ಬೆಂಗಳೂರು: ವಿಡಿಯೋ ಅಪಪ್ರಚಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಾರಿತ್ರ್ಯ ವಧೆಗೆ ನಡೆಸುತ್ತಿರುವ ಒಂದು ಸಂಚು. ಇದಕ್ಕೆ ಕಾರಣೀಭೂತರಾದವರನ್ನು ನಾವು ಬಯಲಿಗೆ ಎಳೆಯುತ್ತೇವೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲ್ನೋಟಕ್ಕೆ ಇದರ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಹೆಚ್ಚು ಮಾಹಿತಿ ಇದ್ದಂತಿದೆ. ಸಮ್ಮಿಶ್ರ ಸರ್ಕಾರ ಪತನದ ವೇಳೆ ಯಾರ ಮೇಲೆ ಸ್ಟಿಂಗ್ ನಡೆದಿತ್ತು? ಯಡಿಯೂರಪ್ಪ ಅವರೊಂದಿಗೆ ಯಾರ್ಯಾರು ಮಾತನಾಡಿದ್ದ ಆಡಿಯೋ ಹೊರಗಡೆ ಬಂದಿತ್ತು ಎಂಬುದು ಗೊತ್ತಿದೆ ಎಂದರು.
ಸಿದ್ದರಾಮಯ್ಯ ಅವರು ಈಗಾಗಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಜತೆಗೆ ನಿರ್ಬಂಧಕಾಜ್ಞೆ ತಂದಿದ್ದು, ತನಿಖೆಗೂ ದೂರು ನೀಡಿದ್ದಾರೆ. ಹೀಗಾಗಿ ನಾವು ತನಿಖೆ ನಡೆಸುತ್ತೇವೆ. ಆದರೆ ತನಿಖೆ ವಿಚಾರವನ್ನು ಸಾರ್ವಜನಿಕವಾಗಿ ಮಾತನಾಡಲು ಸಾಧ್ಯವಿಲ್ಲ. ಕಾನೂನು ಪ್ರಕಾರ ಸತ್ಯ ಹೊರಗೆ ತರುವ ಪ್ರಯತ್ನ ಮಾಡುತ್ತೇವೆ ಎಂದು ಪ್ರಿಯಾಂಕ್ ಹೇಳಿದರು.
ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಐಟಿ, ಇ.ಡಿ. ಈಗ ಸ್ಟಿಂಗ್ ಆಪರೇಷನ್ ಬಳಸಿಕೊಳ್ಳುತ್ತಿದ್ದಾರೆ. ಯಾರ ಇತಿಹಾಸ ಏನು ಎಂಬುದು ಜನರಿಗೆ ಗೊತ್ತಿದೆ. ಕುಮಾರಸ್ವಾಮಿ ಅವರ ಮಾತು ಕೇಳಿ ನಾವು ಪಕ್ಷ ನಡೆಸುತ್ತೇವಾ? ವಿಜಯೇಂದ್ರ, ಅಶೋಕ್ ಅವರು ನಮಗೆ ದೂರು ನೀಡಲಿ. ನಾವು ಸೂಕ್ತ ತನಿಖೆ ನಡೆಸುತ್ತೇವೆ, ದೂರು ನೀಡದೆ ಮಾತನಾಡುವುದು ಬೇಡ ಎಂದರು.
10:22 AM (IST) Oct 15
09:30 AM (IST) Oct 15
ನಕಲಿ ದಾಖಲೆಗಳೊಂದಿಗೆ ಅಕ್ರಮವಾಗಿ ಹೊಂದಿರುವ ಆಸ್ತಿಗಳ ಕುರಿತು ನಿಖರ ಮಾಹಿತಿ ನೀಡುವ ಸಾರ್ವಜನಿಕರಿಗೆ ಇದೇ ಮೊದಲ ಬಾರಿಗೆ ಬಂಪರ್ ನಗದು ಬಹುಮಾನ ಘೋಷಿಸಿದೆ. ಬಿಡಿಎ ಅಧಿಕೃತ ಆದೇಶ ಹೊರಡಿಸಿದೆ.
09:09 AM (IST) Oct 15
09:03 AM (IST) Oct 15
ಸಾಗರ ಜಂಬಗಾರು ರೈಲ್ವೆ ನಿಲ್ದಾಣಕ್ಕೆ ಮರುನಾಮಕರಣ ಮಾಡುವಂತೆ ಒತ್ತಾಯಿಸಿ ಕೇಂದ್ರ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗಿದೆ. ಈ ಹಿಂದೆಯೂ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದ್ದರೂ ಪ್ರಕ್ರಿಯೆ ಪೂರ್ಣಗೊಂಡಿಲ್ಲ.
