿಎಂ ಹತ್ತಿರ ಹೋದಾಗ ಅವರ ಹತ್ತಿರ ಹೋಗಬಾರದು ಅಂತ ಸೆಕ್ಯೂರಿಟಿ ಗಳು ಹಾಗೆ ಮಾಡಿರಬಹುದು. ಯಾವ ಸಿಎಂನೂ ಸೆಕ್ಯೂರಿಟಿಗಳು ನೋಡಲ್ಲ, ಅವರ ಪ್ರೋಟೋಕಾಲ್ ಪ್ರಕಾರ ಕೆಲಸ ಮಾಡಿದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