LIVE NOW
Published : Oct 02, 2026, 06:57 AM ISTUpdated : Oct 02, 2026, 08:11 AM IST

Karnataka News Live: Chikkaballapura - ರಾಷ್ಟ್ರಮಟ್ಟದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಸಾಧನೆ; 1,242 ಹಳ್ಳಿಗಳಲ್ಲಿ ಸದ್ದಿಲ್ಲದೆ ನಡೆಯಿತು ಕ್ರಾಂತಿ!

ಸಾರಾಂಶ

ಮಂಗಳೂರು: ಉಜಿರೆ ಪಾಂಗಳದ ಸೌಜನ್ಯ ಅತ್ಯಾ*ಚಾರ ಮತ್ತು ಕೊ*ಲೆ ಪ್ರಕರಣದ ಮರುತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶದಂತೆ ರಚನೆಗೊಂಡ ವಿಶೇಷ ತನಿಖಾ ದಳ (ಎಸ್‌ಐಟಿ) ಗುರುವಾರ ಅಧಿಕೃತವಾಗಿ ಕಾರ್ಯಾರಂಭಿಸಿದೆ. ಮಂಗಳೂರಿನ ಹಳೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎಸ್‌ಐಟಿ ಕಚೇರಿ ತೆರೆಯಲಾಗಿದ್ದು, ಸಿಬ್ಬಂದಿ ಕಚೇರಿಗೆ ಆಗಮಿಸಿ ಅಗತ್ಯ ಸಿದ್ಧತೆಗಳನ್ನು ಕೈಗೊಂಡರು. ಎಸ್‌ಐಟಿ ತಂಡದ ಸದಸ್ಯರಾದ ರಾಜ್ಯ ಗುಪ್ತಚರ ವಿಭಾಗದ ಎಸ್‌ಪಿ ನಿಶಾ ಜೇಮ್ಸ್ ಹಾಗೂ ಸಿಐಡಿ ಎಸ್‌ಪಿ ಲೋಕೇಶ್ ಜಗಲಸಾರ್ ಗುರುವಾರ ಬೆಳಗ್ಗೆ ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದರು. 

ಬಳಿಕ ಮಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಎಸ್‌ಐಟಿ ಸದಸ್ಯ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಭೇಟಿ ಮಾಡಿ ಪ್ರಕರಣದ ಕುರಿತು ಚರ್ಚಿಸಿದರು. ಸುಪ್ರೀಂಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಐಜಿಪಿ ಎನ್. ಶಶಿಕುಮಾರ್ ನೇತೃತ್ವದಲ್ಲಿ ಐವರು ಸದಸ್ಯರ ಎಸ್‌ಐಟಿ ರಚಿಸಿದೆ. 3 ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಬೇಕಾಗಿದೆ.

08:11 AM (IST) Oct 02

Chikkaballapura - ರಾಷ್ಟ್ರಮಟ್ಟದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಸಾಧನೆ; 1,242 ಹಳ್ಳಿಗಳಲ್ಲಿ ಸದ್ದಿಲ್ಲದೆ ನಡೆಯಿತು ಕ್ರಾಂತಿ!

ಚಿಕ್ಕಬಳ್ಳಾಪುರ ಜಿಲ್ಲೆಯ 1,528 ಗ್ರಾಮಗಳ ಪೈಕಿ 1,242 ಗ್ರಾಮಗಳು ಬಾಲ್ಯ ವಿವಾಹ ಮತ್ತು ಬಾಲಗರ್ಭಿಣಿ ಮುಕ್ತ ಎಂದು ಘೋಷಣೆಯಾಗಿವೆ. ಕೇಂದ್ರ ಸರ್ಕಾರದ ಮಾರ್ಗದರ್ಶನದಂತೆ ನಡೆದ ಸರ್ವೇಯಲ್ಲಿ ಈ ಐತಿಹಾಸಿಕ ಸಾಧನೆ ದೃಢಪಟ್ಟಿದೆ. ಗಾಂಧಿ ಜಯಂತಿಯಂದು ಈ ಸಾಧನೆ ಮಾಡಿದ ಗ್ರಾಮಗಳಿಗೆ ಅಧಿಕೃತ ಪ್ರಮಾಣಪತ್ರ ವಿತರಿಸಲಾಗುತ್ತಿದೆ.