08:49 AM (IST) Oct 15
ಪ್ರಸ್ತಾವಿತ ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲನ್ನು ಕರ್ನಾಟಕದ ಎರಡು ಪ್ರತ್ಯೇಕ ಮಾರ್ಗಗಳಲ್ಲಿ ಓಡಿಸಲು ನೈಋತ್ಯ ರೈಲ್ವೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕುರಿತು ರೈಲ್ವೆ ಮಂಡಳಿಯೊಂದಿಗೆ ಚರ್ಚಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
08:20 AM (IST) Oct 15
ಕರ್ನಾಟಕದಲ್ಲಿ 25-30 ಲಕ್ಷ ಅಕ್ರಮ ಬಾಂಗ್ಲಾ ವಲಸಿಗರಿದ್ದು, ಕಾಂಗ್ರೆಸ್ ಅವರನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ ಎಂದು ಡಾ.ಸಿ.ಎನ್.ಅಶ್ವತ್ಥನಾರಾಯಣ ಆರೋಪಿಸಿದ್ದಾರೆ. ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ವಿರೋಧಿಸುತ್ತಿರುವ ಕಾಂಗ್ರೆಸ್, ನಕಲಿ ದಾಖಲೆಗಳ ಮೂಲಕ ಅಕ್ರಮ ವಲಸಿಗರಿಗೆ ಬೆಂಬಲ?
08:18 AM (IST) Oct 15
ಕುಷ್ಟಗಿಯ ಬಿಇಒ ಕಚೇರಿಯಲ್ಲಿ ನಡೆದಿದೆ ಎನ್ನಲಾದ ₹70 ಲಕ್ಷಕ್ಕೂ ಅಧಿಕ ಸರ್ಕಾರಿ ಹಣ ದುರುಪಯೋಗದ ಆರೋಪದ ತನಿಖೆ ಚುರುಕುಗೊಂಡಿದೆ. ವಿಶೇಷ ಪೊಲೀಸ್ ತಂಡವು ಕಚೇರಿಯ ಮೇಲೆ ದಾಳಿ ನಡೆಸಿ ಮಹತ್ವದ ಕಡತಗಳು ಹಾಗೂ ಕಂಪ್ಯೂಟರ್ಗಳನ್ನು ವಶಕ್ಕೆ ಪಡೆದಿದೆ.
08:06 AM (IST) Oct 15
ಬಿಡಿಎನಲ್ಲಿ ವಲಯ ಆಯುಕ್ತರು ಎಂಬ ಹೊಸ ಹುದ್ದೆಗಳನ್ನು ಸೃಷ್ಟಿಸುವ ಪ್ರಸ್ತಾವನೆಯನ್ನು ನಗರಾಭಿವೃದ್ಧಿ ಇಲಾಖೆ ತಿರಸ್ಕರಿಸಿದೆ. ಶಿವರಾಮ ಕಾರಂತ ಬಡಾವಣೆ ಕಾಮಗಾರಿ ಮುಗಿದರೂ ವಿಶೇಷ ಭೂಸ್ವಾಧೀನಾಧಿಕಾರಿಗಳನ್ನು ಉಳಿಸಿಕೊಳ್ಳಲು ಈ ಹುದ್ದೆ ಸೃಷ್ಟಿಗೆ ಯತ್ನಿಸಲಾಗಿತ್ತು.
07:57 AM (IST) Oct 15
ದುರ್ಬಲ ಮುಂಗಾರಿನ ಬಳಿಕ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಹಿಂಗಾರು ಮಳೆ ಪ್ರವೇಶವಾಗಿದೆ. ಅಕ್ಟೋಬರ್ 18ರವರೆಗೆ ಗುಡುಗು ಸಹಿತ ಜೋರು ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
07:49 AM (IST) Oct 15
07:32 AM (IST) Oct 15
07:24 AM (IST) Oct 15
ಮುಂಗಾರು ಮಳೆ ಇಲ್ಲದೆ ಆವರಿಸಿರುವ ಬರದ ಛಾಯೆ ಕೃಷಿ ಮಾತ್ರವಲ್ಲದೆ ಅಬಕಾರಿ ಇಲಾಖೆಯ ಮೇಲೂ ಗಂಭೀರ ಪರಿಣಾಮ ಬೀರಿದೆ. ಹೂವಿನಹಡಗಲಿ ತಾಲೂಕಿನಲ್ಲಿ ಕೂಲಿ ಕಾರ್ಮಿಕರ ವಲಸೆ ಮತ್ತು ಹಣದ ಕೊರತೆಯಿಂದ ಮದ್ಯ ಮಾರಾಟ ಕುಸಿದಿದೆ.