Hogenakkal Project: ತಮಿಳುನಾಡಿನ ಹೊಗೇನಕಲ್‌ ಯೋಜನೆಗೆ ರಾಜ್ಯ ವಿರೋಧ: ಸಚಿ ಕಾರಜೋಳ

By Kannadaprabha NewsFirst Published Jan 22, 2022, 5:45 AM IST
Highlights

*   ಯೋಜನೆ ತಡೆಗೆ ಕಾನೂನು ಕ್ರಮ
*   ಏಕಪಕ್ಷೀಯವಾಗಿ ಯೋಜನೆ ಅಸಾಧ್ಯ
*   ಈ ಯೋಜನೆಗೆ ಎಲ್ಲಾ ಕಾನೂನಾತ್ಮಕ ಕ್ರಮಗಳ ಮೂಲಕ ನಮ್ಮ ಸರ್ಕಾರದಿಂದ ಆಕ್ಷೇಪ
 

ಬೆಂಗಳೂರು(ಜ.22):  ತಮಿಳುನಾಡು ಸರ್ಕಾರವು(Government of Tamil Nadu) ಹೊಗೇನಕಲ್‌(Hogenakkal) 2ನೇ ಹಂತದ ಯೋಜನೆಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸುವುದಾಗಿ ಘೋಷಿಸಿರುವುದನ್ನು ರಾಜ್ಯ ಸರ್ಕಾರ ವಿರೋಧಿಸುತ್ತದೆ. ಈ ಯೋಜನೆ ತಡೆಗೆ ಅಗತ್ಯ ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ(Govind Karjol) ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡು ಮುಖ್ಯಮಂತ್ರಿ ಅವರು ಹೊಗೇನಕಲ್‌ 2ನೇ ಹಂತದ ಯೋಜನೆಗೆ 4,600 ಕೋಟಿ ರು. ವೆಚ್ಚದ ಡಿಪಿಆರ್‌(DPR) ಸಿದ್ಧಪಡಿಸುವುದಾಗಿ ಘೋಷಿಸಿರುವುದು ಮಾಧ್ಯಮಗಳ ವರದಿ ಮೂಲಕ ಗಮನಕ್ಕೆ ಬಂದಿದೆ. ಕಾವೇರಿ(Kaveri River) ಕಣಿವೆಯಲ್ಲಿ ನ್ಯಾಯಾಧಿಕರಣ ಹಾಗೂ ಸರ್ವೋಚ್ಚ ನ್ಯಾಯಾಲಯದ(Supreme Court) ತೀರ್ಪುಗಳಲ್ಲಿನ ನೀರಿನ ಹಂಚಿಕೆಗಳ ಅನ್ವಯವಾಗಿ ತಮಿಳುನಾಡು ರಾಜ್ಯವು ಯೋಜನೆಗಳನ್ನು ಕೈಗೊಳ್ಳಬೇಕಾಗುತ್ತದೆ. ಆದರೆ, ಅವರು ಪ್ರಸ್ತಾಪಿಸಿರುವ ಯೋಜನೆಯ ವಿವರಗಳನ್ನು ನ್ಯಾಯಾಧಿಕರಣ ಅಥವಾ ಸರ್ವೋಚ್ಚ ನ್ಯಾಯಾಲಯದ ಮುಂದೆ ಪ್ರಸ್ತುತಪಡಿಸಿಲ್ಲ. ತಮಿಳುನಾಡಿನ ಇಂತಹ ಯಾವುದೇ ಯೋಜನೆಯನ್ನು ಕರ್ನಾಟಕ ಸರ್ಕಾರ(Government of Karnataka) ವಿರೋಧಿಸುತ್ತದೆ ಎಂದರು.

Irrigation Politics: ಎಂ.ಬಿ. ಪಾಟೀಲ್‌ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ

ಅಲ್ಲದೆ, ಈ ಯೋಜನೆಗೆ ಎಲ್ಲಾ ಕಾನೂನಾತ್ಮಕ ಕ್ರಮಗಳ ಮೂಲಕ ನಮ್ಮ ಸರ್ಕಾರ ಆಕ್ಷೇಪಿಸಲಿದೆ. ಈ ಯೋಜನೆ ಎರಡು ರಾಜ್ಯಗಳ ಭೌಗೋಳಿಕ ವ್ಯಾಪ್ತಿಯಲ್ಲಿ ಇರುವುದರಿಂದ ಕೈಗೆತ್ತಿಕೊಳ್ಳುವ ಮುನ್ನ ವಿವಿಧ ಆಯಾಮಗಳಲ್ಲಿ ಹಾಗೂ ಕಾನೂನಾತ್ಮಕ ಪರಿಶೀಲನೆಗೆ ಒಳಪಡಬೇಕಾಗುತ್ತದೆ. ತಮಿಳುನಾಡು ಏಕಪಕ್ಷೀಯವಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಹೊಗೇನಕಲ್‌ ಪ್ರದೇಶವು ಕರ್ನಾಟಕ(Karnataka) ಮತ್ತು ತಮಿಳುನಾಡಿನ(Tamil Nadu) ಜಂಟಿ ಗಡಿ ಪ್ರದೇಶದಲ್ಲಿ 64 ಕಿ.ಮೀ. ಉದ್ದದ ಭೂ ಪ್ರದೇಶದ ವ್ಯಾಪ್ತಿಯನ್ನು ಹೊಂದಿದೆ. ಕಾವೇರಿ ನ್ಯಾಯಾಧಿಕರಣದ ಐತೀರ್ಪಿನ ಕಲಂ 13ರನ್ವಯ ಈ ಯೋಜನೆಯನ್ನು ರಾಷ್ಟ್ರೀಯ ಜಲ ವಿದ್ಯುತ್‌ ನಿಗಮದ ಮೂಲಕ ಕೈಗೆತ್ತಿಕೊಳ್ಳಬೇಕಾಗುವುದು. ಅಲ್ಲದೆ, ಕರ್ನಾಟಕ ಮತ್ತು ತಮಿಳುನಾಡಿನ ಹೊಗೇನಕಲ್‌ ಜಂಟಿ ಗಡಿ ರೇಖೆಯನ್ನು ಸರ್ವೆ ಆಫ್‌ ಇಂಡಿಯಾ(Survey of India) ಮೂಲಕ ಅಂತಿಮಗೊಳಿಸಲಾಗಿಲ್ಲ ಎಂದು ಕಾರಜೋಳ ತಿಳಿಸಿದರು.

