ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಕುರಿತಂತೆ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯ ಅತೃಪ್ತ ಮುಖಂಡರ ಬಣದಲ್ಲಿ ಸಂತಸ ತಂದಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಕೋರಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ್ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ ಹೋರಾಟ ಮಾಡಿದ್ದರು. ಇದೀಗ ಅವರ ಹೋರಾಟಕ್ಕೆ ಜಯ ಸಂದಂತಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮುಚ್ಚಿ ಹಾಕಬಾರದು ಎಂಬ ಉದ್ದೇಶದಿಂದ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಅರವಿಂದ್ ಲಿಂಬಾವಳಿ ಮತ್ತು ನಾನು ನ್ಯಾಯಾಲಯದ ಮೊರೆ ಹೋಗಿದ್ದೆವು ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ.
11:55 PM (IST) Jul 03
11:28 PM (IST) Jul 03
ರ‍್ಯಾಶ್ ಡ್ರೈವಿಂಗ್ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗಳ ಕುಟುಂಬಕ್ಕೆ ವಿಮಾ ಕಂಪನಿಗಳು ಯಾವುದೇ ಪರಿಹಾರ ನೀಡಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
11:09 PM (IST) Jul 03
10:51 PM (IST) Jul 03
ಇಂದು ಮೊಬೈಲ್ ರೀಚಾರ್ಜ್ ಮಾಡದ ವ್ಯಕ್ತಿಗಳೇ ಇಲ್ಲ ಎನ್ನಬಹುದೇನೋ. ಅಂಥವರಿಗೆ ಇದೀಗ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ವಾರ್ನಿಂಗ್ ಕೊಟ್ಟಿದೆ. ಏನದು ನೋಡಿ...
10:46 PM (IST) Jul 03
ಜುಲೈ 7ರ ವರೆಗೆ ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಇತ್ತ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಭಾರಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದ 2 ಜಿಲ್ಲೆಯ ಕೆಲ ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
10:43 PM (IST) Jul 03
10:21 PM (IST) Jul 03
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದಲ್ಲಿ 14 ವರ್ಷದ ಬಾಲಕನೊಬ್ಬ ನೇಣು ಬಿಗಿದುಕೊಂಡು ಮಾಡಿಕೊಂಡಿದ್ದಾನೆ. ಮೃತ ಬಾಲಕನನ್ನು ಮಿಥುನ್ ಎಂದು ಗುರುತಿಸಲಾಗಿದ್ದು, ನಿಖರ ಕಾರಣ ತಿಳಿದುಬಂದಿಲ್ಲ.
10:01 PM (IST) Jul 03
ಯಶ್ ರಾವಣನಾಗಿ, ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡಿರುವ ರಾಮಾಯಣ ಸಿನಿಮಾದ ಮೊದಲ ವಿಡಿಯೋ ರಿಲೀಸ್ ಆಗಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದಂತೆ, ಟಿ-ಸಿರೀಸ್ ಆದಿಪುರುಷ್ ಸಾಂಗ್ ರಿಲೀಸ್ ಮಾಡಿದೆ. ಇದು ಯಶ್ ಅಭಿಮಾನಿಗಳನ್ನು ಕೆರಳಿಸಿದೆ.
09:10 PM (IST) Jul 03
ವೈದ್ಯ ಲೋಕದಲ್ಲೇ ಅಚ್ಚರಿ ಇದು. ಕಾರಣ ಸಂಶೋಧಕರು ಇದೀಗ ಕೃತಕ ರಕ್ತ ಸೃಷ್ಟಿಸಿದ್ದಾರೆ. ಇದು ಜನರ ಜೀವ ಉಳಿಸಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಇಷ್ಟೇ ಅಲ್ಲ ಒಮ್ಮೆ ಸೃಷ್ಟಿಸಿದ ಈ ಕೃತಕ ರಕ್ತದ ಆಯಸ್ಸು 2 ವರ್ಷ.
08:57 PM (IST) Jul 03
ಟಿಸಿಎಸ್ ವರ್ಲ್ಡ್ 10 ಕೆ, ಬೆಂಗಳೂರು ಮ್ಯಾರಥಾನ್, ಪ್ರೊ ಕಬಡ್ಡಿ ಮತ್ತು ಐಪಿಎಲ್‌ನಂತಹ ಕಾರ್ಯಕ್ರಮಗಳಿಂದ ಬೆಂಗಳೂರು ನಗರ ಫಿಟ್‌ನೆಸ್ ಜೊತೆಗೆ ಕ್ರೀಡಾ ರಾಜಧಾನಿಯಾಗಿ ಗುರುತಿಸಿಕೊಂಡಿದೆ ಎಂದು ರಾಜ್ಯಪಾಲ ಗೆಹ್ಲೋಟ್ ಹೇಳಿದ್ದಾರೆ.
