LIVE NOW
Published : Sep 27, 2026, 07:38 AM ISTUpdated : Sep 27, 2026, 08:59 AM IST

Karnataka News Live: ಬ್ಯಾಂಕ್‌ ಕೂಡ ಸೇಫ್‌ ಅಲ್ವಾ? ಸತ್ತವನ ಖಾತೆಯಿಂದ ₹61 ಲಕ್ಷ ಎಗರಿಸಿದ ಮ್ಯಾನೇಜರ್‌ಗೆ ಜೈಲೂಟ! ಏನಿದು ಪ್ರಕರಣ?

ಸಾರಾಂಶ

ವಿಧಾನ ಪರಿಷತ್‌ ಚುನಾವಣೆ ಸೇರಿ ಮುಂದೆ ಬರುವ ಎಲ್ಲಾ ಚುನಾವಣೆಗಳನ್ನು ಬಿಜೆಪಿ-ಜೆಡಿಎಸ್‌ನ ಎನ್‌ಡಿಎ ಮೈತ್ರಿಕೂಟ ಜಂಟಿಯಾಗಿ ಎದುರಿಸಲು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಹಾರದ ರೀತಿ 180 ಸ್ಥಾನದ ಗುರಿ ಸಾಧಿಸಲು ಒಗ್ಗಟ್ಟಿನಿಂದ ಹೋರಾಡಲು ರಾಜ್ಯ ಬಿಜೆಪಿ-ಜೆಡಿಎಸ್‌ನ ನಾಯಕರು ತೀರ್ಮಾನಿಸಿದ್ದಾರೆ.

ವಿಧಾನ ಪರಿಷತ್ತಿನ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಬಿಜೆಪಿ-ಜೆಡಿಎಸ್‌ನ ನಾಯಕರು ಶನಿವಾರ ಸಮನ್ವಯ ಸಭೆ ನಡೆಸಿ ಚುನಾವಣೆ ಗೆಲುವಿನ ಕಾರ್ಯತಂತ್ರದ ಬಗ್ಗೆ ಸಮಾಲೋಚನೆ ನಡೆಸಿದರು.

ಮುಂದೆ ಯಾವುದೇ ಚುನಾವಣೆ ನಡೆದರೂ ಅದು ಎನ್‌ಡಿಎ ಅಭ್ಯರ್ಥಿಯ ಚುನಾವಣೆ ಆಗಿರಬೇಕು. ಬಿಜೆಪಿ ಅಥವಾ ಜೆಡಿಎಸ್‌ ಅಭ್ಯರ್ಥಿ ಚುನಾವಣೆ ಎಂದು ಬಿಂಬಿಸಬಾರದು. ಎನ್‌ಡಿಎ ಸ್ಪರ್ಧೆ ಮಾಡಿದೆ ಎಂದೇ ಚುನಾವಣೆ ಎದುರಿಸಬೇಕು. ವಿಧಾನ ಪರಿಷತ್‌, ವಿಧಾನಸಭೆ, ಸಹಕಾರ ಸಂಘಗಳ ಚುನಾವಣೆಗೆ ಜಂಟಿಯಾಗಿ ಹೋರಾಟ ಮಾಡಿದರೆ ಮಾತ್ರ ಕಾಂಗ್ರೆಸ್‌ ಮಣಿಸಲು ಸುಲಭ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಣದ ಚುನಾವಣೆ ಮಾಡುತ್ತಾರೆ. ಇದರ ನಡುವೆ ಪರಿಷತ್ತಿನ ನಾಲ್ಕು ಸ್ಥಾನ ಗೆಲ್ಲಬೇಕು ಎಂದು ಮುಖಂಡರು ನಿರ್ಧರಿಸಿದ್ದಾರೆ.

08:59 AM (IST) Sep 27

ಬ್ಯಾಂಕ್‌ ಕೂಡ ಸೇಫ್‌ ಅಲ್ವಾ? ಸತ್ತವನ ಖಾತೆಯಿಂದ ₹61 ಲಕ್ಷ ಎಗರಿಸಿದ ಮ್ಯಾನೇಜರ್‌ಗೆ ಜೈಲೂಟ! ಏನಿದು ಪ್ರಕರಣ?

ಮೈಸೂರಿನ ಚಾಮುಂಡಿಪುರಂ ಎಸ್‌ಬಿಐ ಶಾಖೆಯ ಮುಖ್ಯ ವ್ಯವಸ್ಥಾಪಕ ಎ.ವಿ.ಕುಲಕರ್ಣಿ ಮೃತ ಗ್ರಾಹಕನ ಮತ್ತು ಬ್ಯಾಂಕಿನ ಖಾತೆಯಿಂದ ₹61.57 ಲಕ್ಷ ದುರುಪಯೋಗ ಪಡಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ₹50 ಸಾವಿರ ದಂಡ.

Read Full Story

08:37 AM (IST) Sep 27

ಸಚಿವ ವಿ.ಸೋಮಣ್ಣ ಕಣ್ಣಿಗೆ ಬೀಳಲಿಲ್ವಾ ಸೈದಾಪುರ ರೈಲು ನಿಲ್ದಾಣ; 10 ವರ್ಷದಿಂದ ಸೌಲಭ್ಯಕ್ಕಿಂತ ಕೊರತೆಗಳೇ ಹೆಚ್ಚು!

