Latest Videos

ರಾಹುಲ್‌ ಗಾಂಧಿ ವಿಡಿಯೋ ಮಾಡಿದ್ದ ಯೂಟ್ಯೂಬರ್ ಬಂಧನಕ್ಕೆ ಯುಪಿಗೆ ತೆರಳಿ ಪೇಚಿಗೆ ಸಿಲುಕಿದ ಕರ್ನಾಟಕ‌ ಪೊಲೀಸ್!

By Gowthami KFirst Published Jun 20, 2024, 7:19 PM IST
Highlights

ಉತ್ತರ ಪ್ರದೇಶದ ನೋಯ್ಡಾಗೆ ತೆರಳಿ ಯೂಟ್ಯೂಬರ್ ಅಜಿತ್ ಭಾರತಿ ಬಂಧನಕ್ಕೆ ಮುಂದಾಗಿದ್ದ ಬೆಂಗಳೂರು ಪೊಲೀಸರು ಪೇಚಿಗೆ ಸಿಲುಕಿದ ಘಟನೆ ನಡೆದಿದೆ.

ಬೆಂಗಳೂರು (ಜೂ.20): ಉತ್ತರ ಪ್ರದೇಶದ ನೋಯ್ಡಾಗೆ ತೆರಳಿ ಯೂಟ್ಯೂಬರ್ ಅಜಿತ್ ಭಾರತಿ ಬಂಧನಕ್ಕೆ ಮುಂದಾಗಿದ್ದ ಬೆಂಗಳೂರು ಪೊಲೀಸರು ಪೇಚಿಗೆ ಸಿಲುಕಿದ ಘಟನೆ ನಡೆದಿದೆ.

ರಾಹುಲ್‌ ಗಾಂಧಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ವಿಡಿಯೋ ಹರಿಬಿಟ್ಟ ಆರೋಪದ ಹಿನ್ನೆಲೆಯಲ್ಲಿ ಯೂಟ್ಯೂಬರ್ ಅಜಿತ್ ಭಾರತಿ ಬಂಧನಕ್ಕೆ ಕರ್ನಾಟಕ ಪೊಲೀಸರು ತೆರಳಿದ್ದ‌ರು.

ಷರತ್ತು ಬದ್ಧ ಕುದುರೆ ರೇಸ್‌ಗೆ ರಾಜ್ಯ ಹೈಕೋರ್ಟ್‌ ಮಧ್ಯಂತರ ಒಪ್ಪಿಗೆ, 3 ತಿಂಗಳ ಬಳಿಕ ರೇಸ್‌ ಕೋರ್ಸ್ ಓಪನ್

ರಾಮ ಮಂದಿರದ ಜಾಗದಲ್ಲಿ ಬಾಬರಿ ಮಸೀದಿ ಮರು ನಿರ್ಮಾಣ ಮಾಡಿದ್ದಾರೆಂದು  ರಾಹುಲ್‌ ಗಾಂಧಿ ಹೇಳಿದ್ದಾರೆಂದು ಅಜಿತ್‌ ಭಾರತಿ ವಿವಾದಾತ್ಮಕ ವಿಡಿಯೋ‌ ಹರಿಬಿಟ್ಟಿದ್ದರು. ಅಜಿತ್ ಭಾರತಿ ವಿರುದ್ಧ ಕೆಪಿಸಿಸಿ ಕಾನೂನು ಘಟಕದ ಕಾರ್ಯದರ್ಶಿ ಹಾಗೂ ವಕೀಲ ಬಿ.ಕೆ.ಬೋಪಣ್ಣ ದೂರು ನೀಡಿದ್ದರು.

ದೂರು ಆಧರಿಸಿ ಅಜಿತ್‌ ಭಾರತಿ ವಿರುದ್ಧ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ಸ್ಥಳೀಯ ಠಾಣೆಗೆ ಮಾಹಿತಿ ನೀಡದೆ ಏಕಾಏಕಿ ಅಜಿತ್ ಭಾರತಿ ಮನೆಗೆ ಕರ್ನಾಟಕ ಪೊಲೀಸರು ತೆರಳಿದ್ದರು. ಯೂಟ್ಯೂಬರ್‌ ಮನೆ ಮುಂದೆ ತೆರಳಿ ನೋಟಿಸ್‌ ನೀಡಿದ್ದಾರೆ. ಆ ನಂತರ ಸ್ಥಳೀಯ ಪೊಲೀಸರ ಜತೆ ಮಾತುಕತೆ ನಡೆಸಿ ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.