08:29 PM (IST) Jul 03
08:20 PM (IST) Jul 03
08:15 PM (IST) Jul 03
ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನಾಯಕ ಶುಭ್‌ಮನ್ ಗಿಲ್ ಭರ್ಜರಿ ದ್ವಿಶತಕ ಸಿಡಿಸಿ ಹಲವು ದಾಖಲೆ ಬರೆದಿದ್ದಾರೆ. ಇದರೊಂದಿಗೆ ಬರೋಬ್ಬರಿ 46 ವರ್ಷಗಳಿಂದ ಸುನಿಲ್ ಗವಾಸ್ಕರ್ ಹೆಸರಿನಲ್ಲಿದ್ದ ದಾಖಲೆಯನ್ನು ಗಿಲ್ ಪುಡಿ ಮಾಡಿದ್ದಾರೆ.
07:53 PM (IST) Jul 03
07:51 PM (IST) Jul 03
07:42 PM (IST) Jul 03
ಸರ್ಕಾರಿ ಸ್ವಾಮ್ಯದ ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ ಜೂನ್ 27 ರಂದು ಒಟ್ಟು ವೆಚ್ಚದ ಒಪ್ಪಂದ ಮಾದರಿಯಡಿಯಲ್ಲಿ ಟೆಂಡರ್ ಅನ್ನು ಕರೆದಿದೆ.
07:38 PM (IST) Jul 03
ದಕ್ಷಿಣ ಭಾರತದ ಸಿನಿಮಾರಂಗಕ್ಕೆ ಬಾಲಿವುಡ್ ಸೂಪರ್‌ಸ್ಟಾರ್ ಆಮಿರ್ ಖಾನ್ ಪಾದಾರ್ಪಣೆ ಮಾಡಿದ್ದಾರೆ. ರಜನಿಕಾಂತ್ ನಟಿಸುತ್ತಿರುವ ಹೊಸ ಚಿತ್ರ 'ಕೂಲಿ'ಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
07:34 PM (IST) Jul 03
07:28 PM (IST) Jul 03
ಯಾದಗಿರಿಯ ಖಡಕ್ ಎಸ್ಪಿ ಪೃಥ್ವಿಕ್ ಶಂಕರ್ ಅವರನ್ನು ಕೇವಲ 7 ತಿಂಗಳಲ್ಲೇ ವರ್ಗಾವಣೆ ಮಾಡಲು ಸರ್ಕಾರ ಮುಂದಾಗಿದೆ. ಅಕ್ರಮ ಚಟುವಟಿಕೆಗಳ ವಿರುದ್ಧದ ಕಠಿಣ ಕ್ರಮಗಳೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಮಾಜಿ ಸಚಿವ ರಾಜುಗೌಡ ವರ್ಗಾವಣೆ ತಡೆಯಲು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.
07:26 PM (IST) Jul 03
07:25 PM (IST) Jul 03
ಹಳೇ ವಾಹನಕ್ಕೆ ಇಂಧನ ನಿಷೇಧ, ಹಳೇ ವಾಹನ ಗುಜುರಿಗೆ ಎಂದು ಜುಲೈ 1 ರಿಂದ ಜಾರಿಗೆ ತಂದಿದ್ದ ನೀತಿಯಲ್ಲಿ ಮತ್ತೆ ಮಹತ್ವದ ಬದಲಾವಣೆ ಮಾಡಲಾಗಿದೆ. ಜನರ ಭಾರಿ ವಿರೋಧ, ಆಕ್ರೋಶಗಳ ಬೆನ್ನಲ್ಲೇ ಸರ್ಕಾರ ಇದೀಗ ಮಾಡಿದ ಬದಲಾವಣೆ ಏನು?
07:15 PM (IST) Jul 03
07:02 PM (IST) Jul 03
ಮಳೆಗಾಲದಲ್ಲಿ ಹಾವು ಕಡಿತದ ಅಪಾಯ ಹೆಚ್ಚುತ್ತದೆ. ಸರಿಯಾದ ಮಾಹಿತಿ ಮತ್ತು ತಕ್ಷಣದ ಚಿಕಿತ್ಸೆ ಅಗತ್ಯ. ಜೀವ ಉಳಿಸಲು ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬುದನ್ನು ತಿಳಿಯಿರಿ.
