Published : Jun 22, 2025, 07:13 AM ISTUpdated : Jun 23, 2025, 12:03 AM IST

Karnataka News Live: ಭವಿಷ್ಯ ಭಾರತದ ನಾಯಕ, ಬಡವರ ಪರ ಧ್ವನಿ ಎತ್ತುವ ರಾಹುಲ್ ಗಾಂಧಿಯವರ ಕೈ ಬಲಪಡಿಸಿ - ಲತಾ ಮಲ್ಲಿಕಾರ್ಜುನ

ಸಾರಾಂಶ

ಬೆಂಗಳೂರು: ನೀವು ಪಕ್ಷದಲ್ಲಿ ಸಕ್ರಿಯರಾಗಿದ್ದುಕೊಂಡು ರಾಜ್ಯ ನಾಯಕರಿಗೆ ಮಾರ್ಗದರ್ಶನ ಮಾಡಬೇಕೆಂದು ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿಯ ಪ್ರಭಾವಿ ರಾಷ್ಟ್ರೀಯ ನಾಯಕ ಅಮಿತ್ ಶಾ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಸಲಹೆ ನೀಡಿದ್ದಾರೆ. ಬೆಂಗಳೂರಿಗೆ ಆಗಮಿಸಿದ ಅಮಿತ್ ಶಾ ಅವರೊಂದಿಗೆ ಯಡಿಯೂರಪ್ಪ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿದರು. ಈ ವೇಳೆ ಪಕ್ಷದಲ್ಲಿನ ಬೆಳವಣಿಗೆಗಳು ಸೇರಿ ರಾಜ್ಯ ರಾಜಕಾರಣದ ಬಗ್ಗೆ ಪ್ರಸ್ತಾಪವಾಗಿದೆ. ಆಗ ಅಮಿತ್ ಶಾ ಅವರು ನೀವು ಪಕ್ಷದ ಚಟುವಟಿಕೆಗಳಿಂದ ದೂರ ಇರಬೇಡಿ. ಸಕ್ರಿಯರಾಗಿರಿ ಎಂಬ ಮಾತನ್ನು ಹೇಳಿದರು ಎನ್ನಲಾಗಿದೆ.

MP Latha mallikarjun on rahul gandhi

12:03 AM (IST) Jun 23

ಭವಿಷ್ಯ ಭಾರತದ ನಾಯಕ, ಬಡವರ ಪರ ಧ್ವನಿ ಎತ್ತುವ ರಾಹುಲ್ ಗಾಂಧಿಯವರ ಕೈ ಬಲಪಡಿಸಿ - ಲತಾ ಮಲ್ಲಿಕಾರ್ಜುನ

ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿಯವರ ಜನ್ಮದಿನಾಚರಣೆಯನ್ನು ಹರಪನಹಳ್ಳಿಯಲ್ಲಿ ಆಚರಿಸಲಾಯಿತು. ಶಾಸಕಿ ಲತಾ ಮಲ್ಲಿಕಾರ್ಜುನ್ ರಾಹುಲ್ ಗಾಂಧಿಯವರ ಹೋರಾಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Read Full Story

10:57 PM (IST) Jun 22

ಆರ್ಯನ್ ಯಾವಾಗ್ಲೂ ಮುಸ್ಲಿಂ ಆಗಿಯೇ ಗುರುತಿಸಿಕೊಳ್ಳಲು ಇಷ್ಟಪಡ್ತಾನೆ - ಗೌರಿ ಖಾನ್

ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ಮಕ್ಕಳ ಧರ್ಮದ ಬಗ್ಗೆ ಗೌರಿ ಖಾನ್ ಅವರ ಹಳೆಯ ಮಾತುಗಳು ಈಗ ವೈರಲ್ ಆಗಿವೆ. 

Read Full Story

10:15 PM (IST) Jun 22

ಬೆಂಗಳೂರಲ್ಲಿ ಜುಲೈ 26-27ರಂದು ಕುಂದಾಪ್ರ ಕನ್ನಡ ಹಬ್ಬ ಆಚರಣೆ, 2 ದಿನಗಳ ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ

ಜುಲೈ ೨೬ ಮತ್ತು ೨೭ ರಂದು ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್‌ನಲ್ಲಿ 'ಕುಂದಾಪ್ರ ಕನ್ನಡ ಹಬ್ಬ-೨೦೨೫' ನಡೆಯಲಿದೆ. ಕಾರ್ಯಕ್ರಮದಲ್ಲಿ ಯಕ್ಷಗಾನ, ಸಂಗೀತ, ನೃತ್ಯ, ಕ್ರೀಡೆಗಳು ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮಗಳು ಇರಲಿವೆ. ಕುಂದಾಪುರ ಮೂಲದ ಸಾಧಕರನ್ನು ಸನ್ಮಾನಿಸಲಾಗುವುದು.
Read Full Story

09:30 PM (IST) Jun 22

ಸಲ್ಮಾನ್ ಖಾನ್ ಅವರ ತೇರೆ ನಾಮ್ ಲುಕ್ ಗೆ ಎಪಿಜೆ ಅಬ್ದುಲ್ ಕಲಾಂ ಪ್ರೇರಣೆ!

ಕಪಿಲ್ ಶರ್ಮಾ ಅವರೊಂದಿಗಿನ ಮಾತುಕತೆಯ ಸಮಯದಲ್ಲಿ, ಸಲ್ಮಾನ್ ಖಾನ್ ತಮ್ಮ ಐಕಾನಿಕ್ ತೇರೆ ನಾಮ್ ಲುಕ್‌ನ ಹಿಂದಿನ ನಿಜವಾದ ಸ್ಫೂರ್ತಿ ಯಾರು ಎಂದು ಬಹಿರಂಗಪಡಿಸಿದರು.