Breaking: ಪವಿತ್ರಾ ಗೌಡ ಸೇರಿ 10 ಮಂದಿ ಜೈಲಿಗೆ, ದರ್ಶನ್ ಮೂರನೇ ಬಾರಿ ಪೊಲೀಸ್ ಕಸ್ಟಡಿಗೆ!

ಹೀಗಾಗಿ ಮೊದಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ರಾಜ್ಯ ಪೊಲೀಸರು ಎಡವಟ್ಟು ಮಾಡಿಕೊಂಡರು. ಅಲ್ಲದೇ ಪೊಲೀಸರು ಸಮವಸ್ತ್ರದ ಬದಲಾಗಿ ಸಾಮಾನ್ಯ ಉಡುಪುಗಳಲ್ಲಿ ತೆರಳಿದ್ದು ಕೂಡ ಹಲವು ಗೊಂದಲಕ್ಕೆ ಕಾರಣವಾಗಿದೆ.

ಇದೇ ಕಾರಣಕ್ಕೆ ಸ್ಥಳೀಯರ ಜತೆ ವಾಗ್ವಾದ ಉಂಟಾಗಿದ್ದು ಯುಪಿ ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆ. ಘಟನೆ ಬಗ್ಗೆ ಯೂಟ್ಯೂಬರ್‌ ಅಜಿತ್‌ ಭಾರತಿ ಟ್ವೀಟ್‌ ಮಾಡಿ ಘಟನೆ ಬಗ್ಗೆ ವಿವರಣೆ ನೀಡಿದ್ದು, 2 ಗಂಟೆ ಸುಮಾರಿಗೆ ಕರ್ನಾಟಕ ಪೊಲೀಸ್ ಎಂದು ಕರೆಸಿಕೊಳ್ಳುವ ಮೂವರು ಯುವಕರು ನನ್ನ ಮನೆಯ ಕೆಳಗೆ ಬಂದಿದ್ದರು. ನೋಟಿಸ್ ನೀಡಲು ಬಂದಿದ್ದೇವೆ ಎಂದು ತಿಳಿಸಿದರು. ನಾನು ನೋಯ್ಡಾ ಪೊಲೀಸರಿಗೆ ವರದಿ ಮಾಡಲಾಗಿದೆಯೇ?  ಸ್ಥಳೀಯ ಪೊಲೀಸ್ ಠಾಣೆ ಯಾವುದು? ಎಂದು ಪ್ರಶ್ನಿಸಿದೆ. ಆ ಬಳಿಕ ನಾನು ತಕ್ಷಣ ಸ್ಥಳೀಯ ಪೊಲೀಸ್ ಅಧಿಕಾರಿಗೆ ಮಾಹಿತಿ ನೀಡಿದ್ದೇನೆ. ಶೀಘ್ರದಲ್ಲೇ ಉತ್ತರ ಪ್ರದೇಶ ಪೊಲೀಸರು ಬಂದರು

ಆ ಬಳಿಕ ಬೆಂಗಳೂರಿನಿಂದ ಬಂದಿದ್ದ ಯುವಕರನ್ನು ಮಾತನಾಡಿಸಿ ನಂತರ ಕರೆದುಕೊಂಡು ಹೋದರು. ಈ ಬಗ್ಗೆ ತ್ವರಿತವಾಗಿ ಸ್ಪಂದಿಸಿದ್ದಕ್ಕಾಗಿ ಸ್ಥಳೀಯ ಪೊಲೀಸರಿಗೆ ಅನೇಕ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ. ಬೆಂಗಳೂರು ಪೊಲೀಸರ ಈ ನಡೆ ಬಗ್ಗೆ ನೆಟ್ಟಿಗರಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ನೆಟ್ಟಿಗರು ಯೂಟ್ಯೂಬರ್‌ ಬೆಂಬಲಿಸಿ, ಕರ್ನಾಟಕ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

click me!