06:59 PM (IST) Jul 03
ಭಾರತೀಯ ಷೇರು ಮಾರುಕಟ್ಟೆ ಪರಿಸರ ವ್ಯವಸ್ಥೆಗೆ ಹೊಸ ಚಿಲ್ಲರೆ ಹೂಡಿಕೆದಾರರನ್ನು ತರುವಲ್ಲಿ ಜಿಯೋ-ಬ್ಲ್ಯಾಕ್‌ರಾಕ್‌ನಂತಹ ಪಾಲುದಾರಿಕೆಯ ಅಗತ್ಯವಿದೆ ಅನ್ನೋದನ್ನ ನಿತಿನ್ ಕಾಮತ್ ಒಪ್ಪಿಕೊಂಡಿದ್ದಾರೆ.
06:57 PM (IST) Jul 03
06:42 PM (IST) Jul 03
ಟಾಟಾ ಮೋಟಾರ್ಸ್, ಮಹೀಂದ್ರ ಸೇರಿದಂತೆ ಹಲವು ಟಾಪ್ ಬ್ರ್ಯಾಂಡ್ ಕಾರುಗಳು ಜೂನ್ ತಿಂಗಳ ಮಾರಾಟದಲ್ಲಿ ಕುಸಿತ ಕಂಡಿದೆ. ಆದರೆ ಈ ಕಾರು ಮಾತ್ರ ದಾಖಲೆ ಬರೆದಿದೆ. ಈ ಕಾರಿಗೆ ಜನ ಮುಗಿಬಿದ್ದಿದ್ದಾರೆ. ಜೂನ್ ತಿಂಗಳಲ್ಲಿ ಜನರು ಹೆಚ್ಚು ಖರೀದಿಸಿದ ಕಾರು ಯಾವುದು?
06:27 PM (IST) Jul 03
ಹಾಸನದ ಹೃದಯಾಘಾತ ಭೂತವನ್ನು ಸ್ವಂತಕ್ಕೆ ಬಳಸಿಕೊಂಡ ಭೂಪನೊಬ್ಬ ತನ್ನ ಹೆಂಡತಿ ಕೊಲೆ ಮಾಡಿ ಹಾರ್ಟ್ ಅಟ್ಯಾಕ್ ಕಥೆ ಕಟ್ಟಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಕಳೆದ ಲ್ಲಿ 40 ದಿನದಲ್ಲಿ ಹಾಸನ ಜಿಲ್ಲೆಯಲ್ಲಿ 26ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.
06:18 PM (IST) Jul 03
ಒಳ್ಳೆಯ ಇನ್ಶೂರೆನ್ಸ್ ಪಾಲಿಸಿ ಆಯ್ಕೆ ಮಾಡಿಕೊಳ್ಳುವುದರಿಂದ ಭವಿಷ್ಯದಲ್ಲಿ ಬರಬಹುದಾದ ಭಾರಿ ಚಿಕಿತ್ಸಾ ವೆಚ್ಚಗಳಿಂದ ಪಾರಾಗಬಹುದು.
06:14 PM (IST) Jul 03
05:55 PM (IST) Jul 03
ಕರ್ನಾಟಕ ತನ್ನ ಸತ್ವ ಕಳೆದುಕೊಳ್ಳುತ್ತಿದೆಯಾ? ಮಕ್ಕಳಿಗೆ ಇದೀಗ ವಯಸ್ಸಾದ ಪೋಷಕರು ಬೇಡವಾಗುತ್ತಿದ್ದಾರೆ. ಆಸ್ಪತ್ರೆ ಸೇರಿಸಿ ಒಂದಷ್ಟು ಹಣ ಕಟ್ಟಿ ಮತ್ತೆ ತಿರುಗಿ ನೋಡುತ್ತಿಲ್ಲ. ಮನೆಯಿಂದ ಹೊರಗೆ ಹಾಕುತ್ತಿರುವುದು. ನಯವಾಗಿ ಅನಾಥಾಶ್ರಮ ಸೇರಿಸುತ್ತಿರುವ ಪ್ರಕರಣ ಹೆಚ್ಚಾಗುತ್ತಿದೆ.
05:47 PM (IST) Jul 03
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸಲು ಕಾಂಗ್ರೆಸ್‌ನಲ್ಲಿಯೇ ಸಂಚು ನಡೆಯುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.