Read Full Story

08:44 PM (IST) Jun 22

ಉದ್ಯಮಿಯಿಂದ 1 ವರ್ಷದ ಮಗಳಿಗೆ ರೋಲ್ಸ್ ರಾಯ್ಸ್ ಕಾರು - 17 ವರ್ಷ ಬಳಸಲಾಗದ ಗಿಫ್ಟ್ ಈಗೇಕೆ ಎಂದ ನೆಟ್ಟಿಗರು

ದುಬೈ ಮೂಲದ ಭಾರತೀಯ ಉದ್ಯಮಿ ಸತೀಶ್ ಸನ್‌ಪಾಲ್ ತಮ್ಮ ಒಂದು ವರ್ಷದ ಮಗಳಿಗೆ ಪಿಂಕ್ ಬಣ್ಣದ ರೋಲ್ಸ್ ರಾಯ್ಸ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Read Full Story

08:44 PM (IST) Jun 22

ಒಂದು ದಿನವೂ ಕೆಲಸ ಮಾಡ್ದೇ ಇದ್ದರೂ ಉದ್ಯೋಗಿಗೆ 26 ಲಕ್ಷ ರೂ. ಸಂಬಳ! ಸಿಬ್ಬಂದಿಗೆ ಹೊಡೆಯಿತು ಲಾಟರಿ

ಸರಿಯಾಗಿ ಕೆಲಸ ಮಾಡಿದವರಿಗೆ ಸಂಬಳ ಕೊಡುವುದು ಕಷ್ಟವಾಗಿರುವ ಈ ಕಾಲದಲ್ಲಿ ಕೆಲಸವೇ ಮಾಡದ ಉದ್ಯೋಗಿಗೆ 26 ಲಕ್ಷ ರೂಪಾಯಿಗಳನ್ನು ನೀಡಿದೆ. ಏನಪ್ಪಾ ಸಮಾಚಾರ ನೋಡಿ!

 

Read Full Story

08:09 PM (IST) Jun 22

ರಾಯಚೂರಿಗೆ ನಾಳೆ ಸಿಎಂ ಸಿದ್ದರಾಮಯ್ಯ ಆಗಮನ - ಭರ್ಜರಿ ಸಮಾರಂಭಕ್ಕೆ ಸಕಲ ಸಿದ್ಧತೆ!

ಜೂನ್ 23 ರಂದು ಸಿಎಂ ಸಿದ್ದರಾಮಯ್ಯ ರಾಯಚೂರು ಜಿಲ್ಲೆಯ ಯರಗೇರಾಕ್ಕೆ ಭೇಟಿ ನೀಡಲಿದ್ದು, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಲಯದ ನಾಮಫಲಕ ಅನಾವರಣ ಮತ್ತು ಬುಡಕಟ್ಟು ಸಾಂಸ್ಕೃತಿಕ ಉತ್ಸವದ ಉದ್ಘಾಟನೆ ಕೂಡ ನಡೆಯಲಿದೆ.
Read Full Story

08:00 PM (IST) Jun 22

ಚೀನಾದ ಒಂದು ನಿರ್ಧಾರದಿಂದ ಭಾರತದಲ್ಲಿ 21,000 ಕ್ಕೂ ಹೆಚ್ಚು ಆಡಿಯೋ ಎಲೆಕ್ಟ್ರಾನಿಕ್ಸ್ ಉದ್ಯೋಗಗಳಿಗೆ ಸಂಕಷ್ಟ!

ಚೀನಾದ ಅಪರೂಪದ ಭೂಮಿಯ ಲೋಹಗಳ ರಫ್ತಿ ನಿರ್ಬಂಧದಿಂದ ಭಾರತದ ಆಡಿಯೋ ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಸುಮಾರು 21,000 ಉದ್ಯೋಗಗಳು ಅಪಾಯದಲ್ಲಿವೆ. ಈ ನಿರ್ಬಂಧವು ಮ್ಯಾಗ್ನೆಟ್‌ಗಳ ಪೂರೈಕೆಯನ್ನು ಅಡ್ಡಿಪಡಿಸುತ್ತಿದೆ, ಇದು ಗ್ರಾಹಕ ಎಲೆಕ್ಟ್ರಾನಿಕ್ಸ್‌ಗಳಿಗೆ ಅತ್ಯಗತ್ಯ.
Read Full Story

06:59 PM (IST) Jun 22

ಕೌಟುಂಬಿಕ ಕಲಹ - She Hulk ಎಂದೇ ಫೇಮಸ್ ಆಗಿದ್ದ ಮಹಿಳಾ ಬಾಡಿ ಬಿಲ್ಡರ್‌ ಇನ್ನಿಲ್ಲ

ಕೊಲಂಬಿಯಾ ಮೂಲದ ಮಹಿಳಾ ಬಾಡಿಬಿಲ್ಡರ್, ಶಿ ಹಲ್ಕ್ ಎಂದೇ ಫೇಮಸ್ ಆಗಿದ್ದ, ಜುನಿಲ್ಡಾ ಹೊಯೊಸ್ ಮೆಂಡೆಜ್ ಶವವಾಗಿ ಪತ್ತೆಯಾಗಿದ್ದಾರೆ.

