ರಾಜ್ಯದಲ್ಲಿ ಕೊರೋನಾ 2ನೇ ಅಲೆ ತಡೆಗಟ್ಟಲು ರಾಜ್ಯ ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ. ಅದರಲ್ಲೂ ಪ್ರಮುಖ ಆರು ಜಿಲ್ಲೆಗಳ ಮೇಲೆ ಹೆಚ್ಚಿನ ನಿಗಾವಹಿಸಿದೆ.
ಬೆಂಗಳೂರು, (ಏ.04): ಕರ್ನಾಟಕದಲ್ಲಿ ಕೊರೋನಾ ಎರನಡೇ ಅಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಅದರಲ್ಲೂ ರಾಜ್ಯದ 6 ಜಿಲ್ಲೆಗಳಲ್ಲಿ ಪಾಸಿಟಿವ್ ಕೇಸ್‌ಗಳ ಸಂಖ್ಯೆ ಏರುತ್ತಲೇ ಇದೆ.
ಈ ಹಿನ್ನೆಲೆಯಲ್ಲಿ ದಾವಣಗೆರೆ, ಬಳ್ಳಾರಿ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ ಈ 6 ಜಿಲ್ಲೆಗಳ ಮೇಲೆ ರಾಜ್ಯ ಸರ್ಕಾರ ನಿಗಾ ವಹಿಸಿದ್ದು, ಆರ್ ಟಿ ಪಿಸಿಆರ್ ಪರೀಕ್ಷೆ ಹೆಚ್ಚಿಸಲು ಸೂಚನೆ ನಿಡಿದೆ.
undefined
ಕೊರೋನಾ 2ನೇ ಅಲೆ ಹೆಚ್ಚಳದ ಮಧ್ಯೆ ಕರ್ನಾಟಕಕ್ಕೆ ಸಿಹಿ ಸುದ್ದಿ!
ದಾವಣಗೆರೆ, ಬಳ್ಳಾರಿ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆರ್ ಟಿಪಿಸಿಆರ್ ಪರೀಕ್ಷೆ ಹೆಚ್ಚಿಸಿ. ಬೆಂಗಳೂರು ಗ್ರಾಮಾಂತರದಲ್ಲಿ ರ್ಯಾಪಿಡ್ ಆಂಟಿಜನ್ ಪರೀಕ್ಷೆ ತಗ್ಗಿಸಿ, ಆರ್ಟಿಪಿಸಿಆರ್ ಪರೀಕ್ಷೆ ಹೆಚ್ಚಳಕ್ಕೆ ಸೂಚಿಸಲಾಗಿದೆ. ಇನ್ನು 6 ಜಿಲ್ಲೆಗಳಲ್ಲಿ 1:20 ಅನುಪಾತದಲ್ಲಿ ಸಂಪರ್ಕಿತರ ಪತ್ತೆಗೆ ಆರೋಗ್ಯ ಇಲಾಖೆ ಟಾರ್ಗೆಟ್ ಫಿಕ್ಸ್ ಮಾಡಿದೆ.
ಒಬ್ಬ ಸೋಂಕಿತ ಪತ್ತೆಯಾದರೆ 20 ಸಂಪರ್ಕಿತರ ಪತ್ತೆ ಹಚ್ಚಿ ಪರೀಕ್ಷಿಸುವುದು ಕಡ್ಡಾಯ ಎಂದು ಆರೋಗ್ಯ ಇಲಾಖೆ ಕಾರ್ಯದರ್ಶಿ ಜಾವೆದ್ ಅಖ್ತರ್ ಅವರು ಆದೇಶ ಹೊರಡಿಸಿದ್ದಾರೆ.
ಪರೀಕ್ಷೆ ಹೆಚ್ಚಿಸಲು ಟಾರ್ಗೆಟ್ ಪರಿಷ್ಕರಣೆ
ಕೊರೋನಾ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಪ್ರತಿ ನಿತ್ಯದ ಪರೀಕ್ಷೆ ಟಾರ್ಗೆಟ್ ಹೆಚ್ಚಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದು, ಅದು ಈ ಕೆಳಗಿನಂತಿದೆ.
* ಬಿಬಿಎಂಪಿ ವ್ಯಾಪ್ತಿ - 40,000, ಬೆಳಗಾವಿ - 3000
* ದಕ್ಷಿಣ ಕನ್ನಡ - 3000, ಮೈಸೂರು - 5000
* ಕೊಡಗು - 1000, ಉಡುಪಿ - 2,000
* ತುಮಕೂರು - 3,500, ವಿಜಯಪುರ - 2000
ಉಳಿದ ಜಿಲ್ಲೆಗಳ ಟಾರ್ಗೆಟ್ ಎಂದಿನಂತೆ ತಲುಪಲೇಬೇಕು. ಎಲ್ಲಾ ಜಿಲ್ಲೆಗಳು ಪರೀಕ್ಷಾ ಟಾರ್ಗೆಟ್ ತಲುಪುಲು ಕ್ರಮ ಕೈಗೊಳ್ಳಲು ಸರ್ಕಾರ ಆದೇಶ ಮಾಡಿದೆ.