05:38 PM (IST) Jul 03
ಭಾರತೀಯ ಮೂಲದ ಕೋಡರ್ ಒಬ್ಬನ ಕಾರಣಕ್ಕೆ ಈಗ ಅಮೆರಿಕಾದ ಸಿಲಿಕಾನ್ ವ್ಯಾಲಿಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಅಲ್ಲಿನ ಹೂಡಿಕೆದಾರರು, ಇಂಜಿನಿಯರ್‌ಗಳು, ಸಂಸ್ಥೆಗಳ ಸಂಸ್ಥಾಪಕರು ಹೀಗೆ ಪ್ರತಿಯೊಬ್ಬರು ಈಗ ಭಾರತೀಯ ಮೂಲದ ಕೋಡರ್ ಓರ್ವನ ಮೇಲೆ ಕಣ್ಣಿಟ್ಟಿದ್ದಾರೆ. ಅದಕ್ಕೇನು ಕಾರಣ.
05:19 PM (IST) Jul 03
ಪ್ರೆಶರ್ ಕುಕ್ಕರ್ ಇಲ್ಲದ ಮನೆ ಸದ್ಯ ಇಲ್ಲ. ಸುಲಭವಾಗಿ ಅಡುಗೆ ತಯಾರಿಗೆ ಎಲ್ಲರೂ ಕುಕ್ಕರ್ ಬಳಸುತ್ತಾರೆ. ಇದೀಗ ಕುಕ್ಕರ್ ಅಡುಗೆ ತಿಂದು ದೇಹದಲ್ಲಿ ಸೇರಿಕೊಂಡ ವಿಷಕಾರಕ ಅಂಶಗಳಿಂದ ವ್ಯಕ್ತಿ ಅಸ್ವಸ್ಥಗೊಂಡ ಘಟನೆ ನಡೆದಿದೆ.
05:18 PM (IST) Jul 03
05:09 PM (IST) Jul 03
04:28 PM (IST) Jul 03
04:26 PM (IST) Jul 03
ಬೆಂಗಳೂರಿನಲ್ಲಿ ಮಹಾರಾಷ್ಟ್ರದ ನೋಂದಣಿ ಹೊಂದಿದ ₹7.5 ಕೋಟಿ ಮೌಲ್ಯದ ಫೆರಾರಿ ಕಾರನ್ನು ಆರ್‌ಟಿಒ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ತೆರಿಗೆ ಪಾವತಿಸದೆ ಓಡಾಡುತ್ತಿದ್ದ ಕಾರಣ ₹1.78 ಕೋಟಿ ತೆರಿಗೆ, ದಂಡ ವಿಧಿಸಲಾಗಿದೆ. ಸಂಜೆಯೊಳಗೆ ಹಣ ಕಟ್ಟದಿದ್ದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ.
04:21 PM (IST) Jul 03
ಆನ್‌ಲೈನ್ ಬೆಟ್ಟಿಂಗ್‌ನಲ್ಲಿ 18 ಲಕ್ಷ ರೂಪಾಯಿಗಳನ್ನು ಕಳೆದುಕೊಂಡ 25 ವರ್ಷದ ಯುವಕ ಶಶಿಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೆದ್ದ 19ಕೋಟಿ ರೂಪಾಯಿಗಳನ್ನು ನೀಡದ ಕಾರಣ ಮತ್ತು ಪೊಲೀಸ್ ದೂರಿನಿಂದ ಯಾವುದೇ ಪ್ರಯೋಜನವಾಗದ ಕಾರಣ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
04:15 PM (IST) Jul 03
ದರ್ಶನ್ ತಂದೆ ಕನ್ನಡ ಚಿತ್ರರಂಗ ಕಂಡ ಅದ್ಭುತ ನಟರಲ್ಲಿ ಒಬ್ರು. ಮೂರು ದಶಕಗಳ ಕಾಲ ಕನ್ನಡ ಸಿನಿಮಾಗಳಲ್ಲಿ ಬಹುಬೇಡಿಕೆಯ ನಟನಾಗಿದ್ದವರು. ಅದ್ರಲ್ಲೂ ಖಳನಟನ ಪಾತ್ರದಲ್ಲಿ ತೂಗುದೀಪ ಶ್ರೀನಿವಾಸ್ಗೆ ಸರಿಸಾಟಿಯೇ ಇಲ್ಲ. ಇದೀಗ ದರ್ಶನ್ ಮಗ ಸಿನಿಮಾ ನಟ ಆಗೋ ಹಾದಿಯಲ್ಲಿ ಇದಾರೆ ಎನ್ನಬಹುದು.
04:15 PM (IST) Jul 03