ಯಾದಗಿರಿ ಜಿಲ್ಲೆಯ ಸೈದಾಪುರ ರೈಲು ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆ ಹಾಗೂ ಮೇಲ್ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ. ಸ್ಥಗಿತಗೊಂಡಿರುವ ಇಂಟರ್‌ಸಿಟಿ ರೈಲು ಮರುಆರಂಭ ಮತ್ತು ಪ್ರಮುಖ ರೈಲುಗಳಿಗೆ ನಿಲುಗಡೆ ನೀಡುವಂತೆ ಒತ್ತಾಯಿಸಿದ್ದಾರೆ. ಬೇಡಿಕೆ ಈಡೇರದಿದ್ದರೆ ಹೋರಾಟದ ಎಚ್ಚರಿಕೆ ನೀಡಲಾಗಿದೆ.

Read Full Story

08:34 AM (IST) Sep 27

ಡ್ರಮ್ಮರ್ ದೇವ ಸಾವಿನ ಕೊನೆಯ ದಿನಗಳು ಹೀಗಿದ್ದವು.. ಆಸ್ಪತ್ರೆ ಬೆಡ್ ಮೇಲೂ ಡ್ರಮ್ ನುಡಿಸಿ ಹೇಳಿದ್ದೇನು?

ವೇದಿಕೆಯಲ್ಲಿ ಅವರ ಡ್ರಮ್‌ ಸ್ಟಿಕ್‌ಗಳು ಚಲಿಸುತ್ತಿದ್ದಂತೆ ಸಂಗೀತದ ತಾಳಕ್ಕೆ ಪ್ರೇಕ್ಷಕರೂ ಹೆಜ್ಜೆ ಹಾಕುತ್ತಿದ್ದರು. ಹಲವು ದಶಕಗಳ ಕಾಲ ಸಂಗೀತ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದ ಅವರು, ತಮ್ಮ ಹಿಂದೆ ಅಪಾರ ಶಿಷ್ಯವೃಂದವನ್ನೂ ಬೆಳೆಸಿದ್ದಾರೆ. ತಮ್ಮ ಕಲೆಯನ್ನು ಮುಂದಿನ ಪೀಳಿಗೆಗೆ ತಲುಪಿಸಿದ ಹೆಮ್ಮೆ ಅವರದ್ದಾಗಿದೆ. ಇಂಥ ಕಲಾವಿದರ ಕೊನೆಯ ಕ್ಷಣಗಳು ಹೀಗಿದ್ದವು..

Read Full Story

08:16 AM (IST) Sep 27

2028ಕ್ಕೆ ರಾಜ್ಯದಲ್ಲಿ 180 ಸೀಟ್‌ - ದೋಸ್ತಿ ಟಾರ್ಗೆಟ್ - ಎಲ್ಲ ಚುನಾವಣೆ ಒಗ್ಗೂಡಿ ಎದುರಿಸಲು ಶಪಥ

ಮುಂಬರುವ ವಿಧಾನ ಪರಿಷತ್ ಹಾಗೂ ವಿಧಾನಸಭಾ ಚುನಾವಣೆಗಳನ್ನು ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಎದುರಿಸಲು ತೀರ್ಮಾನಿಸಿವೆ. ಕಾಂಗ್ರೆಸ್ ಪಕ್ಷವನ್ನು ಮಣಿಸಲು 180 ಸ್ಥಾನಗಳ ಗುರಿ ಹೊಂದಿದ್ದು, ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಬಹಿರಂಗ ಚರ್ಚೆ ನಡೆಸದಿರಲು ನಿರ್ಧರಿಸಲಾಗಿದೆ.

Read Full Story

08:05 AM (IST) Sep 27

ಗದಗ - ಅನುದಾನ ಕೊರತೆ, ಗುತ್ತಿಗೆದಾರರ ಕಿರುಕುಳ, KRIDL ಎಇಇ 13 ದಿನದಿಂದ ನಾಪತ್ತೆ, ಡೆತ್‌ನೋಟ್‌ ನೋಟಲ್ಲಿ ಏನಿದೆ?

ಅನುದಾನ ಬಿಡುಗಡೆಯಾಗದ ಹಿನ್ನೆಲೆ ಹಾಗೂ ಗುತ್ತಿಗೆದಾರರ ಕಿರುಕುಳದಿಂದ ಬೇಸತ್ತ ಗದಗದ ಕೆಆರ್‌ಐಡಿಎಲ್ ಎಇಇ ಫರ್ವೇಜ್ ಧಾರವಾಡ ಡೆತ್‌ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಸೆಪ್ಟೆಂಬರ್ 13ರಂದು ಬೆಂಗಳೂರಿಗೆ ತೆರಳಿದ್ದ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ. ಕುಟುಂಬಸ್ಥರು ಬೆಟಗೇರಿ ಪೊಲೀಸ್ ಠಾಣೆಗೆ ದೂರು.

Read Full Story

More Trending News