ಏಕಪಕ್ಷೀಯವಾಗಿ ಯೋಜನೆ ಅಸಾಧ್ಯ

ತಮಿಳುನಾಡು ಏಕಪಕ್ಷೀಯವಾಗಿ ಈ ಯೋಜನೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಹೊಗೇನಕಲ್‌ ಪ್ರದೇಶವು ಕರ್ನಾಟಕ ಮತ್ತು ತಮಿಳುನಾಡಿನ ಜಂಟಿ ಗಡಿ ಪ್ರದೇಶದಲ್ಲಿ 64 ಕಿ.ಮೀ. ಉದ್ದದ ಭೂ ಪ್ರದೇಶದ ವ್ಯಾಪ್ತಿಯನ್ನು ಹೊಂದಿದೆ. ಹೀಗಾಗಿ ಈ ಯೋಜನೆಯನ್ನು ಕಾನೂನಾತ್ಮಕವಾಗಿ ವಿರೋಧಿಸುತ್ತೇವೆ ಅಂತ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದ್ದಾರೆ.  

ಕ್ಯಾತೆ ತೆಗೆದ ತಮಿಳ್ನಾಡು ಸರ್ಕಾರದಿಂದ ಕಾವೇರಿ ಹೊಸ ಯೋಜನೆ

ಬೆಂಗಳೂರು(Bengaluru) ಸೇರಿದಂತೆ ಇತರ ಜಿಲ್ಲೆಗಳಿಗೆ ಕುಡಿಯುವ ನೀರು(Drinking Water) ಪೂರೈಸುವ ಕರ್ನಾಟಕದ ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆಗೆ(Mekedatu Project) ಅಡ್ಡಿಪಡಿಸುತ್ತಿರುವ ತಮಿಳುನಾಡು ಸರ್ಕಾರ, ಈಗ ಹೊಗೇನಕಲ್‌ ಕುಡಿಯುವ ನೀರಿನ ಯೋಜನೆಯ 2ನೇ ಹಂತದ ಅನುಷ್ಠಾನಕ್ಕೆ ನಿರ್ಧರಿಸಿದೆ.

ನನ್ನ ಬಗ್ಗೆ ಮಾತನಾಡೋವಾಗ ನಾಲಿಗೆ ಮೇಲೆ ಹಿಡಿತ ಇರಲಿ: ಪಾಟೀಲ್‌ ವಿರುದ್ಧ ಕಾರಜೋಳ ಗರಂ

ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ 4600 ಕೋಟಿ ರು. ವೆಚ್ಚದ ಯೋಜನೆ ಇದಾಗಲಿದೆ. ಇದಕ್ಕೆಂದು ರಾಜ್ಯ ಸರ್ಕಾರ ವಿಸ್ತೃತ ಯೋಜನೆ ವರದಿ (DPR) ಸಿದ್ಧಪಡಿಲಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌(MK Stalin) ಹೇಳಿದ್ದರು.

ಧರ್ಮಪುರಿ ಜಿಲ್ಲೆಯಲ್ಲಿ ಹಲವು ಯೋಜನೆಗಳಿಗೆ ಚಾಲನೆ ನೀಡಿದ ಸ್ಟಾಲಿನ್‌, ‘ಕಲೈನಾರ್‌ (ದಿ. ಕರುಣಾನಿಧಿ) ಅವರು ಆರಂಭಿಸಿದ ಸ್ವಸಹಾಯ ಗುಂಪುಗಳ ಕಾರ್ಯಕ್ರಮ ಮತ್ತು ಹೊಗೇನಕಲ್‌ ಯೋಜನೆಗಳನ್ನು(Hogenakkal Project) ಧರ್ಮಪುರಿ ಸದಾಕಾಲ ನೆನಪಿಸುತ್ತದೆ. ಈಗಾಗಲೇ 2008ರಲ್ಲಿ ಕೈಗೊಳ್ಳಲಾಗಿದ್ದ ಮೊದಲ ಹಂತದ ಯೋಜನೆ ಮುಗಿದಿದೆ. ಅದು 17 ಪಟ್ಟಣಗಳು ಹಾಗೂ 7639 ಗ್ರಾಮಗಳ ಕುಡಿವ ನೀರಿನ ದಾಹ ತಣಿಸಿದೆ. ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳಿಗೆ ಹೆಚ್ಚುವರಿ ಕುಡಿಯುವ ನೀರು ಪೂರೈಕೆಗಾಗಿ ಹೊಗೇನಕಲ್‌-2ನೇ ಹಂತದ ಯೋಜನೆಗಾಗಿ ಡಿಪಿಆರ್‌ ಸಿದ್ಧಪಡಿಸಲಾಗುತ್ತದೆ’ ಎಂದು ಹೇಳಿದ್ದರು.

click me!