Read Full Story

08:06 AM (IST) Oct 02

Mandya - 24 ಎಕರೆ ಜಾಗ ಕಬಳಿಕೆ ಗುಟ್ಟು ರಟ್ಟು; 18 ಖಾಸಗಿ ಕಟ್ಟಡ, ತಮಿಳು ಕಾಲೋನಿ!

ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಸೇರಿದ 24 ಎಕರೆಗೂ ಹೆಚ್ಚು ಭೂಮಿ ಒತ್ತುವರಿಯಾಗಿದೆ ಎಂದು ತನಿಖಾ ಸಮಿತಿ ವರದಿ ಬಹಿರಂಗಪಡಿಸಿದೆ. ಈ ಜಾಗದಲ್ಲಿ ಖಾಸಗಿ ಕಟ್ಟಡಗಳು ಹಾಗೂ ವಸತಿ ಪ್ರದೇಶಗಳು ನಿರ್ಮಾಣವಾಗಿದ್ದು, ಅಕ್ರಮ ಖಾತೆಗಳನ್ನು ರದ್ದುಪಡಿಸಿ ತೆರವುಗೊಳಿಸಲು ಸಮಿತಿ ಶಿಫಾರಸು ಮಾಡಿದೆ.
Read Full Story

08:04 AM (IST) Oct 02

ಜಮೀನು ವಿಚಾರಕ್ಕೆ ಸಹಾಯ ಕೇಳಿದ ಮಹಿಳೆಯನ್ನ ಮನೆಗೆ ಕರೆಸಿಕೊಂಡ ಅಧಿಕಾರಿ,, ಹಣ್ಣಿನ ರಸ ನೀಡಿ ಮಾಡಿದ್ದೇನು?

ಜಮೀನಿನ ಸಹಾಯ ಕೇಳಿ ಬಂದ ಮಹಿಳೆಗೆ ಅಮಲೇರುವ ಔಷಧ ಕುಡಿಸಿ ಅತ್ಯಾಚಾರವೆಸಗಿದ ಆರೋಪದ ಮೇಲೆ ಗೊಂಡೇನಹಳ್ಳಿ ಗ್ರಾಮ ಆಡಳಿತಾಧಿಕಾರಿ ಮರಿಸ್ವಾಮಿಯನ್ನು ಬಂಧಿಸಲಾಗಿದೆ. ಈ ಕ್ರಿಮಿನಲ್ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಆತನನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
Read Full Story

07:49 AM (IST) Oct 02

ಯಲ್ಲಾಪುರದ 5 ಆಯುಷ್ಮಾನ್ ಆರೋಗ್ಯ ಕೇಂದ್ರ ಮುಚ್ಚಲು ಆದೇಶ - ಸ್ಥಳೀಯರಿಂದ ವಿರೋಧ ವ್ಯಕ್ತ

ಯಲ್ಲಾಪುರ ಪಟ್ಟಣದಲ್ಲಿರುವ 5 ಆಯುಷ್ಮಾನ್‌ ಆರೋಗ್ಯ ಕೇಂದ್ರಗಳನ್ನು ಮುಚ್ಚಲು ಸರ್ಕಾರ ಆದೇಶಿಸಿದೆ. ರೋಗಿಗಳ ಕೊರತೆ ಮತ್ತು ಆರ್ಥಿಕ ಹೊರೆಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಕೆಲವು ಸ್ಥಳೀಯರು ಮತ್ತು ರಾಜಕೀಯ ಮುಖಂಡರು ಈ ಕ್ರಮವನ್ನು ವಿರೋಧಿಸುತ್ತಿದ್ದಾರೆ.
Read Full Story

