2018ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

By Web Desk  |  First Published Nov 28, 2018, 7:30 PM IST

ಕನ್ನಡ ಮತ್ತು ಸಂಸ್ಕೃತಿ ಇಲಾಖೆ 63 ಸಾಧಕರ ಪಟ್ಟಿಯನ್ನು ಪ್ರಕಟಿಸಿದ್ದು, ನಾಳೆ  (ನ.29) ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.63 ಸಾಧಕರನ್ನ ಆಯ್ಕೆ ಮಾಡಲಾಗಿದ್ದು, ಅವರ ಹೆಸರು ಇಂತಿವೆ.


ಬೆಂಗಳೂರು, [ನ.28] 2018ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ.

ಇಂದು [ಬುಧವಾರ] ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂದು [ಬುಧವಾರ] 63 ಸಾಧಕರ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದೆ.

Latest Videos

ಈ ಹಿಂದೆಯೇ ಆಯ್ಕೆ ಪ್ರಕ್ರಿಯೆಯನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪೂರ್ಣಗೊಳಿಸಿತ್ತು. ಆದರೆ ರಾಜ್ಯದಲ್ಲಿ ಉಪ ಚುನಾವಣೆ ನೀತಿ ಸಂಹಿತೆ ಕಾರಣವೊಡ್ಡಿ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವನ್ನ ಮುಂದೂಡಿತ್ತು. 

ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 63 ಸಾಧಕರ ಪಟ್ಟಿಯನ್ನು ಪ್ರಕಟಿಸಿದ್ದು, ನಾಳೆ  (ನ.29) ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಪ್ರಶಸ್ತಿ ಪಡೆದವರ ಪಟ್ಟಿ
ಸಾಹಿತ್ಯ ಕ್ಷೇತ್ರ: ಎಂ.ಎಸ್.ಪ್ರಭಾಕರ್, ಹಸನ್ ನಯೀಂ ಸುರಕೋಡ್, ಚ.ಸರ್ವಮಂಗಳ, ಚಂದ್ರಶೇಖರ ತಾಳ್ಯ
ರಂಗಭೂಮಿ ಕ್ಷೇತ್ರ: ಎಸ್.ಎನ್.ರಂಗಸ್ವಾಮಿ,, ಪುಟ್ಟಸ್ವಾಮಿ, ಪಂಪಣ್ಣ ಕೋಗಳಿ
ಸಂಗೀತಾ ಕ್ಷೇತ್ರ:  ಅಣ್ಣು ದೇವಾಡಿಗ 
ನೃತ್ಯ ಕ್ಷೇತ್ರ: ಎಂ.ಆರ್, ಕೃಷ್ಣಮೂರ್ತಿ 
ಜಾನಪದ ಕ್ಷೇತ್ರ: ಗುರುವ ಕೊರಗ, ಗಂಗಹುಚ್ಚಮ್ಮ, ಚನ್ನಮಲ್ಲೇಗೌಡ, ಶರಣಪ್ಪ ಬೂತೇರ, ಶಂಕ್ರಪ್ಪಾ ಮಹಾದೇವಪ್ಪಾ, ಬಸವರಾಜ ಅಲಗೂಡ, ಚೂಡಾಮಣಿ ರಾಮಚಂದ್ರ
ಶಿಲ್ಪಕಲೆ: ಯಮನಪ್ಪ ಚಿತ್ರಗಾರ, ಬಸಣ್ಣ ಕಾಳಪ್ಪ ಕಂಚಗಾರ
ಚಿತ್ರಕಲೆ: ಬಸವರಾಜ ರೇವಣ್ಣಸಿದ್ದಪ್ಪ ಉಪ್ಪಿನ
ಕ್ರೀಡೆ: ಕೆನೆತ್ ಪೊವೆಲ್, ವಿನಯ ವಿ.ಎಸ್, ಚೇತನ ಆರ್.
ಯಕ್ಷಗಾನ: ಹಿರಿಯಡ್ಕ ಗೋಪಾಲ ರಾವ್, ಸೀತಾರಾಮ ಕುಮಾರ ಕಟೀಲು.
ಬಯಲಾಟ: ಯಲ್ಲವ್ವ ದೊಡ್ಡಪ್ಪನವರ, ಭೀಮರಾಯ ಜೋರಾಗಿ.
ಚಲನಚಿತ್ರ: ಭಾರ್ಗವ, ಜೈಜಗದೀಶ್, ರಾಜನ್, ದತ್ತುರಾಜ್
ಶಿಕ್ಷಣ: ಗೀತಾ ರಾಮಾನುಜಂ, ಎ.ವಿ.ಎಸ್. ಮೂರ್ತಿ, ಡಾ. ಕೆ.ಪಿ. ಗೋಪಾಲಕೃಷ್ಣ, ಶಿವಾನಂದ ಕೌಜಲಗಿ.
ಎಂಜಿನಿಯರಿಂಗ್: ಪ್ರೊ.ಸಿ.ಇ.ಜಿ. ಜಸ್ಟೋ.
ಸಂಕೀರ್ಣ: ಆರ್.ಎಸ್.ರಾಜಾರಾಂ, ಮೇಜರ್ ಪ್ರದೀಪ್ ಆರ್ಯ, ಸಿ.ಕೆ.ಜೋರಾಪುರ, ನರಸಿಂಹಯ್ಯ, ಡಿ.ಸುರೇಂದ್ರಕುಮಾರ್, ಶಾಂತಪ್ಪನವರ್.ಪಿ.ಬಿ. , ನಮಶಿವಾಯಂ ರೇಗುರಾಜ್, ಪಿ. ರಾಮದಾಸ್, ಎಂ.ಜೆ. ಬ್ರಹ್ಮಯ್ಯ.
ಪತ್ರಿಕೋದ್ಯಮ: ಜಿ.ಎಸ್. ರಂಗನಾಥರಾವ್, ಬಸವರಾಜಸ್ವಾಮಿ, ಅಮ್ಮೆಂಬಳ ಆನಂದ.
ಸಹಕಾರ: ಸಿ. ರಾಮು.
ಸಮಾಜ ಸೇವೆ: ಆನಂದ್, ಸಿ, ಕುಂದರ್, ರಾಚಪ್ಪ ಹಡಪದ, ಕೃಷ್ಣಕುಮಾರ ಪೂಂಜ, ಮಾರ್ಗರೇಟ್ ಆಳ್ವ.
ಕೃಷಿ: ಮಹಾದೇವಿ ಅಣ್ಣಾರಾವ ವಣದೆ, ಮೂಕಪ್ಪ ಪೂಜಾರ್
ಪರಿಸರ: ಕಲ್ಮನೆ ಕಾಮೇಗೌಡ
ಸಂಘ-ಸಂಸ್ಥೆ: ರಂಗದೊರೆ ಸ್ಮಾರಕ ಆಸ್ಪತ್ರೆ
ವೈದ್ಯಕೀಯ: ಡಾ. ನಾಡಗೌಡ ಜೆ.ವಿ, ಡಾ.ಸೀತಾರಮ ಭಟ್, ಪಿ. ಮೋಹನ್ ರಾವ್, ಡಾ. ಎಂ. ಗೋಪಾಲ್.
ನ್ಯಾಯಾಂಗ: ಎಚ್.ಎಲ್ ದತ್ತು
ಹೊರನಾಡು: ಡಾ. ಎ.ಎ. ಶೆಟ್ಟಿ
ಸ್ವಾತಂತ್ರ್ಯ ಹೋರಾಟಗಾರರು:  ಬಸವರಾಜ ಬಿಸರಳ್ಳಿ.

click me!