ಕೊರೋನಾ 2ನೇ ಅಲೆ ಹೆಚ್ಚಳದ ಮಧ್ಯೆ ಕರ್ನಾಟಕಕ್ಕೆ ಸಿಹಿ ಸುದ್ದಿ!

By Suvarna News  |  First Published Apr 4, 2021, 8:25 PM IST

ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಇದರ ಮಧ್ಯೆ ರಾಜ್ಯಕ್ಕೆ ಸಿಹಿಸುದ್ದಿಯೊಂದು ಸಿಕ್ಕಿದೆ. ಸಚಿವ ಸುಧಾಕರ್ ಅವರು ಈ ಸುದ್ದಿಯನ್ನು ಹಂಚಿಕೊಂಡಿದ್ದಾರೆ.


ಬೆಂಗಳೂರು, (ಏ.04) : ರಾಜ್ಯದಲ್ಲಿ ಕೊರೋನಾ ವೈರಸ್ ಹೆಚ್ಚಳದ ನಡುವೆಯೇ ರಾಜ್ಯಕ್ಕೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಕರ್ನಾಟಕಕ್ಕೆ ತುರ್ತಾಗಿ 15.25 ಲಕ್ಷ ಡೋಸ್ ಕೊರೋನಾ ಲಸಿಕೆ ಬರಲಿದೆ.

ಈ ಕುರಿತು ರಾಜ್ಯ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಟ್ವೀಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದು, ಕರ್ನಾಟಕಕ್ಕೆ ನಾಳೆ ಅಂದ್ರೆ ಏ.05ರಂದು ಎರಡು ಪ್ರತ್ಯೇಕ ಕಂತುಗಳಲ್ಲಿ ಒಟ್ಟು 15,25,500 ಡೋಸ್ ಕೊರೊನಾ ಲಸಿಕೆ ರವಾನೆಯಾಗಲಿದೆ. 

Latest Videos

ಕೊರೋನಾ ಹೆಚ್ಚಾದ್ರೂ ಜನ ಡೋಂಟ್ ಕೇರ್ !

ಒಂದು ಕಂತಿನಲ್ಲಿ ರಸ್ತೆ ಮೂಲಕ 5,25,500 ಡೋಸ್ ಲಸಿಕೆ ಬೆಳಗಾವಿಗೆ ತಲುಪಲಿದ್ದು, ಮತ್ತೊಂದು ಕಂತಿನಲ್ಲಿ 10,00,000 ಡೋಸ್ ಲಸಿಕೆ ವಿಮಾನದ ಮೂಲಕ ಸೋಮವಾರ ಸಂಜೆ ಬೆಂಗಳೂರು ತಲುಪಲಿದೆ ಎಂದು ಸುಧಾಕರ್ ಮಾಹಿತಿ ನೀಡಿದ್ದಾರೆ.

ಸದ್ಯ ರಾಜ್ಯ ಸರ್ಕಾರದ ಬಳಿ  7 ಲಕ್ಷ ಲಸಿಕೆಗಳು ದಾಸ್ತಾನು ಇವೆ. ನಿನ್ನೆ (ಶನಿವಾರ) 2.5 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ. ರಾಜ್ಯದಲ್ಲಿ ಲಸಿಕೆಯ ಕೊರತೆ ಇಲ್ಲ. ರಾಜ್ಯದ ಮನವಿ ಮೇರೆಗೆ ಕೇಂದ್ರವು ಲಸಿಕೆಗಳನ್ನು ತುರ್ತಾಗಿ ಪೂರೈಕೆ ಮಾಡುತ್ತಿದೆ ಎಂದು ರಾಜ್ಯ ಸರ್ಕಾರದಿಂದ ಮಾಧ್ಯಮ ಪ್ರಕಟಣೆ ಬಿಡುಗಡೆಯಾಗಿದೆ.

click me!