07:35 AM (IST) Oct 02

ಆಲಮಟ್ಟಿ ನಿಲ್ದಾಣಕ್ಕೆ ಅಂಡರ್‌ಪಾಸ್; ಬೇನಾಳ, ವಂದಾಲದಲ್ಲಿ ಮೂಲಸೌಕರ್ಯಕ್ಕೆ ಮನವಿ ಸಲ್ಲಿಕೆ

ಆಲಮಟ್ಟಿ, ಬೇನಾಳ ಮತ್ತು ವಂದಾಲ ರೈಲ್ವೆ ನಿಲ್ದಾಣಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ನೈಋತ್ಯ ರೈಲ್ವೆ ಜಿಎಂಗೆ ಮನವಿ ಸಲ್ಲಿಸಲಾಗಿದೆ. ಆಲಮಟ್ಟಿಯಲ್ಲಿ ಅಂಡರ್‌ ಪಾಸ್ ನಿರ್ಮಾಣ ಹಾಗೂ ಪ್ರಮುಖ ರೈಲುಗಳಿಗೆ ನಿಲುಗಡೆ ಕಲ್ಪಿಸುವಂತೆ ನಿಯೋಗ ಒತ್ತಾಯಿಸಿದೆ.
Read Full Story

07:32 AM (IST) Oct 02

56 ವರ್ಷಗಳ ಬಳಿಕ ರಾಜ್ಯಕ್ಕೆ ಎದುರಾಯ್ತು ಆತಂಕ - ಮಳೆಗಾಲದಲ್ಲೇ ಉರಿಬಿಸಿಲು ನೀರಿಗೆ ಹಾಹಾಕಾರ! ತಜ್ಞರು ಹೇಳಿದ್ದೇನು?

ರಾಜ್ಯದಲ್ಲಿ ಕಳೆದ 56 ವರ್ಷಗಳಲ್ಲೇ ಅತಿ ಹೆಚ್ಚು ಅಂದರೆ ಶೇ.34ರಷ್ಟು ಮುಂಗಾರು ಮಳೆ ಕೊರತೆಯಾಗಿದೆ. ಇದರಿಂದ ಶೇ.90ರಷ್ಟು ತಾಲೂಕುಗಳು ಬರಪೀಡಿತವಾಗಿದ್ದು, ಆಹಾರ ಧಾನ್ಯಗಳ ಉತ್ಪಾದನೆ ಕುಸಿಯುವ ಆತಂಕ ಎದುರಾಗಿದೆ. ಎಲ್ ನೀನೋ ಪ್ರಭಾವದಿಂದ ತಾಪಮಾನ ಹೆಚ್ಚಾಗಿ, ಜಲಾಶಯಗಳಲ್ಲಿ ನೀರಿನ ಕೊರತೆಯೂ ಆತಂಕ.

Read Full Story

07:30 AM (IST) Oct 02

RSS Case ಸಚಿವ ಪ್ರಿಯಾಂಕ್ ಖರ್ಗೆ, ಮೊಹಮ್ಮದ್ ನಲಪಾಡ್ ಅರ್ಜಿಗಳ ವಿಚಾರಣೆಗೆ ಹೈಕೋರ್ಟ್ ನಕಾರ

ಆರ್‌ಎಸ್‌ಎಸ್ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಮೊಹಮ್ಮದ್ ನಲಪಾಡ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಲು ಹೈಕೋರ್ಟ್ ನಿರಾಕರಿಸಿದೆ. ಮ್ಯಾಜಿಸ್ಟ್ರೇಟ್ ಆದೇಶವನ್ನು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಶ್ನಿಸುವಂತೆ ಸೂಚಿಸಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.
Read Full Story

07:23 AM (IST) Oct 02

ವೇದಾವತಿ ನದಿಗೆ ಹರಿಸುತ್ತಿರುವ ವಾಣಿವಿಲಾಸ ಸಾಗರದ ನೀರನ್ನು ತಕ್ಷಣವೇ ನಿಲ್ಲಿಸಲು ಆಗ್ರಹ

ಇತ್ತೀಚೆಗೆ ಉತ್ತಮ ಮಳೆಯಾಗಿ ವೇದಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಹೀಗಾಗಿ ವಿವಿ ಸಾಗರ ಜಲಾಶಯದಿಂದ ನದಿಗೆ ಹರಿಸುತ್ತಿರುವ ನೀರನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ವಂದೇ ಮಾತರಂ ಜಾಗೃತಿ ವೇದಿಕೆ ಆಗ್ರಹಿಸಿದೆ. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟದ ಎಚ್ಚರಿಕೆ ನೀಡಲಾಗಿದೆ.
Read Full Story

07:13 AM (IST) Oct 02

SIR - ಚುನಾವಣಾ ಆಯೋಗದ ಮುಂದೆ ಸಿಎಂ ಧರಣಿ, ಎಫ್‌ಐಆರ್‌ಗೆ ಪಟ್ಟು ಹಿಡಿದಿರೋದಕ್ಕೆ ಅಸಲಿ ಕಾರಣವೇನು?

ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮದ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ರಾಜ್ಯ ಸರ್ಕಾರ ಚುನಾವಣಾ ಆಯೋಗವನ್ನು ಒತ್ತಾಯಿಸುತ್ತಿದೆ. ಕಾನೂನಿನ ಪ್ರಕಾರ ಚುನಾವಣಾ ಆಯೋಗ ದೂರು ನೀಡಿದರೆ ಮಾತ್ರ ಪೊಲೀಸರು ತನಿಖೆ ನಡೆಸಲು ಸಾಧ್ಯವಿರುವ ಕಾರಣ ಸರ್ಕಾರ ಈ ಪಟ್ಟು ಹಿಡಿದಿದೆ.

Read Full Story

07:13 AM (IST) Oct 02

ಖೋಟಾ ನೋಟು ಮುದ್ರಣಕ್ಕೆ 6 ತಿಂಗಳು ಪ್ರಯೋಗ - ಚಾಮರಾಜಪೇಟೆಯಲ್ಲಿ ನಕಲಿ ಹಣ ಚಲಾವಣೆಗೆ ಯತ್ನ

ಚೆನ್ನೈನಲ್ಲಿ 8 ತಿಂಗಳುಗಳ ಕಾಲ ಗೌಪ್ಯವಾಗಿ 500 ರೂ. ಮುಖಬೆಲೆಯ ಖೋಟಾ ನೋಟುಗಳನ್ನು ಮುದ್ರಿಸುತ್ತಿದ್ದ ಅಂತರರಾಜ್ಯ ಜಾಲವನ್ನು ಚಾಮರಾಜಪೇಟೆ ಪೊಲೀಸರು ಭೇದಿಸಿದ್ದಾರೆ. ಈ ದಂಧೆಯಲ್ಲಿ ತೊಡಗಿದ್ದ ತಮಿಳುನಾಡು ಮತ್ತು ತೆಲಂಗಾಣ ಮೂಲದ 7 ಜನ ಆರೋಪಿಗಳನ್ನು ಬಂಧಿಸಿ, 21 ಲಕ್ಷ ರೂ. ಮೌಲ್ಯದ ನಕಲಿ ನೋಟುಗಳನ್ನು ಜಪ್ತಿ ಮಾಡಲಾಗಿದೆ.
Read Full Story

07:11 AM (IST) Oct 02

ಮಲೇಷ್ಯಾ ಕನ್ನಡ ಸಂಘದ ಅಧಿಕೃತ ವೆಬ್‌ಸೈಟ್‌ಗೆ ಚಾಲನೆ - ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಹೆಜ್ಜೆ

ಮಲೇಷ್ಯಾದಲ್ಲಿರುವ ಎಲ್ಲಾ ಕನ್ನಡಿಗರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶದಿಂದ ಮಲೇಷ್ಯಾ ಕನ್ನಡ ಸಂಘದ (MAKASA) ಅಧಿಕೃತ ವೆಬ್‌ಸೈಟ್‌ಗೆ ಚಾಲನೆ ನೀಡಲಾಗಿದೆ. ಈ ವೆಬ್‌ಸೈಟ್ ಕನ್ನಡಿಗರಿಗೆ ಪಾಸ್‌ಪೋರ್ಟ್, ವೀಸಾ, ಉದ್ಯೋಗದ ಮಾಹಿತಿ ಜೊತೆಗೆ ಸಂಸ್ಕೃತಿ ಉಳಿಸುವ ಕಾರ್ಯ ಮಾಡಲಿದೆ. ರವಿ ಹೆಗಡೆ ಮತ್ತು ಭಾವನಾ ಅವರು ಈ ವೆಬ್‌ಸೈಟ್‌ಗೆ ಚಾಲನೆ ನೀಡಿದರು.
Read Full Story

More Trending News