Read Full Story

06:37 PM (IST) Jun 22

ಟೆಲಿಕಾಂ ನೀತಿ ಸಡಿಲಿಕೆಯಿಂದ ವಿದೇಶಿ ಕಂಪೆನಿಗಳ ಪ್ರಾಬಲ್ಯ, ಭಾರತೀಯ ಸಂಸ್ಥೆಗೆ ಅಪಾಯ - ಜಿಟಿಆರ್‌ಐ ಎಚ್ಚರಿಕೆ

ದೂರಸಂಪರ್ಕ ವಲಯದ ಸಾರ್ವಜನಿಕ ಖರೀದಿ ಆದೇಶದಲ್ಲಿ ಸ್ಥಳೀಯ ವಿಷಯ ನಿಯಮಗಳ ಸಡಿಲಿಕೆ ಭಾರತೀಯ ತಯಾರಕರಿಗೆ ಹಿನ್ನಡೆಯಾಗಬಹುದು ಎಂದು GTRI ವರದಿ ಎಚ್ಚರಿಸಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಇದು ಲಾಭದಾಯಕವಾಗಬಹುದು. ಈ ನಡೆ  ಸ್ಥಳೀಕರಣಕ್ಕೆ ಹಾನಿಕರ ಮತ್ತು ವಿದೇಶಿ ಅವಲಂಬನೆಗೆ ದಾರಿ ಮಾಡಿಕೊಡಬಹುದು.

Read Full Story

06:15 PM (IST) Jun 22

₹550 ಬೆಲೆಯ ಬ್ಯಾಗ್ ಕೇವಲ ₹50ಕ್ಕೆ ಖರೀದಿ! ವಿದೇಶಿಗನ ಚೌಕಾಸಿ ವಿಡಿಯೋ ವೈರಲ್

ವಿದೇಶಿ ಯುವಕನೊಬ್ಬ ಭಾರತೀಯ ಅಂಗಡಿಯಲ್ಲಿ ಬೆಲೆ ಚೌಕಾಸಿ ಮಾಡುವ ವಿಡಿಯೋ ವೈರಲ್ ಆಗಿದೆ. ₹550 ಬೆಲೆಯ ವಸ್ತುವನ್ನು ಕೇವಲ ₹50 ಕ್ಕೆ ಪಡೆದು ವ್ಯಾಪಾರಿಗಳಿಗೆ ಪಾಠ ಕಲಿಸಿದ್ದಾನೆ. ಈ ಚೌಕಾಸಿ ಜಾಣ್ಮೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
Read Full Story

06:11 PM (IST) Jun 22

ಶಾಂತಿ ಮರಸ್ಥಾಪಿಸುವಲ್ಲಿ ಭಾರತ ಧ್ವನಿ ಮುಖ್ಯ, ಮೋದಿಗೆ ಧನ್ಯವಾದ ತಿಳಿಸಿದ ಇರಾನ್

ಶಾಂತಿ ಮರುಸ್ಥಾಪಿಸುವ ನಿಟ್ಟಿನಲ್ಲಿ ಭಾರತದ ಧ್ವನಿ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಇರಾನ್ ಅಧ್ಯಕ್ಷರು ಹೇಳಿದ್ದಾರೆ. ಮೋದಿ ಕರೆ ಹಾಗೂ ಮಾತುಕತೆಗೆ ಇರಾನ್ ಧನ್ಯವಾದ ಹೇಳಿದೆ.

Read Full Story

05:41 PM (IST) Jun 22

ನೀವು ಆರಂಭಿಸಿದ್ದೀರಿ, ನಾವು ಮುಗಿಸುತ್ತೇವೆ, ಟ್ರಂಪ್‌ಗೆ ವಾರ್ನಿಂಗ್ ಕೊಟ್ಟ ಇರಾನ್

ಮಿಸ್ಟರ್ ಡೋನಾಲ್ಡ್ ಟ್ರಂಪ್ ನೀವು ಯುದ್ಧ ಆರಂಭಿಸದ್ದೀರಿ, ನಾವು ಮುಗಿಸುತ್ತೇವೆ. ಇದು ಇರಾನ್ ಅಮೆರಿಕಗೆ ನೀಡಿದ ಎಚ್ಚರಿಕೆ. ಅಮೆರಿಕ ದಾಳಿಗೆ ಕೆರಳಿರುವ ಇರಾನ್ ವಾರ್ನಿಂಗ್ ನೀಡಿದೆ.

Read Full Story

05:33 PM (IST) Jun 22

ಕಾರು ಹತ್ತಿಸಿದ್ದಕ್ಕೆ ನಾಯಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಚಾಲಕನ ವಿಡಿಯೋ ವೈರಲ್!

ರಸ್ತೆ ಬದಿಯಲ್ಲಿ ಮಲಗಿದ್ದ ನಾಯಿಯ ಮೇಲೆ ಕಾರು ಹರಿಸಿದ ಚಾಲಕ, ತಪ್ಪಿತಸ್ಥ ಮನೋಭಾವನೆಯಿಂದ ನಾಯಿಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ ವಿಡಿಯೋ ವೈರಲ್ ಆಗಿದೆ. ಈ ಘಟನೆಯ ಬೆನ್ನಲ್ಲಿಯೇ ಇವನೇ ನಿಜವಾದ ಮಾನವೀಯ ವ್ಯಕ್ತಿ ಎಂದು ವಿಡಿಯೋ ವೈರಲ್ ಮಾಡಿದ್ದಾರೆ.

