ವಿಕ್ಕಿ ಕೌಶಾಲ್ ತೌಬಾ ತೌಬಾ ಹಾಡಿಗೆ ಕರ್ನಾಟಕದ ವೃದ್ಧಾಶ್ರಮದ ತಾಯಂದಿರ ಸ್ಟೆಪ್ಸ್ ವೈರಲ್!

By Chethan Kumar  |  First Published Jul 19, 2024, 5:39 PM IST

ವಿಕ್ಕಿ ಕೌಶಾಲ್ ಹಾಗೂ ತೃಪ್ತಿ ದಿಮ್ರಿ ಅಬಿನಯದ ಬ್ಯಾಡ್ ನ್ಯೂಝ್ ಚಿತ್ರ ತೆರೆಕಂಡಿದೆ. ಈ ಚಿತ್ರ ತೌಬಾ ತೌಬಾ ಹಾಡು ಭಾರಿ ವೈರಲ್ ಆಗಿದೆ. ಅದ್ಭುತ ಸ್ಟೆಪ್ಸ್‌ಗೆ ಎಲ್ಲರೂ ಹೆಜ್ಜೆ ಹಾಕುತ್ತಿದ್ದಾರೆ. ಇದೀಗ ಕರ್ನಾಟಕದ ವೃದ್ಧಾಶ್ರಮದ ತಾಯಂದಿರು ಈ ಹಾಡಿಗೆ ತಮ್ಮದೇ ಸ್ಟೈಲ್‌ನಲ್ಲಿ ಹೆಜ್ಜೆ ಹಾಕಿ ಎಲ್ಲರ ಮನಗೆದ್ದಿದ್ದಾರೆ.


ಬೆಳಗಾವಿ(ಜು.19)  ಬಾಲಿವುಡ್ ಬಹುನಿರೀಕ್ಷಿತ ಬ್ಯಾಡ್ ನ್ಯೂಝ್ ಚಿತ್ರ ತೆರೆ ಕಂಡಿದೆ. ಈ ಚಿತ್ರಕ್ಕೂ ಮುನ್ನ ಹಾಡುಗಳು ಭಾರಿ ಸದ್ದು ಮಾಡಿದೆ. ವಿಕ್ಕಿ ಕೌಶಾಲ್ ಹಾಗೂ ತೃಪ್ತಿ ದಿಮ್ರಿ ಪಾರ್ಟಿ ಹಾಡು ತೌಬಾ ತೌಬಾ ಭಾರಿ ವೈರಲ್ ಆಗಿದೆ. ಈ ಹಾಡಿನಲ್ಲಿ ವಿಕ್ಕಿ ಕೌಶಾಲ್ ಡ್ಯಾನ್ಸ್ ಸ್ಟೆಪ್ಸ್ ಎಲ್ಲರನ್ನು ಚಕಿತಗೊಳಿಸಿದೆ. ಹೃತಿಕ್ ರೋಶನ್ ಸೇರಿದಂತೆ ಹಲವು ದಿಗ್ಗಜ ನಟರು ವಿಕ್ಕಿ ಡ್ಯಾನ್ಸ್ ಸ್ಟೆಪ್ಸ್ ಕೊಂಡಾಡಿದ್ದಾರೆ. ಈ ತೌಬಾ ತೌಬಾ ಹಾಡಿಗೆ ಇದೀಗ ದೇಶ ವಿದೇಶಗಳಲ್ಲಿ ಜನರು ಸ್ಟೆಪ್ಸ್ ಹಾಕುತ್ತಿದ್ದಾರೆ. ಇದರ ನಡುವೆ ಕರ್ನಾಟಕದ ಬೆಳಗಾವಿಯ ವೃದ್ಧಾಶ್ರಮದ ತಾಯಂದಿರು ತಮ್ಮದೇ ಶೈಲಿಯಲ್ಲಿ ತೌಬಾ ತೌಬಾ ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ.

ಬೆಳಗಾವಿಯ ಶಾಂತಿ ವೃದ್ಧಾಶ್ರಮದ ತಾಯಂದಿರು ಈ ತೌಬಾ ತೌಬಾ ಹಾಡಿಗೆ ಹೆಜ್ಜೆ ಹಾಕಲು ಭರ್ಜರಿ ತಯಾರಿ ಮಾಡಿದ್ದಾರೆ. ಈ ಹಾಡಿಗಾಗಿ ಹಸಿರು ಬಾರ್ಡರ್ ಒಳಗೊಂಡ ಪರ್ಪಲ್ ಸೀರೆ,ಮ್ಯಾಚಿಂಗ್ ಹಸಿರು ಬ್ಲೌಸ್ ಧರಿಸಿದ್ದಾರೆ. ಇನ್ನು ಮಧ್ಯದಲ್ಲಿ ನಿಂತ ಸೆಂಟರ್ ಆಫ್ ಅಟ್ರಾಕ್ಷನ್ ವೃದ್ಧೆ ಬ್ಲಾಕ್ ಗಾಗಲ್ಸ್ ಹಾಕಿ ಮಿಂಚಿದ್ದಾರೆ. 

