
ಬೆಂಗಳೂರು (ಜ.8): ಬೆಂಗಳೂರಿನಲ್ಲಿ ಕನ್ನಡ ನಾಮಫಲಕ ಅಳವಡಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ ವೇಳೆ ಪೊಲೀಸರರು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ 29 ಕಾರ್ಯಕರ್ತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದ ಪ್ರಕರಣದಲ್ಲಿ ಇಂದು ನಾರಾಯಣಗೌಡ ಸೇರಿ ಕಾರ್ಯಕರ್ತರೆಲ್ಲರೂ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ.
ಸೆಂಬರ್ 27ರಂದು (ಬುಧವಾರ) ಪ್ರತಿಭಟನೆ ವೇಳೆ ಬಂಧಿಸಿದ್ದ ಪೊಲೀಸರು. ಡಿ. 28ರಿಂದ ಪರಪ್ಪನಗ್ರಹಾರ ಜೈಲಲ್ಲಿದ್ದ ಕರವೇ ನಾರಾಯಣ ಗೌಡ. ನಾರಾಯಣ ಗೌಡ ಸೇರಿ 29ಜನರಿಗೆ ಶನಿವಾರವೇ ಜಾಮೀನು ಮಂಜೂರಾಗಿತ್ತು. ಬಳಿಕ ಜಾಮಿನು ಪ್ರತಿ ಶನಿವಾರ ಸಂಜೆ 7ಗಂಟೆಯ ನಂತರ ಜೈಲಾಧೀಕಾರಿಗಳಿಗೆ ತಲುಪಿತ್ತು. ನಿನ್ನೆ ಭಾನುವಾರ ಆಗಿದ್ದರಿಂದ ಜಾಮೀನು ಪ್ರತಿ ಪರೀಶಿಲನೆ ಸಾಧ್ಯವಾಗಿರಲಿಲ್ಲ. ಇಂದು ಇಂದು ನಾರಾಯಣಗೌಡ ಸೇರಿದಂತೆ 29ಜನರ ಜಾಮೀನು ಅರ್ಜಿ ಪರೀಶಿಲಿಸಲಿರುವ ಅಧಿಕಾರಿಗಳು. ಪರೀಶಿಲನೆ ನಂತರ ಜೈಲಿನಿಂದ ಬಿಡುಗಡೆ ಮಾಡಲಿರುವ ಪೋಲಿಸರು.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ್ರಿಗೆ ಇನ್ನೂ 4 ದಿನ ಜೈಲೇ ಗತಿ: ಇಲ್ಲಿದೆ ಅಸಲಿ ಕಾರಣ!
ಇಂದು ಕರವೇ ನಾರಾಯಣ ಗೌಡ ಬಿಡುಗಡೆ ಸಾಧ್ಯತೆ ಹಿನ್ನಲೆ ಪರಪ್ಪನ ಅಗ್ರಹಾರ ಬಳಿ 144 ಸೆಕ್ಷನ್ ಜಾರಿ ಮಾಡಲಿರುವ ಪೊಲೀಸರು. ನಾರಾಯಣ ಗೌಡ ಬಿಡುಗಡೆ ಹಿನ್ನಲೆ ಹೆಚ್ಚು ಬೆಂಬಲಿಗರು ಸೇರುವ ಸಾಧ್ಯತೆಯಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