Read Full Story

05:16 PM (IST) Jun 22

ದಕ್ಷಿಣ ಭಾರತದ ಪಾಕಶೈಲಿಗೆ ಗಣನೀಯ ಬೇಡಿಕೆ, ಅಡುಗೆಯವರ ಕೊರತೆ, ಯಂತ್ರದ ಮೊರೆ ಹೋದ ಬೆಂಗಳೂರು ಹೊಟೇಲ್‌ಗಳು

ದಕ್ಷಿಣ ಭಾರತೀಯ ಪಾಕಪದ್ಧತಿಯ ಬೇಡಿಕೆ ಹೆಚ್ಚುತ್ತಿರುವ ಹೊತ್ತಿನಲ್ಲಿ ಅಡುಗೆಯವರ ಕೊರತೆ ಎದುರಾಗಿದೆ. ಹೋಟೆಲ್ ಉದ್ಯಮ ಯಾಂತ್ರೀಕರಣದತ್ತ ಮುಖಮಾಡುತ್ತಿದ್ದು, ವಡೆ, ಪೊಂಗಲ್ ತಯಾರಿಕೆಯ ಯಂತ್ರಗಳು ಈಗಾಗಲೇ ಬಳಕೆಯಲ್ಲಿವೆ. ಆದರೆ, ಮೈಸೂರು ಪಾಕ್‌ನಂತಹ ಸೂಕ್ಷ್ಮ ಖಾದ್ಯಗಳಿಗೆ ಮಾನವ ಸ್ಪರ್ಶ ಇನ್ನೂ ಅನಿವಾರ್ಯ.
Read Full Story

05:03 PM (IST) Jun 22

ಗೋವಾ ಬೀಚ್‌ನಲ್ಲಿ ಅತ್ಯಂತ ವಿಷಕಾರಿ ಸಮುದ್ರ ಹಾವು ಪತ್ತೆ

ಗೋವಾದ ಬೀಚ್‌ವೊಂದರಲ್ಲಿ ವಿಷಕಾರಿ ಸಮುದ್ರ ಹಾವೊಂದು ಪತ್ತೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

04:55 PM (IST) Jun 22

ಬೆಂಗಳೂರು ರಸ್ತೆಯಲ್ಲಿ ಜೋಡಿ ಹಕ್ಕಿಯ ಸ್ಟಂಟ್ಸ್, ವಿಡಿಯೋ ವೈರಲ್ ಬೆನ್ನಲ್ಲೇ ಸಂಕಷ್ಟ

ಬೆಂಗಳೂರಿನ ರಸ್ತೆಯಲ್ಲಿ ಜೋಡಿಯೊಂದು ಸ್ಕೂಟರ್ ಮೂಲಕ ಸ್ಟಂಟ್ ಮಾಡಿದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಇತರ ವಾಹನಗಳ ನಡುವೆ ಈ ಜೋಡಿ ಮಾಡಿದ ಸ್ಟಂಟ್ ನಿಯಮ ಉಲ್ಲಂಘಿಸಿದೆ.

Read Full Story

04:54 PM (IST) Jun 22

ಗಾಯತ್ರಿ ಮಂತ್ರ ಭಾರತದಲ್ಲಷ್ಟೇ ಅಲ್ಲ, ಈ ದೇಶಗಳಲ್ಲೂ ನಿತ್ಯ ಪಠಿಸಲಾಗುತ್ತೆ!

ಹಿಂದೂ ಧರ್ಮದ ಪ್ರಮುಖ ವೇದ ಮಂತ್ರ ಗಾಯತ್ರಿ ಮಂತ್ರವು ಭಾರತದ ಗಡಿಯನ್ನು ದಾಟಿ ವಿಶ್ವದಾದ್ಯಂತ ಪಠಿಸಲ್ಪಡುತ್ತಿದೆ. ನೇಪಾಳ, ಮಾರಿಷಸ್, ಇಂಡೋನೇಷ್ಯಾ ಮುಂತಾದ ದೇಶಗಳಲ್ಲಿ ಧ್ಯಾನ ಮತ್ತು ಪೂಜಾ ವಿಧಿಗಳಲ್ಲಿ ಬಳಕೆಯಾಗುತ್ತಿದೆ. ಋಗ್ವೇದದಿಂದ ಉದ್ಭವಿಸಿದ ಈ ಮಂತ್ರ ಋಷಿ ವಿಶ್ವಾಮಿತ್ರರಿಂದ ರಚಿತವಾಗಿದೆ.
Read Full Story

04:47 PM (IST) Jun 22

10 ತಿಂಗಳ ಹಸುಗೂಸು ಸೇರಿ 19 ಜನರ ಸಾಮೂಹಿಕ ಸಮಾಧಿ ಪತ್ತೆ! ತನಿಖೆಗೆ ಸರ್ಕಾರ ಹಿಂದೇಟು

10 ತಿಂಗಳ ಹಸುಗೂಸು ಸೇರಿದಂತೆ 19 ಜನರ ಸಾಮೂಹಿಕ ಸಮಾಧಿ ಮಾಡಿರುವ ಜಾಗವೊಂದು ಪತ್ತೆಯಾಗಿದೆ. ಆಂತರಿಕ ಯುದ್ಧದ ಸಮಯದಲ್ಲಿ ದೇಶದ ಸೈನಿಕರಿಂದ ಕೊಲ್ಲಲ್ಪಟ್ಟವರ ಸಮಾಧಿ ಎಂದು ಶಂಕಿಸಲಾಗಿದೆ. ಈ ಬಗ್ಗೆ ತನಿಖೆ ಮಾಡುವುದಕ್ಕೆ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಆರೋಪ ಕೇಳಿಬಂದಿದೆ.