Tap to resize

Latest Videos

ವಿಕ್ಕಿ-ತೃಪ್ತಿ 27 ಸೆಕೆಂಡ್ ಚುಂಬನ ದೃಶ್ಯಕ್ಕೆ ಸೆನ್ಸಾರ್ ಬೋರ್ಡ್ ಕತ್ತರಿ, ಅದರೂ ಚಿತ್ರದಲ್ಲಿದೆ ಹಾಟ್ ಸೀನ್!

ವಿಕ್ಕಿ ಕೌಶಾಲ್ ತೌಬಾ ತೌಬಾ ಸಿಗ್ನೇಚರ್ ಸ್ಟೆಪ್ಸ್‌ನ್ನು ಕೊಂಚ ಬದಲಾಯಿಸಿ ತಮಗೆ ಹೊಂದುವಂತೆ ಮಾಡಲಾಗಿದೆ. ಬಳಿಕ ಈ ಹಾಡಿನ ರೀಲ್ಸ್ ಮಾಡಿದ್ದಾರೆ. ತಾಯಂದಿರ ಈ ರೀಲ್ಸ್ ಇದೀಗ ಭಾರಿ ವೈರಲ್ ಆಗಿದೆ. ಇದು ತೌಬಾ ತೌಬಾ ಹಾಡಿನ ಒರಿಜಿನಲ್. ಇದನ್ನು ವಿಕ್ಕಿ ಕೌಶಾಲ್ ಕೊಂಚ ಮಾಡಿಫೈ ಮಾಡಿ ಯಾರು ಮಾಡದಂತೆ ಮಾಡಿದ್ದಾರೆ. ಇದು ಕ್ಯೂಟ್ ಡ್ಯಾನ್ಸ್ ಎಂದು ಭಾರಿ ಕಮೆಂಟ್‌ಗಳು ವ್ಯಕ್ತವಾಗಿದೆ. 

 

 

ತೌಬಾ ತೌಬಾ ಹಾಡಿಗೆ ಹಲವು ವೃತ್ತಿಪರ ಡ್ಯಾನ್ಸರ್ ಹೆಜ್ಜೆ ಹಾಕಿದ್ದಾರೆ. ಪುಟಾಣಿಗಳು ಸೇರಿದಂತೆ ಹಲವು ಈ ಹಾಡಿನ ಸಿಗ್ನೇಚರ್ ಸ್ಟೆಪ್ಸ್ ಕಾಪಿ ಮಾಡಿ ರಿಕ್ರಿಯೇಟ್ ಮಾಡಿದ್ದಾರೆ. ಆದರೆ ಅವೆಲ್ಲಕ್ಕಿಂತ ಈ ತಾಯಂದಿರ ಡ್ಯಾನ್ಸ್ ಚೆನ್ನಾಗಿದೆ. ಇದಕ್ಕೆ ಫುಲ್ ಮಾರ್ಕ್ಸ್ ಎಂದು ಕಮೆಂಟ್ ಮಾಡಿದ್ದಾರೆ. ಹಲವರು ವಿಕ್ಕಿ ಕೌಶಾಲ್‌ಗೆ ಈ ಡ್ಯಾನ್ಸ್ ಟ್ಯಾಗ್ ಮಾಡಿದ್ದಾರೆ. ಈ ದಾದಿಯರಿಗೆ ನಿಮ್ಮ ಕಮೆಂಟ್ ಅತ್ಯವಶ್ಯಕ ಎಂದು ಸೂಚಿಸಿದ್ದಾರೆ. 

ವಿಕ್ಕಿ ಕೌಶಾಲ್ ಹಾಗೂ ತೃಪ್ತಿ ದಿಮ್ರಿ ಅಭಿನಯದ ಬ್ಯಾಡ್ ನ್ಯೂಜ್ ಇಂದು ತೆರೆ ಕಂಡಿದೆ. ಭಾರಿ ಕುತೂಹಲ ನಿರೀಕ್ಷೆ ಮೂಡಿಸಿದ್ದ ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ತೃಪ್ತಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಆ್ಯನಿಮಲ್ ಬಳಿಕ ಬಾಲಿವುಡ್‌ನಲ್ಲಿ ಬ್ಯಾಡ್ ನ್ಯೂಝ್ ಹೊಸ ಸಂಚಲನ ಸೃಷ್ಟಿಸಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. 

Bad Newz ತೃಪ್ತಿ ದಿಮ್ರಿ ಜೊತೆ ಈಜುಕೊಳದಲ್ಲಿ ವಿಕ್ಕಿ ರೊಮ್ಯಾನ್ಸ್, ಕತ್ರೀನಾಗೆ ಟ್ಯಾಗ್ ಮಾಡಿದ ನೆಟ್ಟಿಗರು!
 

click me!