ಜೆಟ್ ಲ್ಯಾಗ್ ಪಬ್ ನಲ್ಲಿ ಬೆಳಗಿನ ಜಾವದವರೆಗೂ ಪಾರ್ಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಟಿಯಲ್ಲಿದ್ದ ಸ್ಟಾರ್ ಗಳಿಗೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ.
ಬೆಂಗಳೂರು (ಜ.8): ಇತ್ತೀಚೆಗೆ ಬಿಡುಗಡೆಯಾದ ಕನ್ನಡದ ಸ್ಟಾರ್ ನಟರೊಬ್ಬರ ಸಿನೆಮಾವೊಂದು ಭಾರೀ ಯಶಸ್ಸು ಕಂಡ ಹಿನ್ನೆಲೆ ರಾಜಾಜಿನಗರದ ಜಟ್ಲಾಗ್ ರೆಸ್ಟೋಬಾರ್ ನಲ್ಲಿ ಭರ್ಜರಿಯಾಗಿ ಸಕ್ಸಸ್ ಪಾರ್ಟಿ ನಡೆಸಲಾಗಿತ್ತು. ನಿಯಮ ಉಲ್ಲಂಘಿಸಿ ಬೆಳಗ್ಗಿನವರೆಗೂ ಸ್ಯಾಂಡಲ್‌ವುಡ್‌ನ ಹಲವು ನಟ ನಟಿಯರ ಹೈ ಎಂಎಡ್ ಪಾರ್ಟಿ ಮಾಡಿದ್ದು ಜಟ್ಲಾಗ್ ರೆಸ್ಟೋಬಾರ್ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಾಗಿತ್ತು.
ಇದೀಗ ಜೆಟ್ ಲ್ಯಾಗ್ ಪಬ್ ನಲ್ಲಿ ಬೆಳಗಿನ ಜಾವದವರೆಗೂ ಪಾರ್ಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಟಿಯಲ್ಲಿದ್ದ ಸ್ಟಾರ್ ಗಳಿಗೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಅಂದಿನ ಲೇಟ್ ನೈಟ್ ಪಾರ್ಟಿಯಲ್ಲಿದ್ದವರು ಯಾರ್ಯಾರು ಎಂಬ ಬಗ್ಗೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ. ಹೀಗಾಗಿ ಪಾರ್ಟಿಯಲ್ಲಿದ್ದ ಸ್ಟಾರ್ ಗಳಿಗೆ ವಿಚಾರಣೆಯ ಟೆನ್ಶನ್ ಆರಂಭವಾಗಿದೆ.
ಸಿನೆಮಾ ಗೆದ್ದ ಖುಷಿಗೆ ಬೆಳಗ್ಗಿನವರೆಗೂ ಸ್ಯಾಂಡಲ್‌ವುಡ್ ನಟ-ನಟಿಯರ ಪಾರ್ಟಿ, ರೆಸ್ಟೋಬಾರ್ ವಿರುದ್ಧ ಎಫ್ಐಆರ್
ಸುಬ್ರಮಣ್ಯನಗರ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದು, ಈಗಾಗಲೇ ಕ್ಲೋಸಿಂಗ್ ಟೈಮ್ ಮುಗಿದರೂ ಅಲ್ಲೇ ಪಾರ್ಟಿಗೆ ಅವಕಾಶ ನೀಡಿದ ಹಿನ್ನೆಲೆ ಜಟ್ಲಾಗ್ ರೆಸ್ಟೋಬಾರ್ ಮಾಲೀಕರಾದ ಶಶಿರೇಖಾ ಮತ್ತು ಮ್ಯಾನೇಜರ್ ಪ್ರಶಾಂತ್ ವಿರುದ್ದ ಎಫ್ಐಆರ್ ದಾಖಲು ಮಾಡಲಾಗಿದೆ.
ಅಬಕಾರಿ ಕಾಯಿದೆ ಷರತ್ತುಗಳ ಪ್ರಕಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 1 ಗಂಟೆಯವರೆಗೆ ಮಾತ್ರ ರೆಸ್ಟೋಬಾರ್ ತೆರೆಯಲು ಅವಕಾಶವಿದೆ. ಆದರೆ ಜಟ್ಲಾಗ್ ರೆಸ್ಟೋಬಾರ್ ಈ ನಿಮಯಮ ಉಲ್ಲಂಘಿಸಿ ಬೆಳಗಿನ ಜಾವ 3.30ರವರೆಗೂ ಪಾರ್ಟಿ ಮಾಡಲು ಸೆಲೆಬ್ರಿಟಿಗಳಿಗೆ ಅವಕಾಶ ಕೊಟ್ಟಿತ್ತು.
ರೆಸ್ಟೋಬಾರ್ ಬೆಳಗ್ಗಿನ ಜಾವ 3 ಗಂಟೆಯಾದ್ರೂ ತೆಗೆದೇ ಇರುವ ಬಗ್ಗೆ ಸ್ಥಳೀಯರು ಸುಬ್ರಹ್ಮಣ್ಯ ನಗರ ಠಾಣೆಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಜಟ್ಲಾಗ್ ರೆಸ್ಟೋಬಾರ್ ಮೇಲೆ ದಾಳಿ ನಡೆಸಿದ್ದ ಪೊಲೀಸರು ಕೂಡಲೇ ಬಾರ್ ಕ್ಲೋಸ್ ಮಾಡಿಸಿ 3.30ರ ಸುಮಾರಿಗೆ ಜಟ್ಲಾಗ್ ನಲ್ಲಿ ಪಾರ್ಟಿ ಮಾಡ್ತಿದ್ದ ಸೆಲೆಬ್ರಿಟಿಗಳನ್ನ ಮನೆಗೆ ಕಳುಹಿಸಿದ್ದರು.