Read Full Story

04:31 PM (IST) Jun 22

ಗೋಕರ್ಣದಲ್ಲಿ ಮತಾಂತರ ಯತ್ನ - ಬಡಜನರಿಗೆ ಧಾರ್ಮಿಕ ಭೋದನೆ ನೆಪದಲ್ಲಿ ಹಣದ ಆಮಿಷ

ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಧಾರ್ಮಿಕ ಪ್ರಭೋದನೆ ಹೆಸರಿನಲ್ಲಿ ಬಡವರ ಮತಾಂತರಕ್ಕೆ ಯತ್ನ ನಡೆದಿದೆ. ಹಣದ ಆಮಿಷವೊಡ್ಡಿ ಮತಾಂತರ ಮಾಡಲು ಯತ್ನಿಸಿದವರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಗೆ ಸ್ಥಳೀಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Read Full Story

04:25 PM (IST) Jun 22

ಗೌತಮಿ ಜಾದವ್, ಐಶ್ವರ್ಯ ಸಿಂಧೋಗಿಗೆ ಇಲ್ಲದ ರೂಲ್ಸ್ ಭವ್ಯಾ ಗೌಡನಿಗೆ ಯಾಕೆ… ಫ್ಯಾನ್ಸ್ ಪ್ರಶ್ನೆ!

ಭವ್ಯಾ ಗೌಡ ಅಗ್ರಿಮೆಂಟ್ ಕಾರಣದಿಂದಾಗಿ ಕರ್ಣ ಸೀರಿಯಲ್ ಪ್ರಸಾರಕ್ಕೆ ತಡೆಯಾಗಿದ್ದು, ಅಭಿಮಾನಿಗಳು ಗೌತಮಿ ಜಾದವ್, ಐಶ್ವರ್ಯ ಸಿಂಧೋಗಿಗೆ ಇಲ್ಲದ ರೂಲ್ಸ್ ಭವ್ಯಾ ಗೌಡಗೆ ಯಾಕೆ ಎಂದು ಪ್ರಶ್ನಿಸಿದ್ದಾರೆ.

 

Read Full Story

04:21 PM (IST) Jun 22

ಸಂಕ್ರಾಂತಿ ಬಳಿಕ ರಾಜಕೀಯ ವಿಫ್ಲವ; ರಾಜ್ಯಕ್ಕೂ ದೇಶಕ್ಕೂ ಕಂಟಕ - ಕೋಡಿಶ್ರೀ ಸ್ಫೋಟಕ ಭವಿಷ್ಯ!

ರಾಜ್ಯದಲ್ಲಿ ಸಂಕ್ರಾಂತಿ ಬಳಿಕ ರಾಜಕೀಯ ಬದಲಾವಣೆಗಳಾಗಲಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹಾರನಹಳ್ಳಿ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ದುಃಖ, ಯುದ್ಧ, ಮತ್ತು ಅರಸನಾಲಯಕ್ಕೆ ಕಾರ್ಮೋಡ ಕವಿಯುವ ಬಗ್ಗೆಯೂ ಎಚ್ಚರಿಸಿದ್ದಾರೆ.
Read Full Story

04:13 PM (IST) Jun 22

ಕುಡುಕರನ್ನೆಲ್ಲಾ ಚೆಸ್ ಆಟದತ್ತ ತಿರುಗಿಸಿ ಗ್ರಾಮದ ಚಿತ್ರಣವನ್ನೇ ಬದಲಿಸಿದ ಮಾಸ್ಟರ್‌ - ಕೇರಳದ ರೋಚಕ ಕತೆ ಇದು

ಕುಡುಕರಿಂದಲೇ ತುಂಬಿದ್ದ ಕೇರಳದ ಗ್ರಾಮವೊಂದು ಇಂದು ಚಟ ಮುಕ್ತವಾಗಿದೆ. ಇದಕ್ಕೆ ಕಾರಣವಾಗಿದ್ದು, ಮದ್ಯವರ್ಜನ ಶಿಬಿರವಲ್ಲ, ಬದಲಾಗಿ ಚೆಸ್ ಆಟ. ಆಶ್ಚರ್ಯವಾದರು ಇದು ನಿಜ ಈ ಆಸಕ್ತಿಕರ ಸ್ಟೋರಿ ಓದಿ

Read Full Story

03:49 PM (IST) Jun 22

ಸುಳ್ಳು ಸುದ್ದಿಗೆ 7 ವರ್ಷ ಸೆರೆಮನೆ 10 ಲಕ್ಷ ದಂಡ, ತಪ್ಪು ಮಾಹಿತಿಗೂ ಜೈಲು ಶಿಕ್ಷೆ - ಮಸೂದೆ ಮಂಡಿಸಿದ ಕರ್ನಾಟಕ!

ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಂಚುವವರಿಗೆ ಕರ್ನಾಟಕ ಸರ್ಕಾರ 7 ವರ್ಷ ಜೈಲು ಶಿಕ್ಷೆ ವಿಧಿಸುವ ಹೊಸ ಕಾನೂನು ಜಾರಿಗೆ ತರಲು ಮುಂದಾಗಿದೆ. ಈ ಕಾನೂನು ಡಿಜಿಟಲ್ ಮಾಧ್ಯಮಗಳಿಗೂ ಅನ್ವಯಿಸುತ್ತದೆ.
Read Full Story

03:45 PM (IST) Jun 22

ಮೋಹನದಾಸ್ ಪೈ ಸೇರಿ ಬೈಕ್ ಟ್ಯಾಕ್ಸಿ ಚಾಲಕರ ವಿರುದ್ಧ ದೂರು; 10 ಜನರ ವಿರುದ್ಧ ಎಫ್‌ಐಆರ್!

