ಕಳೆದ ಆರು ತಿಂಗಳ ನಂತರ ಕರ್ನಾಟಕದಲ್ಲಿ ಮೊದಲ ಬಾರಿಗೆ ಒಂದೇ ದಿನ 4500ಕ್ಕೂ ಹೆಚ್ಚು ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದು, ಮುಂದೆ ಇನ್ನೂ ಹೇಗೆ ಎನ್ನುವ ಆತಂಕ ಶುರುವಾಗಿದೆ.
ಬೆಂಗಳೂರು, (ಏ.04): ಕರ್ನಾಟಕದಲ್ಲಿ ಕೊರೋನಾ ವೈರಸ್ ಎರಡನೇ ಅಲೆ ಹೆಚ್ಚಳ ದಿನ ಕಳೆದಂತೆ ನಿಯಂತ್ರಣವನ್ನು ಮೀರುತ್ತಿದೆ. ಮತ್ತೊಂದೆಡೆ ಜನರು ಸಹ ಮಾರ್ಗಸೂಚಿಗಳನ್ನ ಫಾಲೋ ಮಾಡ್ತಿಲ್ಲ.
ಈ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಪಾಸಿಟಿವ್ ಕೇಸ್‌ಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿದೆ. ಇಂದು (ಭಾನುವಾರ) ಒಂದೇ ದಿನ 4553 ಜನರಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಅಲ್ಲದೇ 15 ಜನರು ಈ ಮಹಾಮಾರಿಗೆ ಬಲಿಯಾಗಿದ್ದಾರೆ.
ಕೊರೋನಾ 2ನೇ ಅಲೆ ಹೆಚ್ಚಳದ ಮಧ್ಯೆ ಕರ್ನಾಟಕಕ್ಕೆ ಸಿಹಿ ಸುದ್ದಿ!
ಕಳೆದ ಆರು ತಿಂಗಳ ನಂತರ ಮೊದಲ ಬಾರಿಗೆ ಒಂದೇ ದಿನ 4500ಕ್ಕೂ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಮುಂದೆ ಇನ್ನೂ ಹೇಗೆ ಎನ್ನುವ ಆತಂಕ ಶುರುವಾಗಿದೆ.
ಇನ್ನು ಕಳೆದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 1015155ಕ್ಕೆ ಕೊರೋನಾ ವೈರಸ್ ಸೋಂಕಿತ ಪ್ರಕರಣಗಳಿವೆ. ಈ ಪೈಕಿ 963419 ಸೋಂಕಿತರು ಗುಣಮುಖರಾಗಿದ್ದು, ಸೋಂಕಿಗೆ ಈವರೆಗೂ 12625 ಮಂದಿ ಪ್ರಾಣ ಬಿಟ್ಟಿದ್ದಾರೆ.
ಕರ್ನಾಟಕದಲ್ಲಿ ಕೊರೋನಾ 2ನೇ ಅಲೆ: ಪ್ರಮುಖವಾಗಿ 6 ಜಿಲ್ಲೆಗಳಿಗೆ ಸರ್ಕಾರ ಖಡಕ್ ಸೂಚನೆ
ಇದರ ಹೊರತಾಗಿ ರಾಜ್ಯದಲ್ಲಿ 39092 ಸಕ್ರಿಯ ಪ್ರಕರಣಗಳಿವೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಜಿಲ್ಲಾವಾರ ಸಂಖ್ಯೆ
ಬಾಗಲಕೋಟೆ 20, ಬಳ್ಳಾರಿ 93, ಬೆಳಗಾವಿ 52, ಬೆಂಗಳೂರು ಗ್ರಾಮಾಂತರ 155, ಬೆಂಗಳೂರು 2787, ಬೀದರ್ 147, ಚಾಮರಾಜನಗರ 15, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 17, ಚಿತ್ರದುರ್ಗ 29, ದಕ್ಷಿಣ ಕನ್ನಡ 83, ದಾವಣಗೆರೆ 23, ಧಾರವಾಡ 100, ಗದಗ 18, ಹಾಸನ 104, ಹಾವೇರಿ 7, ಕಲಬುರಗಿ 170, ಕೊಡಗು 14, ಕೋಲಾರ 20, ಕೊಪ್ಪಳ 10, ಮಂಡ್ಯ 79, ಮೈಸೂರು 260, ರಾಯಚೂರು 23, ರಾಮನಗರ 18, ಶಿವಮೊಗ್ಗ 36, ತುಮಕೂರು 107, ಉಡುಪಿ 73, ಉತ್ತರ ಕನ್ನಡ 49, ವಿಜಯಪುರ 16, ಯಾದಗಿರಿ 18 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.