ಬೈಕ್ ಟ್ಯಾಕ್ಸಿ ಚಾಲಕರ ಪ್ರತಿಭಟನೆ, ಮೋಹನ್ ದಾಸ್ ಪೈ ವಿರುದ್ಧ ದೂರು, ಮತ್ತು ನ್ಯಾಯಾಲಯದ ಆದೇಶ ಉಲ್ಲಂಘನೆ ಕುರಿತು ಘಟನಾವಳಿಗಳ ಸಂಕ್ಷಿಪ್ತ ವಿವರಣೆ. 10 ಜನ ಬೈಕ್ ಟ್ಯಾಕ್ಸಿ ಚಾಲಕರ ಮೇಲೆ ವಿಧಾನಸೌಧ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.

Read Full Story

03:44 PM (IST) Jun 22

ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಮಹತ್ವದ ಬೆಳವಣಿಗೆ, ಇರಾನ್ ಜೊತೆ ಪ್ರಧಾನಿ ಮೋದಿ ಮಾತುಕತೆ

ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧಕ್ಕೆ ಅಮೆರಿಕ ಎಂಟ್ರಿಕೊಡುವ ಮೂಲಕ ಸ್ವರೂಪ ತೀವ್ರಗೊಂಡಿದೆ. ಉದ್ವಿಘ್ನ ಪರಿಸ್ಥಿತಿಯಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಇರಾನ್ ಅಧ್ಯಕ್ಷರ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಹತ್ವದ ಸೂಚನೆಯೊಂದನ್ನು ನೀಡಿದ್ದಾರೆ.

Read Full Story

03:04 PM (IST) Jun 22

ಜಗನ್ ರೆಡ್ಡಿ ರ‍್ಯಾಲಿಯಲ್ಲಿ ಅಪಘಾತ, ವ್ಯಕ್ತಿ ಮೇಲೆ ಕಾರು ಹರಿದರೂ ಕೈಬೀಸುತ್ತಾ ಸಾಗಿದ ಮಾಜಿ ಸಿಎಂ

ಆಂಧ್ರ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಕಾರು ವ್ಯಕ್ತಿ ಮೇಲೆ ಹತ್ತಿ ಭಾರಿ ಅವಘಡ ಸಂಭವಿಸಿದೆ. ಕಿಕ್ಕಿರಿದು ತುಂಬಿದ ಜನಸಾಗರದ ನಡುವೆ ಜಗನ್ ಮೋಹನ್ ರೆಡ್ಡಿ ಕೈಬೀಸುತ್ತಾ ಸಾಗಿದರೆ, ಇತ್ತ ವ್ಯಕ್ತಿ ಕಾರಿನಡಿಗೆ ಬಿದ್ದು ಅಪ್ಪಚ್ಚಿಯಾಗಿದ್ದ. ಭಯಾನಕ ವಿಡಿಯೋ

 

Read Full Story

03:01 PM (IST) Jun 22

ಕಾವೇರಿಗೆ ಕೈಮುಗಿದು ಪೂಜೆ ಮಾಡಿ ಸ್ವಾಗತಿಸಿದ ರೈತರು - ವೀಡಿಯೋ ವೈರಲ್

ತಮಿಳುನಾಡಿನಲ್ಲಿ ಕಾವೇರಿ ನೀರು ಬಿಡುಗಡೆಯಾದ ಸಂದರ್ಭದಲ್ಲಿ ಜನ ಭಕ್ತಿಯಿಂದ ಕೈ ಮುಗಿದು ನದಿಯನ್ನು ಸ್ವಾಗತಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Read Full Story

02:10 PM (IST) Jun 22

Bengaluru ನಮ್ಮನ್ನು ಕೊಲ್ತಿದೆ, ನೀವೂ ದ್ವೇಷಿಸಿದ್ರೂ OK, ಈ ಊರು ಬಿಟ್ಟೋಗ್ತೀವಿ - ದಂಪತಿ ವಿಡಿಯೋ ವೈರಲ್

ವಿವಿಧ ಕಾರಣಕ್ಕೆ ಬೆಂಗಳೂರಿನಲ್ಲಿ ಇರಬೇಕು ಅಂತ ಜನರು ಬಯಸ್ತಾರೆ. ಬೆಂಗಳೂರಿನ ಜನಸಂಖ್ಯೆ ಜಾಸ್ತಿ ಇದೆ. ಇಲ್ಲೋರ್ವ ದಂಪತಿ ತಮ್ಮ ಆರೋಗ್ಯದ ದೃಷ್ಟಿಯಿಂದ ಬೆಂಗಳೂರು ತೊರೆಯುವ ನಿರ್ಧಾರ ಮಾಡಿದ್ದಾರೆ. 

 

Read Full Story

01:44 PM (IST) Jun 22

ಬೇಸಿಗೆ ಎಳನೀರಿನಾಸೆಗೆ ಕೊಬ್ಬರಿ ಎಣ್ಣೆ ಬೆಲೆ ಏರಿಕೆ? ₹500ಕ್ಕೆ ಒಂದು ಲೀಟರ್!

ಬೇಸಿಗೆಯಲ್ಲಿ ಎಳನೀರಿನ ಬೇಡಿಕೆ ಹೆಚ್ಚಳದಿಂದ ಕೊಬ್ಬರಿ ಕಾಯಿ ಅಭಾವ ಉಂಟಾಗಿದೆ. ಇದರಿಂದಾಗಿ ಕೊಬ್ಬರಿ ಎಣ್ಣೆಯ ಬೆಲೆಯೂ ಗಗನಕ್ಕೇರಿದೆ. ಹೊಸ ತೆಂಗಿನ ಬೆಳೆ ಬರುವವರೆಗೂ ಬೆಲೆ ಇಳಿಕೆಯಾಗುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
Read Full Story

01:31 PM (IST) Jun 22

ಮಾರಕ ರೇಬೀಸ್ ನಿಂದ ಮೊರಾಕೊ ಪ್ರವಾಸ ಹೋದ ಮಹಿಳೆ ದುರಂತ ಅಂತ್ಯ, ನಾಯಿಯನ್ನು ಮುದ್ದಿಸಿದ್ದೇ ತಪ್ಪಾಯ್ತು!

ಮೊರಾಕೊದಲ್ಲಿ ಬೀದಿ ನಾಯಿಮರಿಯ ಗೀಚಿನಿಂದ ಬ್ರಿಟನ್ ಪ್ರವಾಸಿಗ ರೇಬೀಸ್ ಸೋಂಕು ತಗುಲಿ ಮೃತಪಟ್ಟಿದ್ದಾರೆ. ಈ ಘಟನೆ ಪ್ರಯಾಣಿಕರಿಗೆ ರೇಬೀಸ್ ಬಗ್ಗೆ ಎಚ್ಚರಿಕೆ ನೀಡುತ್ತದೆ ಮತ್ತು ತಡೆಗಟ್ಟುವ ಕ್ರಮಗಳ ಮಹತ್ವವನ್ನು ಒತ್ತಿಹೇಳುತ್ತದೆ.
Read Full Story

01:17 PM (IST) Jun 22

RCB ವಿಜಯೋತ್ಸವ ದುರಂತ; IPL ತಂಡಗಳ ವಿಜಯೋತ್ಸವಕ್ಕೆ ಮಾರ್ಗಸೂಚಿ ರಚಿಸಿದ BCCI

ಐಪಿಎಲ್ ತಂಡಗಳ ವಿಜಯೋತ್ಸವಕ್ಕೆ ಬಿಸಿಸಿಐ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಆರ್‌ಸಿಬಿ ವಿಜಯೋತ್ಸವದಲ್ಲಿ ನಡೆದ ಕಾಲ್ತುಳಿತ ಘಟನೆಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಭದ್ರತೆ ಮತ್ತು ಸುರಕ್ಷತೆಗಾಗಿ ಹಲವು ಹಂತದ ಕ್ರಮಗಳನ್ನು ಕಡ್ಡಾಯಗೊಳಿಸಲಾಗಿದೆ.
Read Full Story

01:08 PM (IST) Jun 22

ಹಿಂದೂ ದೇವತೆ ಮೆಕ್ಅಪ್, ಅಸಹ್ಯ ಭಂಗಿಯಲ್ಲಿ ಶಿಲುಬೆ ಹಿಡಿದು ಅಮಾನಿಸಿದ ಸಿಂಗರ್ ವಿರುದ್ಧ ಆಕ್ರೋಶ

ಭಾರತೀಯ ಮೂಲದ ಕೆನಡಿಯನ್ ರ‍್ಯಾಪ್ ಸಿಂಗರ್ ಜೆನಿಸಿಸ್ ಯಾಸ್ಮಿನ್ ಮೋಹನ್‌ರಾಜ್ ಹೊಸ ಮ್ಯೂಸಿಕ್ ಆಲ್ಬಮ್ ತೀವ್ರ ಆಕ್ರೋಶ ಹಾಗೂ ಪ್ರತಿಭಟನೆಗೆ ಕಾರಣವಾಗಿದೆ. ಈ ಮ್ಯೂಸಿಕ್ ವಿಡಿಯೋದಲ್ಲಿ ಜೆನಿಸಿಸ್ ಹಿಂದೂ ಹಾಗೂ ಕ್ರಿಶ್ಚಿಯನ್ ಧರ್ಮಕ್ಕೆ ಅಪಮಾನ ಮಾಡಿದ್ದಾರೆ ಎಂದು ಪ್ರತಿಭಟನೆಗಳು ಜೋರಾಗುತ್ತಿದೆ.

Read Full Story

12:45 PM (IST) Jun 22

ಫುಟ್‌ಪಾತ್ ಮೇಲೆ ಅಲ್ಲ ಪ್ರಸಿದ್ದ ಸ್ಪ್ಯಾನಿಷ್ ಮೆಟ್ಟಿಲುಗಳ ಮೇಲೆ ಗಾಡಿ ಓಡಿಸಿ ಮಧ್ಯೆ ಸಿಲುಕಿದ ವೃದ್ಧ

ಸ್ಪೇನ್‌ನ ಪ್ರಸಿದ್ಧ ಸ್ಪ್ಯಾನಿಷ್ ಮೆಟ್ಟಿಲುಗಳ ಮೇಲೆ 81 ವರ್ಷದ ವೃದ್ಧನೊಬ್ಬ ಕಾರು ಚಲಾಯಿಸಿ ಸಿಲುಕಿಕೊಂಡ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

12:36 PM (IST) Jun 22

ಜಗನ್ನಾಥ ದೇವರ ರಥಯಾತ್ರೆಗೆ ಮಾಡುವ ಒರಿಯಾ ಖಿಚಡಿ ರೆಸಿಪಿ, ನಿಮ್ಮ ಮನೆಯಲ್ಲೇ ಮಾಡಿ

ಒರಿಸ್ಸಾ ಸ್ಪೆಷಲ್ ಖಿಚಡಿ: ಜಗನ್ನಾಥ ದೇವರ ರಥಯಾತ್ರೆ ಹಬ್ಬಕ್ಕೆ ಈ ವಿಶೇಷ ಖಿಚಡಿಯನ್ನು ನೈವೇದ್ಯ ಮಾಡಲಾಗುತ್ತದೆ. ಈ ರುಚಿಕರ ಖಿಚಡಿ ಮಾಡುವ ವಿಧಾನ ಇಲ್ಲಿದೆ.
Read Full Story

12:20 PM (IST) Jun 22

ಬಿಷ್ಣೋಯ್ ಬೆದರಿಕೆಯಿಂದ ಸಲ್ಮಾನ್ ಖಾನ್‌ಗೆ ಹೊಸ ಬುಲೆಟ್‌ಪ್ರೂಫ್, ನಟನ ಬಳಿ ಇರುವ ಕಾರುಗಳೆಷ್ಟು?

 ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಎದುರಿಸುತ್ತಿರುವ ಸಲ್ಮಾನ್ ಖಾನ್‌ಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಲ್ಮಾನ್ ಖಾನ್ ಇದೀಗ ಹೊಸ ಬುಲೆಟ್‌‌ಪ್ರೂಫ್ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಬೆಲೆ, ವಿಶೇಷತೆ ಏನು?

Read Full Story

12:04 PM (IST) Jun 22

AI ಮೂಲಕ ಪ್ರೇಮದ ಬಲೆ ಬೀಸುವ ಕಿಲಾಡಿಗಳು, ಇದು ಹೃದಯಗಳ ಡಿಜಿಟಲ್ ಮೋಸ!

AI ತಂತ್ರಜ್ಞಾನದಿಂದ ಸೃಷ್ಟಿಸಲಾದ ಡೀಪ್‌ಫೇಕ್‌ಗಳು ಪ್ರೇಮ ಮೋಸಗಳಿಗೆ ಹೊಸ ಆಯಾಮವನ್ನು ನೀಡುತ್ತಿವೆ. ಡೇಟಿಂಗ್ ಆ್ಯಪ್‌ಗಳಲ್ಲಿ ವಾಸ್ತವ ಮತ್ತು ಕಲ್ಪನೆಯ ನಡುವಿನ ಗೆರೆಯನ್ನು ಮಸುಕುಗೊಳಿಸುವ ಈ ಮೋಸಗಳು, ಅಮಾಯಕರನ್ನು ಲೂಟಿ ಮಾಡುವ ಉದ್ದೇಶ ಹೊಂದಿವೆ.  

Read Full Story

11:42 AM (IST) Jun 22

ಪೆಹಲ್ಗಾಂ ದಾಳಿ ಉಗ್ರರಿಗೆ ಆಶ್ರಯ ನೀಡಿದ ಇಬ್ಬರು ಅರೆಸ್ಟ್, ಸ್ಫೋಟಕ ಮಾಹಿತಿ ಬಹಿರಂಗ

ಪೆಹಲ್ಗಾಂನಲ್ಲಿ ಹಿಂದೂಗಳನ್ನು ಟಾರ್ಗೆಟ್ ಮಾಡಿದ ನಡೆಸಿದ ಉಗ್ರದಾಳಿ ಕುರಿತ ಮಹತ್ವದ ಮಾಹಿತಿ ಬಯಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಎನ್ಐಎ ಇಬ್ಬರನ್ನು ಬಂಧಿಸಿದೆ. ಬಂಧಿತರಿಂದ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

Read Full Story

11:19 AM (IST) Jun 22

ಬೆಂಗಳೂರು - ಮೂವರು ಹೆಣ್ಣು ಮಕ್ಕಳ ಕಾಲೇಜು ಶುಲ್ಕಕ್ಕೆ ಸಾಲ ಮಾಡಿ ಇಟ್ಟಿದ್ದ ಹಣ ಕಳ್ಳತನ!

ಬೆಂಗಳೂರು ಪ್ಯಾಲೇಸ್ ಆವರಣದಲ್ಲಿ ವಾಸಿಸುವ ಶ್ರೀನಿವಾಸ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದ್ದು, ಮೂವರು ಹೆಣ್ಣುಮಕ್ಕಳ ಕಾಲೇಜು ಶುಲ್ಕಕ್ಕೆ ಸಾಲ ಮಾಡಿ ಇಟ್ಟಿದ್ದ 65 ಸಾವಿರ ರೂಪಾಯಿ ಹಾಗೂ 5 ಗ್ರಾಂ ಚಿನ್ನಾಭರಣವನ್ನು ಕಳ್ಳರು ದೋಚಿದ್ದಾರೆ. ಸದಾಶಿವನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story

10:55 AM (IST) Jun 22

ಪ್ರತಿಯೊಬ್ಬ ಅಮೆರಿಕ ಪ್ರಜೆ ಟಾರ್ಗೆಟ್, ಇರಾನ್‌ನಲ್ಲಿ ಮೊಳಗಿದ ಘೋಷವಾಕ್ಯ

ಇರಾನ್ ಇಸ್ರೇಲ್ ಯುದ್ಧದ ನಡುವೆ ಅಮೆರಿಕದ ಎಂಟ್ರಿ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಇರಾನ್ ನ್ಯೂಕ್ಲಿಯರ್ ಸ್ಥಾವರದ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದೆ. ಇದರಿಂದ ಕೆರಳಿರುವ ಇರಾನ್, ಪ್ರತಿಯೊಬ್ಬ ಅಮೆರಿಕ ಪ್ರಜೆ, ಪ್ರತಿಯೊಬ್ಬ ಅಮೆರಿಕ ಯೋಧ ನಮ್ಮ ಟಾರ್ಗೆಟ್ ಅನ್ನೋ ಘೋಷವಾಕ್ಯ ಮೊಳಗಿದೆ.

Read Full Story

More Trending News